ಆ್ಯಪ್ನಗರ

Vikrant Rona: ಯಾವ ಹಾಲಿವುಡ್ ಚಿತ್ರಕ್ಕೂ ‘ವಿಕ್ರಾಂತ್ ರೋಣ’ ಕಮ್ಮಿ ಇಲ್ಲ: ಸುದೀಪ್ ಅಭಿನಯಕ್ಕೆ ಸರಿಸಾಟಿ ಇಲ್ಲ!

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಇಂದು ಬಿಡುಗಡೆಯಾಗಿದೆ. ಪ್ರಪಂಚದಾದ್ಯಂತ ‘ವಿಕ್ರಾಂತ್ ರೋಣ’ ರಿಲೀಸ್ ಆಗಿದೆ. ಇಂದು ಬೆಳಗ್ಗಿನಿಂದಲೇ ‘ವಿಕ್ರಾಂತ್ ರೋಣ’ ಶೋಗಳು ಶುರುವಾಗಿವೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರ ಟ್ವಿಟ್ಟರ್ ರಿವ್ಯೂ ಇಲ್ಲಿದೆ ನೋಡಿ…

Authored byಹರ್ಷಿತಾ ಎನ್ | Vijaya Karnataka Web 28 Jul 2022, 3:32 pm

ಹೈಲೈಟ್ಸ್‌:

  • ‘ವಿಕ್ರಾಂತ್ ರೋಣ’ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ
  • ಇಂದು ಬಿಡುಗಡೆಯಾಗಿರುವ ‘ವಿಕ್ರಾಂತ್ ರೋಣ’ ಸಿನಿಮಾ ಹೇಗಿದೆ?
  • ಇಲ್ಲಿದೆ ನೋಡಿ ವೀಕ್ಷಕರ ಟ್ವಿಟ್ಟರ್ ವಿಮರ್ಶೆಗಳು

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kannada actor kiccha sudeep starrer vikrant rona twitter review
Vikrant Rona: ಯಾವ ಹಾಲಿವುಡ್ ಚಿತ್ರಕ್ಕೂ ‘ವಿಕ್ರಾಂತ್ ರೋಣ’ ಕಮ್ಮಿ ಇಲ್ಲ: ಸುದೀಪ್ ಅಭಿನಯಕ್ಕೆ ಸರಿಸಾಟಿ ಇಲ್ಲ!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಇಂದು ಬಿಡುಗಡೆಯಾಗಿದೆ. ಪ್ರಪಂಚದಾದ್ಯಂತ ‘ವಿಕ್ರಾಂತ್ ರೋಣ’ ರಿಲೀಸ್ ಆಗಿದೆ. ಇಂದು ಬೆಳಗ್ಗಿನಿಂದಲೇ ‘ವಿಕ್ರಾಂತ್ ರೋಣ’ ಶೋಗಳು ಶುರುವಾಗಿವೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರ ಟ್ವಿಟ್ಟರ್ ರಿವ್ಯೂ ಇಲ್ಲಿದೆ ನೋಡಿ…
ಪ್ಯಾನ್ ವರ್ಲ್ಡ್ ಸಿನಿಮಾ
‘‘ವಿಕ್ರಾಂತ್ ರೋಣ’ ಸಿನಿಮಾ ವೀಕ್ಷಿಸಿದ್ದು ಆಯ್ತು. ಇದು ಪ್ಯಾನ್ ಇಂಡಿಯಾ ಅಲ್ಲ.. ಪ್ಯಾನ್ ವರ್ಲ್ಡ್ ಸಿನಿಮಾ. ಕನ್ನಡ ಚಿತ್ರರಂಗ ಈ ಮಟ್ಟಕ್ಕೆ ಬೆಳೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಮೇಲೆ ನಮಗೆ ಹೆಮ್ಮೆ ಆಗುತ್ತಿದೆ. ‘ವಿಕ್ರಾಂತ್ ರೋಣ’ ಸಿನಿಮಾದ ವಿಶುವಲ್ಸ್ ಯಾವ ಹಾಲಿವುಡ್ ಚಿತ್ರಕ್ಕೂ ಕಮ್ಮಿ ಇಲ್ಲ’’


ಮಸ್ತ್ ಇಂಟರ್ವಲ್‌
‘’ಇಂಟರ್‌ವರ್ಲ್‌ ಬೆಂಕಿ. ಸುದೀಪ್ ಎಂಟ್ರಿ, ಸ್ವಾಗ್, ಒನ್‌ ಲೈನರ್‌ಗಳು, ವಿಶುವಲ್ಸ್, ಚಿಂದಿ ಚಿಂದಿ’’


ಚಪ್ಪಾಳೆ ತಟ್ಟಲೇಬೇಕಾದ ಸಿನಿಮಾ
‘’ಚಪ್ಪಾಳೆ ಗಿಟ್ಟಿಸಿಕೊಳ್ಳುವ ಅರ್ಹತೆ ಕಿಚ್ಚ ಸುದೀಪ್ ಅವರ ನಟನೆಗಿದೆ. ಮೊದಲಾರ್ಧ ಫೆಂಟ್ಯಾಸ್ಟಿಕ್ ಆಗಿದೆ. ದ್ವಿತೀಯಾರ್ಥವೂ ಅದ್ಭುತವಾಗಿದೆ’’


ಹಾಲಿವುಡ್ ರೇಂಜಿಗಿದೆ
‘’ಚಿತ್ರದ ವಿಶುವಲ್ಸ್ ಹಾಲಿವುಡ್ ರೇಂಜಿಗಿದೆ. ಇಡೀ ತಂಡಕ್ಕೆ ಅಭಿನಂದನೆಗಳು’’

ಎಲ್ಲವೂ ಪರ್ಫೆಕ್ಟ್
‘’ಒಂದೇ ಪದದಲ್ಲಿ ಹೇಳಬೇಕು ಅಂದ್ರೆ ಸ್ಯಾಂಡಲ್‌ವುಡ್‌ನ ಹೆಮ್ಮೆ - ಕಿಚ್ಚ ಸುದೀಪ್. ಇದು ಹಾಲಿವುಡ್ ರೇಂಜ್‌ನ ಚಿತ್ರ. ಕಥೆ, ವಿಶುವಲ್ಸ್, ಪರ್ಫಾಮೆನ್ಸ್ ಎಲ್ಲವೂ ಪರ್ಫೆಕ್ಟ್ ಆಗಿದೆ. ಮತ್ತೆ ಸಂಜೆಯ ಶೋಗೆ ಹೋಗುತ್ತಿದ್ದೇನೆ’’


ಬಾಲಿವುಡ್‌ಗೆ ಗುಡ್‌ಬೈ
‘’ಬಾಲಿವುಡ್‌ಗೆ ಬೈ ಬೈ. ಕನ್ನಡ ಚಿತ್ರರಂಗ ಪ್ರತಿ ಬಾರಿಯೂ ಅತ್ಯುತ್ತಮವಾದುದ್ದನ್ನೇ ನೀಡುತ್ತಿದೆ’’


ತೃಪ್ತಿ ಕೊಡುವ ಸಿನಿಮಾ
‘’ಇಂತಹ ಕಂಟೆಂಟ್ ಕನ್ನಡ ಚಿತ್ರರಂಗಕ್ಕೆ ಬೇಕಿತ್ತು. ಇಂತಹ ಸಬ್ಜೆಕ್ಟ್‌ನ ಆಯ್ದುಕೊಂಡ ಸುದೀಪ್ ಅವರಿಗೆ ಧನ್ಯವಾದ. ಸಿನಿಮಾ ನೋಡಿ ನಿಜಕ್ಕೂ ತೃಪ್ತಿಯಾಯ್ತು’’


ಮನಗೆಲ್ಲುವ ಕಿಚ್ಚ ಸುದೀಪ್
‘’ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಎಲ್ಲರ ಮನಗೆಲ್ಲುತ್ತಾರೆ. ಚಿತ್ರ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಲವ್ ಆಂಗಲ್ ಸುಂದರವಾಗಿದೆ. ಬಿಜಿಎಂ ಚೆನ್ನಾಗಿದೆ’’

ಇಷ್ಟೊಂದು ಎಕ್ಸ್‌ಪೆಕ್ಟ್ ಮಾಡಿರಲಿಲ್ಲ
‘’ಇಷ್ಟೊಂದು ಅದ್ಭುತವಾದ ವಿಶುವಲ್ಸ್ ಮತ್ತು ಚಿತ್ರಕಥೆಯನ್ನು ನಿರೀಕ್ಷಿಸಿರಲಿಲ್ಲ. ಚಿತ್ರಮಂದಿರದಲ್ಲೇ ಚಿತ್ರವನ್ನು ವೀಕ್ಷಿಸಿ. ಕಿಚ್ಚ ಸುದೀಪ್ ಅವರ ಸ್ಟೈಲ್ ಚೆನ್ನಾಗಿದೆ. ಇದು ಬಿಗ್ಗೆಸ್ಟ್ ಹಿಟ್’’


ತಾಂತ್ರಿಕವಾಗಿ ಅದ್ಭುತ ಸಿನಿಮಾ
‘’ತಾಂತ್ರಿಕವಾಗಿ ಇದು ಭಾರತದಲ್ಲೇ ಅದ್ಭುತ ಸಿನಿಮಾ. ವಿಶುವಲ್ಸ್, ಬಿಜಿಎಂ, ನಟರ ಅಭಿನಯ ಚೆನ್ನಾಗಿದೆ. ಕಿಚ್ಚ ಸುದೀಪ್ ಅವರಿಗೆ ಉತ್ತಮ ಪಾತ್ರ ಸಿಕ್ಕಿದೆ. ನಿರೂಪ್ ಭಂಡಾರಿ ಸರ್‌ಪ್ರೈಸ್ ಪ್ಯಾಕೇಜ್’’


Fill this survey and get a chance to win an attractive gift
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌