ಆ್ಯಪ್ನಗರ

ಬಯಸದಿದ್ದರೂ ಕೂಡ ಪರಭಾಷೆಯಿಂದ ಸಾಮ್ರಾಜ್ಞಿಗೆ ಒಲಿದು ಬಂತು ಅವಕಾಶ!

ಕನ್ನಡದ ಸಾಕಷ್ಟು ಪ್ರತಿಭಾವಂತರು ಪಕ್ಕದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆ ಸಾಲಿಗೆ ಮತ್ತೊಬ್ಬ ನಟಿ ಹಾಗೂ ತಂತ್ರಜ್ಞೆ ಸಾಮ್ರಾಜ್ಞಿ ಸಹ ಸೇರಿಕೊಂಡಿದ್ದಾರೆ. ಸಾಮ್ರಾಜ್ಞಿ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ

Vijaya Karnataka Web 28 Sep 2020, 3:55 pm
(ಹರೀಶ್‌ ಬಸವರಾಜ್‌)
Vijaya Karnataka Web kannada actress samrajni tamil movie life
ಬಯಸದಿದ್ದರೂ ಕೂಡ ಪರಭಾಷೆಯಿಂದ ಸಾಮ್ರಾಜ್ಞಿಗೆ ಒಲಿದು ಬಂತು ಅವಕಾಶ!


ಸ್ಯಾಂಡಲ್‌ವುಡ್‌ನ ಅನೇಕ ತಂತ್ರಜ್ಞರು, ನಟ ನಟಿಯರು ಈಗಾಗಲೇ ತಮಿಳು, ತೆಲುಗು ಚಿತ್ರರಂಗಗಳಲ್ಲಿ ಗುರುತಿಸಿಕೊಂಡು ಅಲ್ಲಿಯೇ ನೆಲೆಯೂರಿದ್ದಾರೆ. ಇಂಥವರು ನಿಧಾನವಾಗಿ ಕನ್ನಡಿಗರ ಗಮನಕ್ಕೆ ಬಂದ ಉದಾಹರಣೆಗಳು ಹಲವು ಇವೆ. ಇಂತಹ ವಲಸಿಗ ಪ್ರತಿಭಾವಂತರ ಸಾಲಿಗೆ ನಟಿ ಹಾಗೂ ತಂತ್ರಜ್ಞೆ ಸಾಮ್ರಾಜ್ಞಿ ಕೂಡ ಸೇರುತ್ತಾರೆ.

'ಮುಗಿಲು' ಸೀರಿಯಲ್‌ನಲ್ಲಿ ನಟಿಸಿದ್ದ ಸಾಮ್ರಾಜ್ಞಿ
ಅಪ್ಪಟ ಕನ್ನಡದ ಹುಡುಗಿ ಸಾಮ್ರಾಜ್ಞಿ ತಮಿಳಿನ ಸ್ಟಾರ್‌ ನಿರ್ದೇಶಕ ಗೌತಮ್‌ ವಾಸುದೇವ್‌ ಮೆನನ್‌ ತಂಡದಲ್ಲಿ ಸಹ ನಿರ್ದೇಶಕಿಯಾಗಿ ಮತ್ತು ಅವರ ಸಿನಿಮಾಗಳಲ್ಲಿ ನಟಿಯಾಗಿ ಕೆಲಸ ಮಾಡಿದ್ದಾರೆ. ಇವರು ಹತ್ತು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ 'ಮುಗಿಲು' ಸೀರಿಯಲ್‌ನಲ್ಲಿ ನಟಿಸಿದ್ದರು. ಅದಾದ ಮೇಲೆ ಚೆನ್ನೈನ ಎಲ್‌.ವಿ ಪ್ರಸಾದ್‌ ಇನ್‌ಸ್ಟಿಟ್ಯೂಟ್‌ನಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮೋ ಪದವಿಯನ್ನು ಚಿನ್ನದ ಪದಕದೊಂದಿಗೆ ಮುಗಿಸಿದ್ದಾರೆ. ಈ ಸಮಯದಲ್ಲಿ ಅವರು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದು, ಅದರಲ್ಲಿ ಕಮಲ್‌ ಹಾಸನ್‌ ಸಹೋದರ ಚಾರು ಹಾಸನ್‌ ನಟಿಸಿದ್ದರು.

ಚೆನ್ನೈನಲ್ಲಿ ಡಿಪ್ಲೊಮೋ ಮುಗಿಸಿದ ಸಾಮ್ರಾಜ್ಞಿ
'ನಾನು ಮೂಲತಃ ಕನ್ನಡದ ಹುಡುಗಿ. ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಬೇಕು ಎಂಬ ಆಸಕ್ತಿಯಿಂದ ಚೆನ್ನೈನಲ್ಲಿ ಡಿಪ್ಲೊಮೋ ಮುಗಿಸಿದೆ. ಆ ಸಮಯದಲ್ಲಿ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕ ಗೌತಮ್‌ ಮೆನನ್‌ ನನ್ನ ಕಿರುಚಿತ್ರ ನೋಡಿ ಬಂದು ಕಾಣುವಂತೆ ಹೇಳಿದರು. ಅವರನ್ನು ಭೇಟಿಯಾದಾಗ, ಅವರು ಧನುಷ್‌ಗಾಗಿ ನಿರ್ದೇಶನ ಮಾಡುತ್ತಿದ್ದ 'ಎನೈ ನೋಕಿ ಪಾಯಮ್‌ ತೋಟಾ' ಎಂಬ ಸಿನಿಮಾದಲ್ಲಿ ಕೆಲಸ ಮಾಡುವಂತೆ ಹೇಳಿದರು. ಅಲ್ಲಿಂದ ನನ್ನ ಸಹ ನಿರ್ದೇಶಕಿಯ ಕೆಲಸ ಆರಂಭವಾಯಿತು' ಎನ್ನುತ್ತಾರೆ ಸಾಮ್ರಾಜ್ಞಿ.

ನಿರ್ದೇಶನ ಮಾಡುತ್ತಿದ್ದ ಸಾಮ್ರಾಜ್ಞಿ ನಟಿಯಾಗಿಬಿಟ್ಟರು!
ಧನುಷ್‌ ಸಿನಿಮಾಗೆ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸಹ ನಟಿಯೊಬ್ಬರು ಸರಿಯಾಗಿ ನಟಿಸದ ಕಾರಣ ನಾನೇ ನಟಿಸಬೇಕಾಯಿತು. ಸಿಂಬು ನಟನೆಯ 'ಅಚ್ಚಮ ಎಂಬದು ಮದಮಯ್ಯಾಡ' ಸಿನಿಮಾದಲ್ಲಿಯೂ ನಟಿಯೊಬ್ಬರ ಕಾಸ್ಟ್ಯೂಮ್‌ ಆಯ್ಕೆ ಮಾಡುತ್ತಿದ್ದೆ. ಆಗ ಆ ಪಾತ್ರವನ್ನು ನೀನೇ ಮಾಡು ಎಂದು ನಿರ್ದೇಶಕ ಗೌತಮ್‌ ಹೇಳಿದರು. ಹೀಗೆ ಎರಡು ಸಿನಿಮಾಗಳಲ್ಲಿ ಆಕಸ್ಮಿಕವಾಗಿ ನಟಿಸಬೇಕಾಯಿತು. ನಾನು ನಟಿಯಾಗಬೇಕು ಎಂದುಕೊಂಡವಳಲ್ಲ. ನಿರ್ದೇಶನ ತಂಡದಲ್ಲಿ ನಾನು ಕೆಲಸ ಮಾಡಲು ಹೆಚ್ಚು ಇಷ್ಟಪಡುತ್ತೇನೆ. ದಿನ ಕಳೆದಂತೆ ನನಗೆ ನಟನೆಯಲ್ಲಿ ಆಸಕ್ತಿ ಬಂತು. ಒಳ್ಳೊಳ್ಳೆ ಟೀಮ್‌ ಜತೆ ಕೆಲಸ ಮಾಡಿದ ಅನುಭವ ಇದೆ. ಬರಿ ನಟನೆ ಮಾಡುವುದಕ್ಕಿಂತಲೂ ಕಥೆಯ ಜತೆ ಟ್ರಾವೆಲ್‌ ಮಾಡುವಂತಹ ಪಾತ್ರಗಳು ನನಗಿಷ್ಟ' ಎಂದಿದ್ದಾರೆ ಸಾಮ್ರಾಜ್ಞಿ.

Also Read-ಬೇರೆಯವರ ಪ್ಲೇಟ್ ತೊಳೆದು, ಟಾಯ್ಲೆಟ್ ಕ್ಲೀನ್ ಮಾಡೋಕೆ ಬಿಗ್ ಬಾಸ್‌ಗೆ ಹೋಗಲ್ಲ: ಲಕ್ಷ್ಮೀ ಮೆನನ್!

ಚೈತನ್ಯ ಗರಡಿಯ ಹುಡುಗಿ

ನಿರ್ದೇಶಕ ಕೆ ಎಂ ಚೈತನ್ಯ ಅವರ 'ಮುಗಿಲು' ಸೀರಿಯಲ್‌ನಲ್ಲಿನಟಿಸಿದ ಮೇಲೆ ಸಾಮ್ರಾಜ್ಞಿಯು ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದರು. ಆಮೇಲೆ ಮತ್ತೆ ಅವರ ಸಿನಿಮಾಗಳಾದ 'ಆಕೆ', 'ಅಮ್ಮಾ ಐ ಲವ್‌ ಯೂ' 'ಆದ್ಯಾ' ಸಿನಿಮಾಗಳಲ್ಲಿಕೆಲಸ ಮಾಡಿದ್ದಾರೆ. 'ಆಕೆ' ಸಿನಿಮಾದಲ್ಲಿ ನಟಿಸಿರುವ ಅವರು ಮಂಸೋರೆಯವರ 'ಆ್ಯಕ್ಟ್ 1978' ಸಿನಿಮಾದಲ್ಲಿಒಂದು ಪ್ರಮುಖ ಪಾತ್ರದಲ್ಲಿದ್ದಾರೆ. 'ಚೈತನ್ಯ ಜತೆ ಕೆಲಸ ಮಾಡಿದ್ದರಿಂದ ನನಗೆ ಶಿಸ್ತು ಮತ್ತು ಕಮಿಟ್‌ಮೆಂಟ್‌ ಅಭ್ಯಾಸವಾಗಿದೆ. ಅವರಿಂದ ಸಾಕಷ್ಟನ್ನು ಕಲಿತಿದ್ದೇನೆ' ಎಂದಿರುವ ಸಾಮ್ರಾಜ್ಞಿ, ಮಲಯಾಳಂನಲ್ಲಿಇತ್ತೀಚೆಗೆ ರಿಲೀಸ್‌ ಆದ 'ಮೇನಕಾ' ಎಂಬ ವೆಬ್‌ ಸಿರೀಸ್‌ನಲ್ಲಿ ಮುಖ್ಯ ಪಾತ್ರವೊಂದರಲ್ಲಿನಟಿಸಿದ್ದಾರೆ. ಸದ್ಯಕ್ಕೆ ಅವರು ಶರತ್‌ಕುಮಾರ್‌ ಮುಖ್ಯ ಭೂಮಿಕೆಯಲ್ಲಿರುವ ಕಾದಂಬರಿ ಆಧರಿತ ವೆಬ್‌ ಸಿರೀಸ್‌ ಒಂದರ ನಿರ್ದೇಶನ ತಂಡದಲ್ಲಿಕೆಲಸ ಮಾಡುತ್ತಿದ್ದು, ಇದರಲ್ಲಿ ಪ್ರಮುಖ ಪಾತ್ರವೊಂದರಲ್ಲೂ ನಟಿಸಿದ್ದಾರೆ.

Also Read-ಲೈಂಗಿಕ ದೌರ್ಜನ್ಯಕ್ಕೆ ಪುಷ್ಟಿ ನೀಡುತ್ತದೆ ಧನುಷ್ 'ರಾಂಝಾ' ಸಿನಿಮಾ: ಅಭಯ್ ಡಿಯೋಲ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌