ಆ್ಯಪ್ನಗರ

ನಾನು ತುಂಬಾ ನರಳುತ್ತಿದ್ದೇನೆ, ಸಹಾಯ ಮಾಡಿ: ಅಭಿಮಾನಿಗಳಲ್ಲಿ ಬೇಡಿಕೊಂಡ ವಿಜಯಲಕ್ಷ್ಮಿ

ನಟಿ ವಿಜಯಲಕ್ಷ್ಮಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ವಿಜಯಲಕ್ಷ್ಮಿ ‘’ನಾನು ಬದುಕುತ್ತೀನಾ ಅಂತಲೇ ನನಗೆ ನಂಬಿಕೆ ಇಲ್ಲ. ನನ್ನ ಆರೋಗ್ಯ ತುಂಬಾ ಕೆಟ್ಟಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ’’ ಅಂತ ಅಭಿಮಾನಿಗಳಲ್ಲಿ ವಿಡಿಯೋ ಮೂಲಕ ನಟಿ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.

Vijaya Karnataka Web 17 Sep 2021, 3:23 pm

ಹೈಲೈಟ್ಸ್‌:

  • ನಟಿ ವಿಜಯಲಕ್ಷ್ಮಿಗೆ ಕೋವಿಡ್-19 ಪಾಸಿಟಿವ್
  • ‘’ನನ್ನ ಆರೋಗ್ಯ ತುಂಬಾ ಕೆಟ್ಟಿದೆ’’ ಎಂದ ವಿಜಯಲಕ್ಷ್ಮಿ
  • ‘’ನಾನು ಬದುಕುತ್ತೀನಾ ಅಂತಲೇ ನಂಬಿಕೆ ಇಲ್ಲ’’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ ವಿಜಯಲಕ್ಷ್ಮಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web vijaya lakshmi
ಕನ್ನಡ, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಒಂದ್ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ವಿಜಯಲಕ್ಷ್ಮಿ ಇದೀಗ ಸಂಕಷ್ಟದಲ್ಲಿದ್ದಾರೆ. ನಟಿ ವಿಜಯಲಕ್ಷ್ಮಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ವಿಜಯಲಕ್ಷ್ಮಿ ‘’ನಾನು ಬದುಕುತ್ತೀನಾ ಅಂತಲೇ ನನಗೆ ನಂಬಿಕೆ ಇಲ್ಲ. ನನ್ನ ಆರೋಗ್ಯ ತುಂಬಾ ಕೆಟ್ಟಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ’’ ಅಂತ ಅಭಿಮಾನಿಗಳಲ್ಲಿ ವಿಡಿಯೋ ಮೂಲಕ ನಟಿ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.
ತುರ್ತು ವಿಡಿಯೋ ಸಂದೇಶ ಕೊಟ್ಟ ನಟಿ ವಿಜಯಲಕ್ಷ್ಮಿ
ಮಹಾಮಾರಿ ಕೋವಿಡ್-19ನಿಂದ ಬಳಲುತ್ತಿರುವ ನಟಿ ವಿಜಯಲಕ್ಷ್ಮಿ ಕರ್ನಾಟಕದ ಅಭಿಮಾನಿಗಳಿಗಾಗಿ ತುರ್ತು ವಿಡಿಯೋ ಮಾಡಿದ್ದಾರೆ. ‘’ಎಮರ್ಜೆನ್ಸಿಯಾಗಿ ನನಗೆ ಸಹಾಯ ಬೇಕಾಗಿದೆ. ಐದು ದಿನಗಳಿಂದ ನಾನು ತುಂಬಾ ನರಳುತ್ತೇನೆ’’ ಅಂತ ವಿಡಿಯೋದಲ್ಲಿ ನಟಿ ವಿಜಯಲಕ್ಷ್ಮಿ ಹೇಳಿದ್ದಾರೆ.

ಸಹೋದರಿ ಉಷಾ ಆರೋಗ್ಯ ಸ್ಥಿತಿ ಗಂಭೀರ: ಸುಮಲತಾಗೆ ವಿಡಿಯೋ ತಲುಪಿಸಿ ಎಂದು ಕೇಳಿಕೊಂಡ ವಿಜಯಲಕ್ಷ್ಮೀ
‘’ನನಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ಎಮರ್ಜೆನ್ಸಿಯಾಗಿ ನನಗೆ ಸಹಾಯ ಬೇಕಾಗಿದೆ. ಬೆಂಗಳೂರಿನಲ್ಲಿ ನಮಗೆ ಉಳಿದುಕೊಳ್ಳಲು ಒಂದು ಮನೆ ಇಲ್ಲ ಅಂತ ನಾನು ಹೇಳುತ್ತಲೇ ಬಂದಿದ್ದೆ. ಆದರೆ, ಯಾರೂ ಅದನ್ನ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಇದೀಗ ನಮ್ಮ ಸ್ಥಿತಿ ಕ್ರಿಟಿಕಲ್ ಆಗಿದೆ. ನನಗೆ ಐಸೊಲೇಷನ್‌ನಲ್ಲಿಟ್ಟು ಟ್ರೀಟ್‌ಮೆಂಟ್ ಮಾಡುವಾಗ ನನ್ನ ತಾಯಿ ಹಾಗೂ ತಂಗಿಯನ್ನ ಎಲ್ಲಿ ಇರಿಸೋದು ಅಂತ ಗೊತ್ತಾಗುತ್ತಿಲ್ಲ. ನಮಗೆ ಇನ್ನೂ ಒಂದು ಮನೆ ಇಲ್ಲ. ಫ್ಯಾನ್ಸ್‌ಗೆ ನಾನು ಕಾಲಿಗೆ ಬಿದ್ದು ಕೇಳಿಕೊಳ್ತೀನಿ. ನಾನು ಬದುಕುತ್ತೀನಾ ಅಂತಲೇ ನನಗೆ ನಂಬಿಕೆ ಇಲ್ಲ. ತುಂಬಾ ಒತ್ತಡ ಆಗುತ್ತಿದೆ. ನನ್ನ ಆರೋಗ್ಯ ತುಂಬಾ ಕೆಟ್ಟಿದೆ. ಮನೆಗಾಗಿ ಯಾರಾದರೂ ಸಹಾಯ ಮಾಡಿ’’

ಚಪ್ಪಲಿಯಲ್ಲಿ ಹೊಡೆದ ವಿವಾದ: ನಟ ಜಗ್ಗೇಶ್ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ವಿಜಯಲಕ್ಷ್ಮೀ
‘’ನಾನು ಐದು ದಿನಗಳಿಂದ ತುಂಬಾ ನರಳುತ್ತಿದ್ದೇನೆ. ಕಲಾವಿದರ ಸಂಘಕ್ಕೆ ನಾನು ಮನವಿ ಮಾಡುತ್ತಲೇ ಇದ್ದೇನೆ. ಆದರೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಯಾರಾದರೂ ಅಭಿಮಾನಿಗಳು ಸಹಾಯ ಮಾಡಿ. ನಿಮ್ಮ ಮನೆ ಯಾವುದಾದರೂ ಖಾಲಿ ಇದ್ದಲ್ಲಿ ನಮ್ಮ ತಾಯಿ ಮತ್ತು ಅಕ್ಕ ಉಳಿದುಕೊಳ್ಳಲು ನೆರವು ನೀಡಿ. ನನ್ನ ತಾಯಿಗೆ ವಯಸ್ಸಾಗಿದೆ. ಅಕ್ಕನಿಗೆ ಪ್ಯಾರಾಲಿಸಿಸ್ ಆಗಿ ಹಾಸಿಗೆ ಹಿಡಿದಿದ್ದಾರೆ’’ ಎಂದು ವಿಡಿಯೋದಲ್ಲಿ ನಟಿ ವಿಜಯಲಕ್ಷ್ಮಿ ಬೇಡಿಕೊಂಡಿದ್ದಾರೆ.

'ನಿಮ್ಮ ಮಗು ಮತ್ತೆ ಹುಟ್ಟಿದೆ ಅಂದ್ಕೊಂಡು ನನಗೆ ಆಶೀರ್ವದಿಸಿ' ಎಂದ ವಿಜಯಲಕ್ಷ್ಮಿ!
‘‘ನನ್ನನ್ನ ಕೊಂದರು ಎಂದು ತಿಳಿದುಕೊಳ್ಳಿ’’
‘’ನಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಕಲಾವಿದರ ಸಂಘದಲ್ಲಿ ನನಗೆ ಸಹಾಯ ಮಾಡುತ್ತಿಲ್ಲ. ಒಂದು ವೇಳೆ ನನಗೆ ಏನಾದರೂ ಹೆಚ್ಚು ಕಮ್ಮಿಯಾದರೆ, ಎಲ್ಲರೂ ಸೇರಿ ನನ್ನನ್ನ ಕೊಂದರು ಎಂದು ತಿಳಿದುಕೊಳ್ಳಿ’’ ಎಂದು ವಿಜಯಲಕ್ಷ್ಮಿ ಮತ್ತೊಂದು ವಿಡಿಯೋದಲ್ಲಿ ಹೇಳಿದ್ದಾರೆ.

ವಿಜಯಲಕ್ಷ್ಮಿ ಚಿತ್ರಗಳು
‘ನಾಗಮಂಡಲ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ವಿಜಯಲಕ್ಷ್ಮಿ, ‘ಜೋಡಿಹಕ್ಕಿ’, ‘ಭೂಮಿ ತಾಯಿಯ ಚೊಚ್ಚಲ ಮಗ’, ‘ಮಾತಿನ ಮಲ್ಲ’, ‘ಸ್ವಸ್ತಿಕ್’, ‘ಹಬ್ಬ’, ‘ಸೂರ್ಯವಂಶ’ ಮುಂತಾದ ಅನೇಕ ಕನ್ನಡ ಚಿತ್ರಗಳಲ್ಲಿ ವಿಜಯಲಕ್ಷ್ಮಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ‘ಫ್ರೆಂಡ್ಸ್’, ‘ರಾಮಚಂದ್ರ’, ‘ಮಿಲಿಟರಿ’, ‘ಯೆಸ್ ಮೇಡಮ್’, ‘ಬಾಸ್ ಎಂಗಿರ ಭಾಸ್ಕರನ್’ ಮುಂತಾದ ಚಿತ್ರಗಳಲ್ಲಿ ಮಿಂಚಿದ್ದಾರೆ. ತೆಲುಗಿನ ‘ಹನುಮಾನ್ ಜಂಕ್ಷನ್’ ಚಿತ್ರದಲ್ಲೂ ವಿಜಯಲಕ್ಷ್ಮಿ ನಟಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌