ಆ್ಯಪ್ನಗರ

'ಶ್ರೀಮನ್ನಾರಾಯಣ' ಎಫೆಕ್ಟ್! 'ಆ ಹಿಂದಿ' ಚಿತ್ರವನ್ನು ಬ್ಯಾನ್ ಮಾಡುವಂತೆ ಕನ್ನಡಿಗರಿಂದ ಕರೆ!!

'ಅವನೇ ಶ್ರೀಮನ್ನಾರಾಯಣ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆದರೆ, ಗಡಿ ವಿವಾದದ ನೆಪದಲ್ಲಿ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ 'ಶ್ರೀಮನ್ನಾರಾಯಣ' ಪ್ರದರ್ಶನಕ್ಕೆ ಅಡ್ಡಿ ಉಂಟುಮಾಡಲಾಗಿತ್ತು. ಅದರ ಪರಿಣಾಮವನ್ನು ಹಿಂದಿ ಸಿನಿಮಾವೊಂದು ಎದುರಿಸಬೇಕಾಗಿದೆ!

Vijaya Karnataka Web 5 Jan 2020, 8:54 pm
ಡಿಸೆಂಬರ್ 27ರಂದು ವಿಶ್ವಾದ್ಯಂತ ತೆರೆಕಂಡಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಲೂಟಿ ಮಾಡುತ್ತಿದೆ. ಮೊದಲ ಮೂರು ದಿನಕ್ಕೇ ಈ ಸಿನಿಮಾದ ಗಳಿಕೆ 30 ಕೋಟಿ ರೂ. ದಾಟಿತ್ತು ಎಂಬ ಮಾಹಿತಿ ಇದೆ. ಆದರೆ, ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಅದರ ಎಫೆಕ್ಟ್ ಈಗ ಹಿಂದಿ ಚಿತ್ರದ ಮೇಲಾಗುತ್ತಿದೆ.
Vijaya Karnataka Web ಅವನೇ ಶ್ರೀಮನ್ನಾರಾಯಣ


ಜನವರಿ 10ಕ್ಕೆ 'ತಾನಾಜೀ' ತೆರೆಗೆ
ಅಜಯ್‌ ದೇವ್‌ಗನ್‌ ನಟಿಸಿ, ನಿರ್ಮಿಸಿರುವ 'ತಾನಾಜೀ' ಚಿತ್ರವು ಇದೇ ಶುಕ್ರವಾರ (ಜನವರಿ 10) ತೆರೆಗೆ ಬರುತ್ತಿದೆ. ಮರಾಠಾ ಸಂಸ್ಥಾನದಲ್ಲಿ ಸೇನಾಧಿಪತಿ ಆಗಿದ್ದ ತಾನಾಜೀ ಜೀವನವನ್ನು ಆಧಾರಿಸಿ ಈ ಸಿನಿಮಾ ನಿರ್ಮಾಣವಾಗಿದೆ. ರಾಜ್ಯದಲ್ಲೂ ದೊಡ್ಡಮಟ್ಟದಲ್ಲಿ ತೆರೆಗೆ ತರುವುದಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಸೈಫ್ ಅಲಿ ಖಾನ್‌, ಕಾಜೋಲ್‌, ಜಗಪತಿ ಬಾಬು ಸೇರಿ ಮುಂತಾದವರು ಈ ಸಿನಿಮಾದಲ್ಲಿದ್ದಾರೆ.

ಬಾಯ್‌ಕಟ್‌ ತಾನಾಜೀ ಅಭಿಯಾನ
ಯಾವಾಗ ಮಹಾರಾಷ್ಟ್ರದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಅಡ್ಡಿ ಆಯಿತೋ, ಕರ್ನಾಟಕದಲ್ಲಿ ಈ ಸಿನಿಮಾ ತೆರೆಕಾಣಬಾರದು ಎಂದು ಅಭಿಯಾನ ಶುರುವಾಗಿದೆ. ಟ್ವಿಟ್ಟರ್‌ನಲ್ಲಿ #ಬಾಯ್‌ಕಟ್‌ತಾನಾಜೀ ಎಂದು ಈಗಾಗಲೇ ಅಭಿಯಾನ ಶುರುವಾಗಿದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌