ಆ್ಯಪ್ನಗರ

'ನನಗೆ ಮತ್ತು ರಾಧಿಕಾಗೆ ಗೋವಾ ಡೇಟಿಂಗ್‌ ಸ್ಪಾಟ್‌ ಆಗಿತ್ತು' ಎಂದ 'ರಾಕಿ ಭಾಯ್‌' ಯಶ್‌!

ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಾನು ರಾಧಿಕಾ ಪಂಡಿತ್‌ ಜೊತೆಗೆ ಡೇಟಿಂಗ್‌ಗೆ ಗೋವಾಗೇ ಬರುತ್ತಿದ್ದೆ ಎಂದು ಅಚ್ಚರಿ ಮೂಡಿಸಿದ್ದಾರೆ ನಟ ಯಶ್‌. 'ನಾನು ಮತ್ತು ರಾಧಿಕಾ ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಹಲವು ಬಾರಿ ಗೋವಾಕ್ಕೆ ಬಂದಾಗ ಇಲ್ಲಿ ಕದ್ದುಮುಚ್ಚಿ ಸುತ್ತಾಡುತ್ತಿದ್ದೆವು' ಎನ್ನುವ ಮೂಲಕ ತಮ್ಮ ಫೇವರಿಟ್‌ ಡೇಟಿಂಗ್‌ ಸ್ಪಾಟ್‌ ಗೋವಾ ಆಗಿತ್ತು ಎಂದಿದ್ದಾರೆ ನಟ ಯಶ್‌. ಗೋವಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯಶ್‌ ಈ ವಿಚಾರ ಬಹಿರಂಗಪಡಿಸಿದ್ದಾರೆ.

Vijaya Karnataka Web 13 Feb 2020, 8:25 am
ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಾನು ರಾಧಿಕಾ ಪಂಡಿತ್‌ ಜೊತೆಗೆ ಡೇಟಿಂಗ್‌ಗೆ ಗೋವಾಗೇ ಬರುತ್ತಿದ್ದೆ ಎಂದು ಅಚ್ಚರಿ ಮೂಡಿಸಿದ್ದಾರೆ ನಟ ಯಶ್‌. 'ನಾನು ಮತ್ತು ರಾಧಿಕಾ ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಹಲವು ಬಾರಿ ಗೋವಾಕ್ಕೆ ಬಂದಾಗ ಇಲ್ಲಿ ಕದ್ದುಮುಚ್ಚಿ ಸುತ್ತಾಡುತ್ತಿದ್ದೆವು' ಎನ್ನುವ ಮೂಲಕ ತಮ್ಮ ಫೇವರಿಟ್‌ ಡೇಟಿಂಗ್‌ ಸ್ಪಾಟ್‌ ಗೋವಾ ಆಗಿತ್ತು ಎಂದಿದ್ದಾರೆ ನಟ ಯಶ್‌. ಗೋವಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯಶ್‌ ಈ ವಿಚಾರ ಬಹಿರಂಗಪಡಿಸಿದ್ದಾರೆ. (ಲೇಖನ: ಪ್ರಕಾಶ್‌ ಭಟ್‌ ಪಣಜಿ)
Vijaya Karnataka Web kgf 2 actor yash says goa is my dating spot
'ನನಗೆ ಮತ್ತು ರಾಧಿಕಾಗೆ ಗೋವಾ ಡೇಟಿಂಗ್‌ ಸ್ಪಾಟ್‌ ಆಗಿತ್ತು' ಎಂದ 'ರಾಕಿ ಭಾಯ್‌' ಯಶ್‌!



​ಅಣ್ಣಾ ಎನ್ನುತ್ತಿದ್ದ ಅಭಿಮಾನಿಗಳು

ವಿವಾಹಕ್ಕೂ ಮುನ್ನ ಕೆಲವು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಯಶ್‌- ರಾಧಿಕಾ ಯಾವುದೇ ಗಾಸಿಪ್‌ ಆಗದಂತೆ ಸಮಯ ಕಳೆಯುತ್ತಿದ್ದುದು ಎಲ್ಲಿಎಂಬ ಗುಟ್ಟು ಈ ಮೂಲಕ ರಟ್ಟಾಯಿತು. 'ಗೋವಾದಲ್ಲಿಓಡಾಡುತ್ತಿದ್ದ ಸಂದರ್ಭದಲ್ಲಿ ಕೆಲವೊಮ್ಮೆ ಅಭಿಮಾನಿಗಳು 'ಅಣ್ಣಾ' ಎಂದು ಕೂಗಿ ಮಾತಾಡಿಸುತ್ತಿದ್ದರು. ನನಗೂ ಗೋವಾಕ್ಕೂ ಅವಿನಾಭಾವ ಸಂಬಂಧ ಇದೆ' ಎಂದಿದ್ದಾರೆ ರಾಕಿಂಗ್‌ ಸ್ಟಾರ್‌ ಯಶ್‌.

​ಗೋವಾ ಜನರ ಆಶೀರ್ವಾದ ಸಿಕ್ಕಿದೆ

'ನನ್ನ ಮಾವನ ಮನೆ ಅಂದರೆ ನನ್ನ ಹೆಂಡತಿ ರಾಧಿಕಾಳ ತವರುಮನೆ ಗೋವಾ. ನನ್ನ ಅಜ್ಜಿ ಕೂಡ ಗೋವಾದ ಮಾಪ್ಸಾದವರು' ಎಂದ ಯಶ್‌, 'ಗೋವಾದಲ್ಲಿಅಪಾರ ಸಂಖ್ಯೆಯ ಕನ್ನಡಿಗರು ನೆಲೆಸಿದ್ದಾರೆ. ಗೋವಾ ರಾಜ್ಯದ ಜನರು ಮತ್ತು ಕನ್ನಡಿಗರು ಇಲ್ಲಿಒಗ್ಗಟ್ಟಿನಿಂದ ಬಾಳುತ್ತಿದ್ದಾರೆ. ಇಲ್ಲಿನ ಅಭಿಮಾನಿಗಳು ನನ್ನ ಎಲ್ಲ ಚಿತ್ರಗಳನ್ನು ವೀಕ್ಷಿಸಿ ಆಶೀರ್ವದಿಸುತ್ತಿದ್ದಾರೆ' ಎಂದಿದ್ದಾರೆ ಯಶ್‌.

​ಅಭಿಮಾನಿಗಳನ್ನು ರಂಜಿಸಿದ ಯಶ್‌

ಗೋವಾದಲ್ಲಿನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಯಶ್‌ ಅಲ್ಲಿಕೊಂಕಣಿ ಹಾಡೊಂದನ್ನು ಹಾಡಿ ನೆರೆದಿದ್ದ ಅಭಿಮಾನಿಗಳ ಮನಗೆದ್ದರು. ಇದಲ್ಲದೆ ತಮ್ಮ ಸಿನಿಮಾಗಳ ಡೈಲಾಗ್‌ಗಳನ್ನು ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಿಗ್‌ ಸ್ಕ್ರೀನ್‌ ಮೂಲಕ ಯಶ್‌ ಸಿನಿಮಾಗಳ ತುಣುಕುಗಳನ್ನು ಪ್ರದರ್ಶಿಸಲಾಯಿತು. ಯಶ್‌ ಆಗಮನದ ಹಿನ್ನೆಲೆಯಲ್ಲಿಗೋವಾದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

Twitter-Yash

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌