ಆ್ಯಪ್ನಗರ

ಹತ್ತು ನಿಮಿಷದ ದೃಶ್ಯಕ್ಕೂ ಆರು ತಿಂಗಳು ತಯಾರಿ ಮಾಡಿಕೊಳ್ಳುವ 'ರಾಕಿ ಭಾಯ್' ಯಶ್‌! ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ 'ಕೆಜಿಎಫ್‌ 2'!

'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಕೆಜಿಎಫ್‌ ಚಾಪ್ಟರ್ 2' ಚಿತ್ರದ ಮೇಲಿನ ನಿರೀಕ್ಷೆ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. 'ಕೆಜಿಎಫ್‌ ಚಾಪ್ಟರ್‌ 1' ಚಿತ್ರವು ಇಡೀ ದೇಶಾದ್ಯಂತ ಸೃಷ್ಟಿಸಿರುವ ಹವಾ ಸಣ್ಣದೇನಲ್ಲ. ಆ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಅದರ ಪಾರ್ಟ್ 2 ಮೇಲಿದೆ. ಮೊದಲ ಭಾಗಗಕ್ಕಿಂತ ಹೆಚ್ಚಿನದನ್ನೂ ಅಭಿಮಾನಿಗಳು ನಿರೀಕ್ಷೆ ಮಾಡುತ್ತಿರುವುದರಿಂದ ಚಿತ್ರತಂಡ ಕೂಡ ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ. ಪ್ರತಿ ದೃಶ್ಯಕ್ಕೂ ಸಾಕಷ್ಟು ಪ್ರಾಮುಖ್ಯತೆ ನೀಡಿ, ಶೂಟಿಂಗ್ ಮಾಡಲಾಗುತ್ತಿದೆ. ಚಿತ್ರದ ನಾಯಕ ಯಶ್‌ ಕೂಡ ಸಿನಿಮಾಕ್ಕಾಗಿ ಬಹಳ ತಯಾರಿ ಮಾಡಿಕೊಂಡಿದ್ದಾರೆ.

Vijaya Karnataka Web 20 Feb 2020, 8:06 pm

Vijaya Karnataka Web kgf actor yash six months preparation for ten minutes shot
ಹತ್ತು ನಿಮಿಷದ ದೃಶ್ಯಕ್ಕೂ ಆರು ತಿಂಗಳು ತಯಾರಿ ಮಾಡಿಕೊಳ್ಳುವ 'ರಾಕಿ ಭಾಯ್' ಯಶ್‌! ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ 'ಕೆಜಿಎಫ್‌ 2'!

ಆರು ತಿಂಗಳು ತಯಾರಿ

ನಟ ಯಶ್‌ ಈ ಚಿತ್ರಕ್ಕಾಗಿ ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. 2016ರಿಂದಲೂ ಅವರು 'ಕೆಜಿಎಫ್‌' ಸಿನಿಮಾದಲ್ಲಿ ಭಾಗಿಯಾಗಿದ್ದಾರೆ. 'ಕೆಜಿಎಫ್‌ ಚಾಪ್ಟರ್ 1' ತೆರೆಕಾಣುತ್ತಿದ್ದಂತೆಯೇ, ಅದರ ಪಾರ್ಟ್‌ 2ರಲ್ಲಿ ಅವರು ಬ್ಯುಸಿ. ಇನ್ನು, ಸಿನಿಮಾಗಾಗಿ ಎಷ್ಟೊಂದು ತನ್ಮಯತೆಯಿಂದ ಅವರು ಕೆಲಸ ಮಾಡುತ್ತಿದ್ದಾರೆಂದರೆ, ಕೇವಲ 10 ನಿಮಿಷದ ದೃಶ್ಯಕ್ಕೆ 6 ತಿಂಗಳು ತಯಾರಿ ಮಾಡಿಕೊಳ್ಳುತ್ತಾರಂತೆ. ತೆರೆಮೇಲೆ ಎಲ್ಲವೂ ಪರಿಪೂರ್ಣತೆಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಅವರು, ಇಷ್ಟೊಂದು ಶ್ರಮ ಹಾಕುತ್ತಿದ್ದಾರಂತೆ.

'ರಾಕಿಂಗ್‌ ಸ್ಟಾರ್‌' ಯಶ್‌-ಸಂಜಯ್‌ ದತ್‌ ನಡುವೆ ಬಿಗ್‌ ಫೈಟ್‌! 'ಕೆಜಿಎಫ್‌ ಚಾಪ್ಟರ್‌ 2' ಬಗ್ಗೆ ಕೇಳಿಬಂತು ಅಚ್ಚರಿ ಸುದ್ದಿ!

​ಭರದಿಂದ ನಡೆಯುತ್ತಿದೆ ಚಿತ್ರೀಕರಣ

ಮೈಸೂರು, ಬೆಂಗಳೂರು, ಕೋಲಾರ, ಹೈದರಾಬಾದ್ ಮುಂತಾದ ಕಡೆಗಳಲ್ಲಿ ಪಾರ್ಟ್‌ 2ಕ್ಕೆ ಭರ್ಜರಿ ಚಿತ್ರೀಕರಣ ನಡೆದಿದೆ. ಈಗಾಗಲೇ ಚಿತ್ರತಂಡ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಅದಕ್ಕಾಗಿ ಚಿತ್ರತಂಡ ಅದ್ದೂರಿಯಾದ ಕ್ಲೈಮ್ಯಾಕ್ಸ್ ಅನ್ನು ಪ್ಲ್ಯಾನ್ ಮಾಡಿದೆ. ಕೋಟಿ ಕೋಟಿ ವೆಚ್ಚದಲ್ಲಿ ಸೆಟ್ ಹಾಕಿಸಿ, ಭರ್ಜರಿಯಾಗಿ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂಬುದು ಮೂಲಗಳ ಮಾಹಿತಿ. ಇನ್ನು, ಈ ಕ್ಲೈಮ್ಯಾಕ್ಸ್‌ನಲ್ಲಿ ಯಶ್‌ ಮತ್ತು ಸಂಜಯ್ ದತ್ ನಡುವಿನ ಫೈಟ್ ರೋಚಕವಾಗಿ ಇರಲಿದೆಯಂತೆ.

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಬಗ್ಗೆ ಕಾಮೆಂಟ್‌ ಮಾಡಿದ 'ಉಪೇಂದ್ರ'ನ ನಾಯಕಿ!

​ಬೇರ್ ಬಾಡಿಯಲ್ಲಿ ಯಶ್ ಮತ್ತು ಸಂಜು ಫೈಟ್‌

'ಕೆಜಿಎಫ್‌ ಚಾಪ್ಟರ್‌ 2' ಚಿತ್ರದಲ್ಲಿ ಅಧೀರ ಪಾತ್ರದಲ್ಲಿ ಸಂಜಯ್‌ ದತ್‌ ನಟಿಸಲಿದ್ದಾರೆ ಎಂದಾಗಲೇ ಸಿನಿಪ್ರಿಯರಲ್ಲಿ ದೊಡ್ಡಮಟ್ಟದ ಕುತೂಹಲ ಮನೆ ಮಾಡಿತ್ತು. ಇದೀಗ ಕ್ಲೈಮ್ಯಾಕ್ಸ್‌ನಲ್ಲಿ ಯಶ್‌ ಜೊತೆ ಅವರು ಶರ್ಟ್ ಲೆಸ್‌ ಆಗಿ ಹೊಡೆದಾಡಲಿದ್ದಾರೆ ಎಂಬ ಮಾಹಿತಿ ಬಿದ್ದಿದೆ. ಆದರೆ, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಈ ಆ್ಯಕ್ಷನ್ ದೃಶ್ಯಕ್ಕಾಗಿ ಇಬ್ಬರೂ ದೇಹ ಹುರಿಗೊಳಿಸಿಕೊಳ್ಳುತ್ತಿದ್ದು, ಭರ್ಜರಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅಧೀರನಾಗಿ ಸಂಜು ಅವರ ಗೆಟಪ್‌ ಹೇಗಿರಲಿದೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.

ರಾಕಿ ಭಾಯ್‌ ಅಡ್ಡಕ್ಕೆ ಪ್ರಧಾನಿಗೂ ಎಂಟ್ರಿ ಇಲ್ಲ! 'ಕೆಜಿಎಫ್‌ ಚಾಪ್ಟರ್‌ 2' ಕಥೆಯ ಎಳೆ ಬಿಟ್ಟುಕೊಟ್ಟರಾ ಯಶ್‌?

ಅನುಭವಿ ಕಲಾವಿದರ ದಂಡು

ಪಾರ್ಟ್‌ 1ರಲ್ಲೇ ಅನಂತ್ ನಾಗ್, ಮಾಳವಿಕಾ ಅವಿನಾಶ್‌, ಬಿ. ಸುರೇಶ್‌, ವಸಿಷ್ಠ ಸಿಂಹ ಮುಂತಾದವರಿದ್ದರು. ಇದೀಗ ಪಾರ್ಟ್‌ 2ರಲ್ಲಿ ಬಾಲಿವುಡ್‌ನ ಸಂಜಯ್ ದತ್‌, ರವೀನಾ ಟಂಡನ್‌ ಕಾಣಿಸಿಕೊಂಡಿದ್ದಾರೆ. ತೆಲುಗಿನ ರಾವ್ ರಮೇಶ್ ಕೂಡ ಹಾಜರಿ ಹಾಕಿದ್ದಾರೆ. ಸಿನಿಮಾ ಮುಗಿಯುವುದರೊಳಗೆ ಇನ್ನೂ ಯಾರಾದರೂ ಕಲಾವಿದರು ಚಿತ್ರತಂಡ ಸೇರಿಕೊಂಡರೆ ಅಚ್ಚರಿ ಇಲ್ಲ.

Twitter-Bhuvan Gowda

Twitter-Hombale Films

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌