ಆ್ಯಪ್ನಗರ

'ಕೆಜಿಎಫ್‌' ನಟಿಯ ಬ್ಯಾಕ್‌ಲೆಸ್‌ ಫೋಟೋ ವೈರಲ್‌! ಮಾಲ್ಡೀವ್ಸ್‌ನಲ್ಲಿ ಮೋಜು ಮಸ್ತಿ ಹೇಗಿದೆ ನೋಡಿ

ಸದ್ಯ ರಜೆಯ ಮಜಾ ಸವಿಯುತ್ತಿರುವ ಮೌನಿ ವಿದೇಶದಲ್ಲಿದ್ದಾರೆ. ಅವರ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ.

Vijaya Karnataka Web 13 Feb 2020, 4:22 pm
ಕನ್ನಡ ಮಾತ್ರವಲ್ಲದೆ, ಬಹುಭಾಷೆಯಲ್ಲೂ ಧೂಳೆಬ್ಬಿಸಿದ 'ಕೆಜಿಎಫ್‌' ಸಿನಿಮಾದಲ್ಲಿ ಅಭಿನಯಿಸಿದ ನಟಿ ಮೌನಿ ರಾಯ್‌ ಫೋಟೋಗಳು ಸಖತ್‌ ವೈರಲ್‌ ಆಗುತ್ತಿವೆ. ಬ್ಯಾಕ್‌ಲೆಸ್‌ ಆಗಿ ಅವರು ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಸಿನಿಮಾಗಳಲ್ಲಿ ಗ್ಲಾಮರಸ್‌ ಆಗಿ ಮಿಂಚುವ ಅವರು ನಿಜಜೀವನದಲ್ಲೂ ಅಷ್ಟೇ ಮಾದಕವಾಗಿ ಪೋಸ್‌ ನೀಡುತ್ತಾರೆ. ಸದ್ಯ ರಜೆಯ ಮಜಾ ಸವಿಯುತ್ತಿರುವ ಮೌನಿ ವಿದೇಶದಲ್ಲಿದ್ದಾರೆ. ಅವರ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ.
Vijaya Karnataka Web kgf actress mouni roy backless photos goes viral on internet
'ಕೆಜಿಎಫ್‌' ನಟಿಯ ಬ್ಯಾಕ್‌ಲೆಸ್‌ ಫೋಟೋ ವೈರಲ್‌! ಮಾಲ್ಡೀವ್ಸ್‌ನಲ್ಲಿ ಮೋಜು ಮಸ್ತಿ ಹೇಗಿದೆ ನೋಡಿ


​ಮಾಲ್ಡೀವ್ಸ್‌ನಲ್ಲಿ ಮೌನಿ ಹಾಲಿಡೇ

ಸಿನಿಮಾಗಳ ರೀತಿಯೇ ಸಿನಿಮಾ ತಾರೆಯರ ಖಾಸಗಿ ಬದುಕು ಕೂಡ ಸಖತ್‌ ಕಲರ್‌ಫುಲ್‌ ಆಗಿರುತ್ತದೆ. ತೆರೆಮೇಲೆ ಮಿಂಚುವ ಅವರೆಲ್ಲ ತೆರೆ ಹಿಂದೆಯೂ ಎಂಜಾಯ್‌ ಮಾಡುತ್ತಾರೆ. ಸಣ್ಣ ಬಿಡುವು ಸಿಕ್ಕರೂ ವಿದೇಶಕ್ಕೆ ತೆರಳಿ ಖುಷಿಪಡುತ್ತಾರೆ. ಸದ್ಯ ನಟಿ ಮೌನಿ ರಾಯ್‌ ಕೂಡ ಮೋಜು ಮಸ್ತಿ ಮಾಡುತ್ತಿದ್ದಾರೆ. ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿರುವ ಅವರು ಮಾದಕವಾದ ಫೋಟೋಶೂಟ್‌ ಮೂಲಕ ಕಣ್ಣು ಕುಕ್ಕುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಡೇಟಿಂಗ್‌ ವದಂತಿ ನಿರಾಕರಿಸಿದ ಮೌನಿ ರಾಯ್‌

ಮಾದಕ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್‌

ಮಾಲ್ಡೀವ್ಸ್‌ನ ಕಡಲ ತೀರದಲ್ಲಿ ವಿಶೇಷ ಥೀಮ್‌ನೊಂದಿಗೆ ಮೌನಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ನಿಸರ್ಗ ಮಡಿಲಿನಲ್ಲಿ ನಿದ್ರಿಸಿ, ಈಗ ತಾನೆ ಎಚ್ಚರಗೊಂಡಿರುವ ಸುಂದರಿಯಂತೆ ಪೋಸ್‌ ನೀಡಿದ್ದಾರೆ. ಶ್ವೇತ ವರ್ಣದ ಹಾಸಿಗೆ-ಹೊದಿಕೆ, ಎಳೆ ಬಿಸಿಲಿನ ಆಕಾಶ, ಅಲ್ಲಲ್ಲಿ ಚದುರಿದ ಮೋಡ, ನೀಲಿ ಬಣ್ಣದಲ್ಲಿ ಚಾಚಿಕೊಂಡ ಸಮುದ್ರ... ಇವುಗಳ ನಡುವೆ ಮೌನಿ ಬಿಂದಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಚೆಲುವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳಿಗೆ ಲಕ್ಷಾಂತರ ಲೈಕ್ಸ್‌ ಸಿಕ್ಕಿವೆ.

ಬಿಗಡಾಯಿಸಿತಾ 'ಕೆಜಿಎಫ್' ಬೆಡಗಿ ಮಾಡಿಸಿಕೊಂಡ ಪ್ಲಾಸ್ಟಿಕ್ ಸರ್ಜರಿ?

​'ಗಲಿ ಗಲಿ...' ಹಾಡಿನ ಗ್ಲಾಮರ್‌ ಗೊಂಬೆ

'ರಾಕಿಂಗ್‌ ಸ್ಟಾರ್‌' ಯಶ್‌ ನಟನೆಯ 'ಕೆಜಿಎಫ್‌' ಸಿನಿಮಾದಲ್ಲಿ ಮೌನಿ ರಾಯ್‌ ಕಾಣಿಸಿಕೊಂಡಿದ್ದರು. ಆ ಚಿತ್ರದ ಹಿಂದಿ ಅವತರಣಿಕೆಯ 'ಗಲಿ ಗಲಿ ಮೇ...' ಹಾಡಿನಲ್ಲಿ ಅವರು ನರ್ತಿಸಿದ ಪರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಯೂಟ್ಯೂಬ್‌ನಲ್ಲಿ ಈ ಹಾಡು ಬರೋಬ್ಬರಿ 128 ಮಿಲಿಯನ್‌ ಬಾರಿ ವೀಕ್ಷಣೆ ಕಂಡಿದೆ. ಕಳೆದ ವರ್ಷ ಅವರು ನಟಿಸಿದ್ದ 'ಮೇಡ್‌ ಇನ್‌ ಚೀನಾ' ಸಿನಿಮಾ ತೆರೆಕಂಡಿತ್ತು. ಪ್ರಸ್ತುತ 'ಬ್ರಹ್ಮಾಸ್ತ್ರ' ಮತ್ತು 'ಮೊಗಲ್‌' ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಹಿಂದಿ ಕಿರುತೆರೆ ಲೋಕದಲ್ಲಿ ಮೌನಿ ಸಖತ್‌ ಜನಪ್ರಿಯತೆ ಪಡೆದುಕೊಂಡಿದ್ದರು.

ಮೌನಿ ರಾಯ್‌ ಪ್ಲಾಸ್ಟಿಕ್‌ ಸರ್ಜರಿ ವದಂತಿಗೆ ಮತ್ತೆ ಜೀವ

Twitter-Mouni Roy

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌