ಆ್ಯಪ್ನಗರ

'KGF' ನಿರ್ಮಾಪಕರಿಂದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ! ಯಾವ ಸ್ಟಾರ್‌ ಜೊತೆ ಹೊಸ ಚಿತ್ರ?

ಕನ್ನಡ ಚಿತ್ರರಂಗದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ 'ಹೊಂಬಾಳೆ ಫಿಲ್ಮ್ಸ್‌' ಸಂಸ್ಥೆಯು ಮತ್ತೊಂದು ಚಿತ್ರವನ್ನು ಘೋಷಣೆ ಮಾಡಲು ಸಜ್ಜಾಗಿದೆ. ಇದಕ್ಕೆ ಹಲವು ಸ್ಟಾರ್‌ಗಳ ಹೆಸರು ಕೇಳಿಬರುತ್ತಿದ್ದು, ಆ ಪೈಕಿ ಯಾರ ಜೊತೆ ನಿರ್ಮಾಪಕರು ಕೈ ಜೋಡಿಸಬಹುದು ಎಂಬ ಕೌತುಕ ನಿರ್ಮಾಣ ಆಗಿದೆ.

Vijaya Karnataka Web 30 Nov 2020, 1:28 pm
ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ 'ಹೊಂಬಾಳೆ ಫಿಲ್ಮ್ಸ್‌'. 'ಕೆಜಿಎಫ್‌' ರೀತಿ ಜನಮೆಚ್ಚುವ ಸಿನಿಮಾಗಳನ್ನು ನೀಡಿದ ಈ ಸಂಸ್ಥೆಯಿಂದ ಮೂಡಿಬರಲಿರುವ ಹೊಸ ಚಿತ್ರಗಳ ಬಗ್ಗೆ ಜನರಿಗೆ ಸಖತ್‌ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವಂತಹ ಸುದ್ದಿ ಈಗ ಕೇಳಿಬಂದಿದೆ.
Vijaya Karnataka Web ಹೊಂಬಾಳೆ ಫಿಲ್ಮ್ಸ್‌ ವಿಜಯ್‌ ಕಿರಗಂದೂರು


ನ.30ರಂದು ಸೋಶಿಯಲ್‌ ಮೀಡಿಯಾ ಮೂಲಕ 'ಹೊಂಬಾಳೆ ಫಿಲ್ಮ್ಸ್‌' ಒಂದು ಸುದ್ದಿ ಬ್ರೇಕ್‌ ಮಾಡಿದೆ. ಈ ಬ್ಯಾನರ್‌ನಿಂದ ಮೂಡಿಬರಲಿರುವ ಹೊಸ ಸಿನಿಮಾ ಯಾವುದು ಎಂಬ ಬಗ್ಗೆ ಶೀಘ್ರದಲ್ಲೇ ಮಾಹಿತಿ ಬಹಿರಂಗ ಆಗಲಿದೆ. ಅದಕ್ಕೆ ದಿನಾಂಕ ಕೂಡ ನಿಗದಿ ಆಗಿದೆ. ಡಿ.2ರಂದು ಮಧ್ಯಾಹ್ನ 2 ಗಂಟೆ 9 ನಿಮಿಷಕ್ಕೆ ಹೊಸ ಚಿತ್ರವನ್ನು ಅನೌನ್ಸ್‌ ಮಾಡಲಾಗುವುದು ಎಂದು 'ಹೊಂಬಾಳೆ ಫಿಲ್ಮ್ಸ್‌' ತಿಳಿಸಿದೆ.

ನಿನ್ನಿಂದಲೇ, ಮಾಸ್ಟರ್‌ಪೀಸ್‌, ರಾಜಕುಮಾರ, ಯುವರತ್ನ, ಕೆಜಿಎಫ್‌: ಚಾಪ್ಟರ್‌ 1 ಮತ್ತು ಕೆಜಿಎಫ್‌: ಚಾಪ್ಟರ್‌ 2 ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಈ ಸಂಸ್ಥೆಗೆ ಇದೆ. ಪ್ರತಿ ಸಿನಿಮಾದಲ್ಲಿಯೂ ಮೇಕಿಂಗ್‌ ಗುಣಮಟ್ಟ, ಬಜೆಟ್‌ ಮುಂತಾದ ವಿಚಾರಗಳಲ್ಲಿ ಒಂದು ಹೆಜ್ಜೆ ಮುಂದಿಡುತ್ತಿರುವ 'ಹೊಂಬಾಳೆ ಫಿಲ್ಸ್ಮ್‌'ನ ಮುಂದಿನ ಚಿತ್ರ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಸಿನಿಪ್ರಿಯರಲ್ಲಿ ಮೂಡಿದೆ.

also read: ಹೊಂಬಾಳೆ ಫಿಲ್ಮ್‌ ಬ್ಯಾನರ್ ಆಯೋಜಿಸಿದ್ದ ಗ್ರ್ಯಾಂಡ್ ಪಾರ್ಟಿಯಲ್ಲಿ ಯಶ್, ರಾಧಿಕಾ ಪಂಡಿತ್ ಜೋಡಿ

ಯಶ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಜೊತೆಗೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಮಾಡುತ್ತ ಬಂದಿದ್ದಾರೆ ಈ ಸಂಸ್ಥೆಯ ಮಾಲೀಕ ವಿಜಯ್‌ ಕಿರಗಂದೂರು. ಹಾಗಾದರೆ, ಅವರು ನಿರ್ಮಾಣ ಮಾಡಲಿರುವ ಹೊಸ ಚಿತ್ರಕ್ಕೂ ಇವರಿಬ್ಬರಲ್ಲಿ ಯಾರಾದರೊಬ್ಬರು ಹೀರೋ ಆಗುತ್ತಾರಾ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಕೊರೆಯುತ್ತಿದೆ. ಪ್ರಭಾಸ್‌ ಜೊತೆ ಸಿನಿಮಾ ಮಾಡಿ ಎಂದು ಕೂಡ ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.

also read: ನಟ ಯಶ್ ನಂತರ ಪ್ರಶಾಂತ್ ನೀಲ್ ನಿರ್ದೇಶನ ಯಾರಿಗೆ? ಪ್ರಭಾಸ್‌ Or ಜೂ. ಎನ್‌ಟಿಆರ್?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌