ಆ್ಯಪ್ನಗರ

ಅಭಿಮಾನಿಗಳಿಗೆ 'ಫ್ಯಾಂಟಮ್‌' ಲೋಕ ತೋರಿಸಿದ ಕಿಚ್ಚ ಸುದೀಪ್‌! ಇದು ಬರೀ ಝಲಕ್‌ ಅಷ್ಟೇ!

ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್‌ ಒಂದು ಪ್ರಾಮಿಸ್‌ ಮಾಡಿದ್ದರು. ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಂಡಿರುವ ಅವರು ಎಲ್ಲರಿಗೂ 'ಫ್ಯಾಂಟಮ್‌' ಲೋಕವನ್ನು ತೋರಿಸಿದ್ದಾರೆ. 'ಫ್ಯಾಂಟಮ್‌' ಲೋಕವನ್ನು ನೀವೂ ನೋಡಿದ್ರಾ?

Vijaya Karnataka Web 24 Jul 2020, 4:57 pm
ಹಲವು ಕಾರಣಗಳಿಗಾಗಿ ಸಖತ್‌ ನಿರೀಕ್ಷೆ ಮೂಡಿಸಿದೆ 'ಫ್ಯಾಂಟಮ್‌' ಸಿನಿಮಾ. 'ರಂಗಿತರಂಗ' ಖ್ಯಾತಿಯ ನಿರ್ದೇಶಕ ಅನೂಪ್‌ ಭಂಡಾರಿ ಆ್ಯಕ್ಷನ್‌-ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಶೂಟಿಂಗ್‌ ಶುರುವಾಗಿದೆ. ಅಭಿಮಾನಿಗಳು ಈ ಸಿನಿಮಾಗಾಗಿ ಎಷ್ಟರ ಮಟ್ಟಿಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದು ಚಿತ್ರತಂಡಕ್ಕೂ ಗೊತ್ತಿದೆ. ಹಾಗಾಗಿ ಅವರ ಮನತಣಿಸಲು ಚಿಕ್ಕ ಚಿಕ್ಕ ದೃಶ್ಯ ತುಣುಕುಗಳನ್ನು ಹಂಚಿಕೊಳ್ಳಲಾಗುತ್ತದೆ.
Vijaya Karnataka Web kichcha sudeep shares a sneak peek of phantom kannada movie
ಅಭಿಮಾನಿಗಳಿಗೆ 'ಫ್ಯಾಂಟಮ್‌' ಲೋಕ ತೋರಿಸಿದ ಕಿಚ್ಚ ಸುದೀಪ್‌! ಇದು ಬರೀ ಝಲಕ್‌ ಅಷ್ಟೇ!


'ಕಿಚ್ಚ' ಸುದೀಪ್‌ ಮುಖ್ಯಭೂಮಿಕೆ ನಿಭಾಯಿಸುತ್ತಿರುವ 'ಫ್ಯಾಂಟಮ್‌' ಚಿತ್ರಕ್ಕೆ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಶೂಟಿಂಗ್‌ ಆರಂಭ ಆಗಿತ್ತು. ಚಿತ್ರಕ್ಕಾಗಿ ರಿಯಲ್‌ ಆಗಿಯೇ ಮರ ಗಿಡಗಳನ್ನು ಬೆಳೆಸಿ, ಕಾಡಿನ ಸೆಟ್‌ ಹಾಕಿಸಲಾಗಿದೆ. ಆ ಕಾರಣದಿಂದಲೂ 'ಫ್ಯಾಂಟಮ್‌' ಕೌತುಕ ಕೆರಳಿಸಿತ್ತು. ಅದಕ್ಕೆ ಸಂಬಂಧಿಸಿದ ಒಂದು ವಿಡಿಯೋವನ್ನು ಚಿತ್ರತಂಡ ಶೇರ್‌ ಮಾಡಿಕೊಂಡಿತ್ತು. ಈಗ ಇನ್ನೊಂದು ಅಚ್ಚರಿ ನೀಡಿದ್ದಾರೆ ಸುದೀಪ್‌.

ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಕಿಚ್ಚ ಸುದೀಪ್‌ ಶುಕ್ರವಾರ (ಜು.24) ಒಂದು ಟ್ವೀಟ್‌ ಮಾಡಿದ್ದರು. 'ನಿನ್ನೆ ಫ್ಯಾಂಟಮ್‌ ಸೆಟ್‌ನಲ್ಲಿ ಚಿತ್ರೀಕರಿಸಿದ ಒಂದು ಶಾಟ್‌ ಅನ್ನು ಹಂಚಿಕೊಳ್ಳುತ್ತೇನೆ. ಫ್ಯಾಂಟಮ್‌ ಲೋಕವನ್ನು ನಿಮಗೆ ತೋರಿಸುತ್ತೇನೆ' ಎಂದು ಅವರು ಪ್ರಾಮಿಸ್‌ ಮಾಡಿದ್ದರು. ಕೊಟ್ಟ ಮಾತಿಗೆ ತಕ್ಕಂತೆ ಒಂದು ದೃಶ್ಯ ತುಣುಕನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. ಅದನ್ನು ಕಂಡು ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

also read: ಸುದೀಪ್ 'ಫ್ಯಾಂಟಮ್' ಸಿನಿಮಾ ಶೂಟಿಂಗ್ ಆರಂಭ; ಕಿಚ್ಚನಿಗೆ ಜೊತೆಯಾಗುವ ಆ ಜನಪ್ರಿಯ ತೆಲುಗು ಹೀರೋಯಿನ್ ಯಾರು?

ಯಾರೂ ಇಲ್ಲದ ಕಗ್ಗತ್ತಲ ಕಾಡಿನೊಳಗೆ ಬೈಕ್‌ ಏರಿ ಬರುವ ಸುದೀಪ್‌ ಏನನ್ನೋ ಹುಡುಕುತ್ತಿದ್ದಾರೆ. ಟಾರ್ಚ್‌ ಹಿಡಿದು ಸುತ್ತಲೂ ಗಮನಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಹಿನ್ನೆಲೆಯಲ್ಲಿ ಬರುವ ಜೋಗುಳದಂತಹ ಹಾಡು ಸಹ ಗಮನ ಸೆಳೆಯುತ್ತಿದೆ. ಒಮ್ಮೆಲೆ ಗಮನಿಸಿದರೆ ಇದೊಂದು ಹಾರರ್‌ ಸಿನಿಮಾ ಇರಬಹುದೇ ಎಂಬ ಅನುಮಾನ ಮೂಡುತ್ತದೆ. ಆದರೆ ಇದು ಹಾರರ್‌ ಚಿತ್ರ ಅಲ್ಲ ಎಂದು ಉತ್ತರಿಸಿದ್ದಾರೆ ಸುದೀಪ್.

also read: ಸುದೀಪ್‌ ಚಿತ್ರಕ್ಕಾಗಿ 6 ಕೋಟಿ ರೂ. ಬಜೆಟ್‌ನಲ್ಲಿ ಕಾಡು ನಿರ್ಮಾಣ!

ಕೊರೊನಾ ವೈರಸ್‌ ಹಾವಳಿ ಹೆಚ್ಚುತ್ತಿದ್ದರೂ ಸಹ 'ಫ್ಯಾಂಟಮ್‌' ತಂಡ ಹಿಂದೇಟು ಹಾಕಿಲ್ಲ. ಸರ್ಕಾರ ಜಾರಿಗೊಳಿಸಿರುವ ಎಲ್ಲ ನಿಯಮಗಳನ್ನು ಪಾಲಿಸುತ್ತ, ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ಮಾಡಲಾಗುತ್ತಿದೆ. ಸೆಟ್‌ನಲ್ಲಿ ಕರ್ನಾಟಕದ ತಂತ್ರಜ್ಞರೇ ಕೆಲಸ ಮಾಡುತ್ತಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಕನ್ನಡದ ಸಿನಿಮಾ ಕಾರ್ಮಿಕರು ಮತ್ತು ತಂತ್ರಜ್ಞರಿಗೆ ಅನುಕೂಲ ಆಗಲಿ ಎಂದು ಕಿಚ್ಚ ಸುದೀಪ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌