ಆ್ಯಪ್ನಗರ

ಕೆಆರ್‌ಜಿ ಸ್ಟುಡಿಯೋಸ್ ಪಾಲಾದ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಥಿಯೇಟ್ರಿಕಲ್ ಹಕ್ಕುಗಳು

ಸಾಕು ನಾಯಿಗಳ ಕುರಿತಾಗಿ ತಯಾರಾಗಿರುವ ವಿಭಿನ್ನ ಸಿನಿಮಾ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಚಿತ್ರದ ಥಿಯೇಟ್ರಿಕಲ್ ರೈಟ್ಸ್ ಕೆಆರ್‌ಜಿ ಸ್ಟುಡಿಯೋಸ್ ಪಾಲಾಗಿದೆ. ಜುಲೈ 14 ರಂದು ಮಲಯಾಳಂನಲ್ಲಿ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ರಿಲೀಸ್ ಆಗಲಿದೆ.

Authored byಹರ್ಷಿತಾ ಎನ್ | Vijaya Karnataka Web 17 Jun 2023, 11:46 pm

ಹೈಲೈಟ್ಸ್‌:

  • ಬಿಡುಗಡೆಗೆ ಸಿದ್ಧವಾಯ್ತು 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಸಿನಿಮಾ
  • ಕೆಆರ್‌ಜಿ ಸ್ಟುಡಿಯೋಸ್ ಪಾಲಾದ ಥಿಯೇಟ್ರಿಕಲ್ ರೈಟ್ಸ್
  • ಸಾಕು ನಾಯಿಗಳ ಕುರಿತಾದ ಅದ್ಭುತ ಸಿನಿಮಾ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್'

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web krg studios bags theatrical rights of valatty a tale of tails movie
ಕೆಆರ್‌ಜಿ ಸ್ಟುಡಿಯೋಸ್ ಪಾಲಾದ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಥಿಯೇಟ್ರಿಕಲ್ ಹಕ್ಕುಗಳು
ಮಲಯಾಳಂನಲ್ಲಿ ಬಹುನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್'. ಶ್ವಾನಗಳ ಕುರಿತಾದ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಸಿನಿಮಾದ ಥಿಯೇಟ್ರಿಕಲ್ ಹಕ್ಕುಗಳನ್ನು ವಿಶ್ವದಾದ್ಯಂತ (ಕೇರಳ ರಾಜ್ಯ ಹೊರತುಪಡಿಸಿ) ಕೆ ಆರ್‌ ಜಿ ಸ್ಟುಡಿಯೋಸ್ ಪಡೆದುಕೊಂಡಿದೆ.

'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಚಿತ್ರದ ಸ್ಪೆಷಾಲಿಟಿ

ಸಾಕು ನಾಯಿಗಳ ಬಗ್ಗೆ ತಯಾರಾಗಿರುವ ಅದ್ಭುತ ಚಿತ್ರ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್'. ಈ ಸಿನಿಮಾದಲ್ಲಿ ಸಾಕು ನಾಯಿಗಳ ಗ್ಯಾಂಗ್ ಬಗ್ಗೆ ಹೃದಯ ಬೆಚ್ಚಗಾಗಿಸುವ ಕಥೆ ಇದೆ, ಅಮೋಘವಾದ ಸಾಹಸಮಯ ದೃಶ್ಯಗಳಿವೆ.
'ಡಾಲಿ' ಧನಂಜಯ್‌ಗೆ ದುಬಾರಿ ಕಾರು ಗಿಫ್ಟ್ ನೀಡಿದ 'ಗುರುದೇವ್ ಹೊಯ್ಸಳ' ನಿರ್ಮಾಪಕರು

ಶ್ವಾನಗಳಿಗೆ ಜನಪ್ರಿಯ ನಟರ ಧ್ವನಿ

'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಚಿತ್ರದ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯವೇನೆಂದರೆ ಮಲಯಾಳಂನ ಜನಪ್ರಿಯ ನಟರಾದ ರೋಷನ್ ಮ್ಯಾಥ್ಯೂ, ಸೌಬಿನ್ ಶಾಹಿರ್, ಇಂದ್ರನ್ಸ್, ಸನ್ನಿ ವೇಯ್ನ್, ಸೈಜು ಕುರುಪ್ ಮತ್ತು ಇತರರು ಸಾಕು ನಾಯಿ ಪಾತ್ರಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ಸದ್ದಿಲ್ಲದೇ ರಿಲೀಸ್‌ಗೆ ರೆಡಿಯಾದ 'ರೌಡಿ ಫೆಲೋ'; ಆರ್‌ಜೆ ರೋಹಿತ್‌ ಸಿನಿಮಾಗೆ ಸಾಥ್ ನೀಡಿದ ಕೆಆರ್‌ಜಿ

ಇದೇ ಮೊದಲು

ಇಡೀ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಕ್ಯಾನೈನ್ ಮತ್ತು ಇತರೆ ಸಾಕುಪ್ರಾಣಿಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ಸಿನಿಮಾ. ಈ ಚಿತ್ರದಲ್ಲಿ ನೋಡುಗರ ಮನಸೆಳೆಯುವ ತಾಜಾ ದೃಶ್ಯಗಳಿವೆ. ಪ್ರೀತಿ, ಕಾಮಿಡಿ ಹಾಗೂ ಅಡ್ವೆಂಚರಸ್ ಎಲಿಮೆಂಟ್ಸ್ ಇವೆ. 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಚಿತ್ರವು ಕಿರಿಯ ಮತ್ತು ಹಿರಿಯ ಪ್ರೇಕ್ಷಕರನ್ನು ಆಕರ್ಷಿಸಲಿದೆ.

'ಡಾಲಿ' ಧನಂಜಯ ಜೊತೆ ಸಾಲು ಸಾಲು ಸಿನಿಮಾ ಮಾಡೋಕೆ ಕೆ.ಆರ್.ಜಿ ಸ್ಟುಡಿಯೋಸ್ ರೆಡಿ!

ಅಂದ್ಹಾಗೆ, ನಿರ್ಮಾಪಕ ದಿಲ್ ರಾಜು ಅವರು ತೆಲುಗಿನಲ್ಲಿ, ಅನಿಲ್ ತದಾನಿ ಹಿಂದಿಯಲ್ಲಿ 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಚಿತ್ರದ ಹಂಚಿಕೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಓವರ್ ಸೀಸ್ ಡಿಸ್ಟ್ರಿಬ್ಯೂಷನ್ ಹಕ್ಕುಗಳನ್ನ ಹೋಮ್ ಸ್ಕ್ರೀನ್ ಎಂಟರ್ಟೇನ್ಮೆಂಟ್ ವಹಿಸಿಕೊಂಡಿದೆ.

'ಕೆಜಿಎಫ್' ನಿರ್ಮಾಪಕರ ಜೊತೆ 'ಕಿಚ್ಚ' ಸುದೀಪ್ ಸಿನಿಮಾ? ಆ ಒಂದು ಫೋಟೋದಿಂದ ಹುಟ್ಟಿಕೊಂಡಿದೆ ಹೊಸ ನಿರೀಕ್ಷೆ

'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಚಿತ್ರವನ್ನು ವಿಜಯ್ ಬಾಬು ಪ್ರಸ್ತುತ ಪಡಿಸುತ್ತಿದ್ದಾರೆ. ಫ್ರೈಡೇ ಫಿಲ್ಮ್ ಹೌಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶಕ ದೇವನ್ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದಾಗಿದೆ. 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್' ಚಿತ್ರವು ಜುಲೈ 14 ರಂದು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಒಂದು ವಾರದ ಗ್ಯಾಪ್‌ ನಂತರ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಗೊಳ್ಳಲಿದೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌