ಆ್ಯಪ್ನಗರ

Tollywood: 'ಪ್ರಕಾಶ್ ರೈ ಸ್ಥಳೀಯರಲ್ಲ' ಎಂದವರಿಗೆ ಖಡಕ್ ಆಗಿಯೇ ತಿರುಗೇಟು ನೀಡಿದ ನಟ!

ನಟ ಪ್ರಕಾಶ್ ರೈ ಅವರು ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಸಮಯದಲ್ಲಿ, 'ಅವರು ಕನ್ನಡಿಗರು, ಸ್ಥಳೀಯರಲ್ಲ' ಎಂಬ ಚರ್ಚೆ ಶುರುವಾಗಿದೆ.

Vijaya Karnataka Web 25 Jun 2021, 8:18 pm
ಟಾಲಿವುಡ್‌ನಲ್ಲಿ ಈಗ ಚುನಾವಣೆ ಕಾವು ಜೋರಾಗಿದೆ. ಅಂದಹಾಗೆ, ಇದ್ಯಾವುದೇ ರಾಜಕೀಯ ಚುನಾವಣೆ ಅಲ್ಲ. ಬದಲಿಗೆ, ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಚುನಾವಣೆ. ಈ ಚುನಾವಣೆ ಕಳೆದ ಮಾರ್ಚ್‌ನಲ್ಲೇ ನಡೆಯಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಸೆಪ್ಟೆಂಬರ್‌ಗೆ ಮುಂದೂಡಿಕೆ ಆಗಿದೆ. ಆದರೆ, ಈಗಲೇ ಚುನಾವಣೆಗೆ ಭರ್ಜರಿ ತಯಾರಿ ಶುರುವಾಗಿದೆ.
Vijaya Karnataka Web maa elections 2021 actor prakash raj reacts non local issue
Tollywood: 'ಪ್ರಕಾಶ್ ರೈ ಸ್ಥಳೀಯರಲ್ಲ' ಎಂದವರಿಗೆ ಖಡಕ್ ಆಗಿಯೇ ತಿರುಗೇಟು ನೀಡಿದ ನಟ!


ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ ಸ್ಪರ್ಧೆ
ನಟ ಪ್ರಕಾಶ್ ರೈ, ತಮ್ಮದೇ 26 ಜನರ ಒಂದು ತಂಡ ಮಾಡಿಕೊಂಡು ಅಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮೂವೀ ಆರ್ಟಿಸ್ಟ್ ಅಸೋಸಿಯೇಷನ್ನ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ ಪ್ರಬಲ ಸ್ಪರ್ಧಿ ಆಗಿದ್ದಾರೆ. ಅವರೆದುರು ಮೋಹನ್ ಬಾಬು ಪುತ್ರ ಮಂಚು ವಿಷ್ಣು ಕೂಡ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಹೊತ್ತಿನಲ್ಲಿ 'ನಾನ್‌-ಲೋಕಲ್‌' ಎಂಬ ಚರ್ಚೆ ಶುರುವಾಗಿದೆ. ಅಂದರೆ, ಪ್ರಕಾಶ್ ರೈ ಕನ್ನಡದವರು, ತೆಲುಗಿನವರಲ್ಲ. ಅವರೇಕೆ ತೆಲುಗು ನೆಲದ ಅಸೋಸಿಯೇಷನ್ಗೆ ಅಧ್ಯಕ್ಷರಾಗಬೇಕು ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಇದಕ್ಕೆ ಪ್ರಕಾಶ್ ರೈ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.


​ತೆಲುಗಿನ ವಿಶಾಲ್ ತಮಿಳಿನಲ್ಲಿ ಅಧ್ಯಕ್ಷರಾಗಿರಲಿಲ್ಲವೇ?

ತಮ್ಮನ್ನು ಸ್ಥಳೀಯರಲ್ಲ ಎಂದು ಕೆಲವರು ಕರೆಯುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, 'ತಮಿಳು ನಡಿಗೇರ್‌ ಸಂಘಂ ಚುನಾವಣೆಯಲ್ಲಿ ತೆಲುಗು ಮಾತನಾಡುವ ವಿಶಾಲ್ ಸ್ಪರ್ಧಿಸಿ, ಗೆಲ್ಲುವುದಾದರೆ, ನಾನೇಕೆ ಇಲ್ಲಿ ಸ್ಪರ್ಧಿಸಬಾರದು' ಎಂದು ಪ್ರಕಾಶ್‌ ರೈ ಪ್ರಶ್ನೆ ಮಾಡಿದ್ದಾರೆ. 'ನಾನು ತೆಲಂಗಾಣದ ಒಂದು ಹಳ್ಳಿಯನ್ನು ದತ್ತು ಪಡೆದು, ಅದನ್ನು ಅಭಿವೃದ್ಧಿ ಮಾಡಿದಾಗ ಯಾರೂ ಕೂಡ ನಾನು ಹೊರಗಿನವನು ಎಂದು ಪ್ರಶ್ನೆ ಮಾಡಲಿಲ್ಲ' ಎಂದು ಪ್ರಕಾಶ್ ರೈ ಹೇಳಿದ್ದಾರೆ.

ನಟ ಪ್ರಕಾಶ್ ರಾಜ್ ಹೊಗಳಲು ಹೋಗಿ ಪವನ್ ಕಲ್ಯಾಣ್ ಫ್ಯಾನ್ಸ್ ಆಕ್ರೋಶಕ್ಕೆ ಗುರಿಯಾದ ನಟಿ ಅನುಪಮಾ ಪರಮೇಶ್ವರನ್!

​ಅವರ ಕಳಪೆ ಮಾನಸಿಕ ಸ್ಥಿತಿಯ ಪ್ರದರ್ಶನ

'ನನ್ನ ಸಹಾಯಕರಿಗೆ ನಾನು ಹೈದರಾಬಾದ್‌ನಲ್ಲಿ ಮನೆಗಳನ್ನು ಖರೀದಿಸಿದೆ. ನನ್ನ ಮಗ ಹೈದರಾಬಾದ್‌ನ ಶಾಲೆಗೆ ಹೋಗುತ್ತಾನೆ. ನನ್ನ ಆಧಾರ್ ಕಾರ್ಡ್‌ನಲ್ಲಿ ಇರುವ ವಿಳಾಸ, ನನ್ನನ್ನು ಸ್ಥಳೀಯನೆಂದು ತಿಳಿಸುತ್ತದೆ. ತೆಲುಗಿನ 'ಅಂತಪುರಂ' ಸಿನಿಮಾಕ್ಕಾಗಿ ನಾನು ನ್ಯಾಷನಲ್ ಅವಾರ್ಡ್ ಪಡೆದುಕೊಂಡೆ. ತೆಲುಗು ಚಿತ್ರಗಳ ನಟನೆಗಾಗಿ ನಾನು 9 ನಂದಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇನೆ. ಈ ಎಲ್ಲ ಸಂದರ್ಭಗಳಲ್ಲೂ ನಾನು ಹೊರಗಿನವನು ಎಂಬ ಪ್ರಶ್ನೆಯೇ ಉದ್ಭವಿಸಲಿಲ್ಲ. ಆದರೆ, ಈಗ್ಯಾಕೆ ಆ ಬಗ್ಗೆ ಮಾತು? ನಾನು ಸ್ಥಳೀಯನಲ್ಲ ಎಂದು ಹೇಳುವವರ ಸಂಕುಚಿತ ಮನೋಭಾವ ಮತ್ತು ಕಳಪೆ ಮಾನಸಿಕ ಸ್ಥಿತಿಯನ್ನು ಇದು ತೋರಿಸುತ್ತದೆ' ಎಂದು ಪ್ರಕಾಶ್ ರೈ ಖಡಕ್ ಆಗಿಯೇ ಹೇಳಿದ್ದಾರೆ.

ಪವನ್‌ ಕಲ್ಯಾಣ್ & ಪ್ರಕಾಶ್ ರೈ ನಟನೆಗೆ ಮನಸೋತ ಮಹೇಶ್ ಬಾಬು! ಏನ್‌ ಹೇಳಿದ್ರು 'ಪ್ರಿನ್ಸ್'?

​ಪ್ರಕಾಶ್‌ಗೆ ಕೆಲ ಕಲಾವಿದರ ಬೆಂಬಲ

ಈ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನನ್ನನ್ನೇ ನಾನು ಒಪ್ಪಿಸಲು ತುಂಬ ಸಮಯ ತೆಗೆದುಕೊಂಡಿದ್ದೇನೆ. ನಾನು ಈ ಚಿತ್ರರಂಗದಲ್ಲಿ 3 ದಶಕಗಳಿಂದ ಕೆಲಸ ಮಾಡಿಕೊಂಡಿದ್ದೇನೆ. ಈ ಇಂಡಸ್ಟ್ರೀ ನನಗೆ ಹೆಸರು, ಜನಪ್ರಿಯತೆ ಎಲ್ಲವನ್ನೂ ನೀಡಿದೆ. ಆದರೆ, ಇಲ್ಲಿನ ಕೆಲವೊಂದು ಘಟನೆಗಳು ನನಗೆ ಬೇಸರ ಉಂಟು ಮಾಡಿವೆ. ಸಮಸ್ಯೆಗಳನ್ನು ಪಟ್ಟಿಮಾಡುವುದು ಸುಲಭ, ಆದರೆ, ಪರಿಹಾರಗಳನ್ನು ಜಾರಿಗೆ ತರುವುದು ಮುಖ್ಯ. ಶೂಟಿಂಗ್ ಸಮಯದಲ್ಲಿ ನನ್ನ ಸಹ ಕಲಾವಿದರು ತುಂಬ ಸಲ, 'ನಾನೇ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ' ಎಂದು ಹೇಳಿದ್ದಾರೆ' ಅಂತ ಪ್ರಕಾಶ್ ರೈ ಹೇಳಿದ್ದಾರೆ.

'ಕೆಜಿಎಫ್‌' ಬಳಿಕ ಪ್ರಕಾಶ್‌ ರೈಗೆ ಸಿಕ್ತು ಮತ್ತೊಂದು ದೊಡ್ಡ ಸಿನಿಮಾ! ಬಹುಭಾಷಾ ನಟ ಫುಲ್‌ ಖುಷ್‌

​ಪ್ರಕಾಶ್ ರಾಜ್ ತಂಡದಲ್ಲಿ ಘಟಾನುಘಟಿ ಕಲಾವಿದರು

'ಯಾವುದೋ ಒಂದು ಘಟನೆ ನನಗೆ ಈ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿಲ್ಲ. ಕಳೆದ ವರ್ಷ ನಡೆದ ಸಾಕಷ್ಟು ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಆ ಬಗ್ಗೆ ನಾನು ತುಂಬ ಯೋಚಿಸಿದ್ದೇನೆ. ಇರುವ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧವಾಗಿದ್ದೇನೆ. ಅದಕ್ಕಾಗಿ ಒಂದು ಸುಂದರ ತಂಡವನ್ನು ರೂಪಿಸಿದ್ದೇನೆ. ಮಾ (MAA) ಸಂಘವು ಸುಸ್ಥಿರವಾಗಿಲ್ಲ' ಎಂದು ಪ್ರಕಾಶ್ ರೈ ಹೇಳಿದ್ದಾರೆ. ಇನ್ನು, ಪ್ರಕಾಶ್ ರೈ ಅವರ ತಂಡದಲ್ಲಿ ಜಯಸುಧಾ, ಶ್ರೀಕಾಂತ್, ಬ್ಯಾನರ್ಜಿ, ಸಾಯಿಕುಮಾರ್, ತನೀಶ್, ಪ್ರಗತಿ, ಅನುಸೂಯಾ, ಸನಾ, ಅನಿತಾ ಚೌಧರಿ, ಸುಧಾ, ಅಜಯ್‌, ನಾಗಿನೀಡು, ಬ್ರಹ್ಮಾಜೀ, ರವಿ ಪ್ರಕಾಶ್, ಉತ್ತೇಜ್, ಸಮೀರ್, ಬಂಡ್ಲ ಗಣೇಶ್, ಶ್ರೀರಾಮ್, ಶಿವ ರೆಡ್ಡಿ, ಭೂಪಾಲ್‌, ಸುರೇಶ್, ಕೊಂಡೇಟಿ, ಗೋವಿಂದ ರಾವ್ ಸೇರಿದಂತೆ 26 ಮಂದಿ ಕಲಾವಿದರು ಇದ್ದಾರೆ.

ರಾಜೀವ್ ಗಾಂಧಿ ಹತ್ಯೆ ಅಪರಾಧಿಯನ್ನು ರಿಲೀಸ್ ಮಾಡಿ: ನಟ ಪ್ರಕಾಶ್ ರೈ, ವಿಜಯ್ ಸೇತುಪತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌