ಆ್ಯಪ್ನಗರ

ಮದುವೆ ಮಾಡಿದ್ರೆ ಹುಡುಗ ಸರಿಹೋಗ್ತಾನಾ?

ಸಿನಿಮಾಗಳು ಸಾಮಾನ್ಯವಾಗಿ ಹಾಡುಗಳು, ಟ್ರೇಲರ್ ಮೂಲಕ ಗಮನಸೆಳೆಯುತ್ತವೆ. ಇಲ್ಲೊಂದು ಸಿನಿಮಾ ಟೈಟಲ್‌ನಿಂದಲೇ ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದೆ. ಆ ಸಿನಿಮಾ ಯಾವುದು? ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Vijaya Karnataka Web 12 Jan 2020, 2:03 pm
ಸ್ಯಾಂಡಲ್‌ವುಡ್‌ನಲ್ಲಿ ಈಗ ಡಿಫರೆಂಟ್ ಟೈಟಲ್‌ಗಳದ್ದೇ ಜಮಾನ. ಬರೀ ಟೈಟಲ್‌ಗಳಿಂದಲೇ ಗಮನಸೆಳೆದು ಚಿತ್ರಮಂದಿರ ಭರ್ತಿಯಾದ ಉದಾಹರಣೆಗಳು ಇವೆ. ಸದ್ಯ ಕನ್ನಡದದಲ್ಲೊಂದು ಅಂಥದ್ದೇ ಸಿನಿಮಾ ಬರ್ತಿದೆ. ಟೈಟಲ್‌ನಿಂದಲೇ ಈ ಸಿನಿಮಾ ಗಮನಸೆಳೆಯುತ್ತಿದೆ. ಈ ಹಿಂದೆ 'ರಂಕಲ್‌ ರಾಟೆ' ಸಿನಿಮಾ ಮಾಡಿದ್ದ ನಿರ್ದೇಶಕ. ಗೋಪಿ ಕೇರೂರು ಈಗ ಮತ್ತೊಂದು ಸಿನಿಮಾ ಮಾಡಿದ್ದಾರೆ. ಅಂದಹಾಗೆ, ಇದರ ಶೀರ್ಷಿಕೆ 'ಮದುವೆ ಮಾಡ್ರೀ ಸರಿಹೋಗ್ತಾನೆ'.
Vijaya Karnataka Web ಮದುವೆ


ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇತ್ತೀಚೆಗೆ ಟೀಸರ್‌ ಬಿಡುಗಡೆ ಮಾಡಿದೆ. 'ಪೂರ್ತಿ ಸಿನಿಮಾ ಉತ್ತರ ಕರ್ನಾಟಕ ಭಾಷೆಯಲ್ಲಿದೆ. ಕಮರ್ಷಿಯಲ್‌ ಸಿನಿಮಾ ಇದಾಗಿದ್ದು, ಆ ಭಾಗದಲ್ಲೇ ಚಿತ್ರೀಕರಿಸಲಾಗಿದೆ. ಊರಲ್ಲಿ ಸೋಮಾರಿ ಹುಡುಗನೊಬ್ಬನ ಮದುವೆಯ ಕಥೆ ಇದಾಗಿದೆ. ಅಕ್ಕಪಕ್ಕದವರಿಂದ ಬೈಯಿಸಿಕೊಳ್ಳುವ ಹುಡುಗನೊಬ್ಬ, ಅಂತಿಮವಾಗಿ ಹೇಗೆ ಅದೇ ಊರ ಜನರಿಗೆ ಇಷ್ಟವಾಗುತ್ತಾನೆ ಎಂಬುದು ಕಥೆ. ವಿಶೇಷವೆಂದರೆ, ಈ ಚಿತ್ರದಲ್ಲಿ 11 ಹಾಡುಗಳಿವೆ. ಆದರೆ, ಎಲ್ಲವೂ ಕಥೆಗೆ ಪೂರಕವಾಗಿವೆ' ಎಂಬುದು ನಿರ್ದೇಶಕ ಗೋಪಿ ಹೇಳಿಕೆ.

ಈ ಸಿನಿಮಾ ಮೂಲಕ ಶಿವ ಚಂದ್ರಕುಮಾರ್‌ ಚೊಚ್ಚಲ ಬಾರಿಗೆ ಹೀರೋ ಆಗಿದ್ದಾರೆ. ಆಡಿಷನ್‌ ಮೂಲಕ ಚಿತ್ರಕ್ಕೆ ಸೆಲೆಕ್ಟ್ ಆಗಿದ್ದಾರಂತೆ. 'ಈ ಸಿನಿಮಾ ನನಗೆ ದೊಡ್ಡ ಬ್ರೇಕ್ ನೀಡಲಿದೆ. ನಾನಿಲ್ಲಿ ಪಡ್ಡೆ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಎಲ್ಲರಿಂದಲೂ ಬೈಯಿಸಿಕೊಳ್ಳುವ ಪಾತ್ರ ನನ್ನದು. ನನಗೆ ಮದುವೆ ಆದರೆ ಎಲ್ಲವು ಸರಿಹೋಗುತ್ತದೆ ಎಂಬುದು ಎಲ್ಲರ ನಂಬಿಕೆ ಆಗಿರುತ್ತದೆ' ಎಂದು ಪಾತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ಶಿವ.

ಮತ್ತೆ ಚಮಕ್‌ ಕೊಡೋಕೆ ಬರುತ್ತಿದ್ದಾರೆ ಗಣೇಶ್‌-ಸುನಿ; ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್‌ ಮಾಹಿತಿ ಇಲ್ಲಿದೆ

ಇದೇ ಮೊದಲ ಬಾರಿಗೆ ಶಿವರಾಜ್‌ ಲಕ್ಷ್ಮಣ ರಾವ್‌ ದೇಸಾಯಿ ಈ ಸಿನಿಮಾಗೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿದ್ದಾರೆ. ನಿರ್ದೇಶಕರಿಗೆ ಮೊದಲಿನಿಂದಲೂ ಗೆಳೆಯರಾಗಿದ್ದ ಶಿವರಾಜ್‌, ಬರೀ ಶೀರ್ಷಿಕೆ ಕೇಳಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾದರಂತೆ. ಇಡೀ ಸಿನಿಮಾ ಉತ್ತರ ಕರ್ನಾಟಕದದಲ್ಲಿ ಚಿತ್ರೀಕರಣಗೊಂಡಿರುವುದರ ಜೊತೆಗೆ, ಆ ಭಾಗದ ಭಾಷೆಯನ್ನೇ ಬಳಕೆ ಮಾಡಿರುವುದು ನಿರ್ಮಾಪಕರ ಖುಷಿಗೆ ಕಾರಣ.

ಪ್ರಶಸ್ತಿ ಬಂದಾಗ ನಂಬೋಕೆ ಆಗಲಿಲ್ಲ: ರಾಘಣ್ಣ

ಚಿತ್ರದ 11 ಹಾಡುಗಳಿಗೆ ಅವಿನಾಶ್‌ ಬಾಸೂತ್ಕರ್‌ ಸಂಗೀತ ನೀಡಿದ್ಧಾರೆ. ಸಾಕಷ್ಟು ಲೈವ್‌ ವಾದ್ಯಗಳನ್ನು ಬಳಸಿಕೊಂಡಿದ್ದಾರಂತೆ. ರಂಗಕರ್ಮಿ ಕೃಷ್ಣಮೂರ್ತಿ ಕವಾತ್ತರ್‌ ನೆಗೆಟಿವ್‌ ಪಾತ್ರ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌