ಆ್ಯಪ್ನಗರ

ಹಾಲಿವುಡ್‌ ಸಿಲ್ವರ್‌ ಸ್ಕ್ರೀನ್‌ ಫೆಸ್ಟಿವಲ್‌ಗೆ ಕನ್ನಡದ ಕಿರುಚಿತ್ರ ಆಯ್ಕೆ

ಮಹಾನ್ ಹುತಾತ್ಮ ಕಿರುಚಿತ್ರವು ಅಕ್ಷಯ್ ಎಂಟರ್ಟೈನ್ಮೆಂಟ್ ಮತ್ತು ಪುರಾಣಿಕ್ ಪ್ರೊಡಕ್ಷನ್ಸ್ ಸಂಯೋಜನೆಯಲ್ಲಿ ಮೂಡಿಬಂದಿರುವ ಸಿನಿಮಾ. ಭಗತ್ ಸಿಂಗ್ ಅವರ ಕಥೆಯನ್ನು ಸ್ಪೂರ್ತಿಯಾಗಿಟ್ಟುಕೊಂಡು ಕುತೂಹಲಕರ ರೀತಿಯಲ್ಲಿ ಹೆಣೆದಿರುವ ಕಥೆ ಈ ಮಹಾನ್ ಹುತಾತ್ಮ ಹಾಲಿವುಡ್‌ ಸಿಲ್ವರ್‌ ಸ್ಕ್ರೀನ್‌ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ.

Vijaya Karnataka 13 Nov 2019, 1:12 pm
ನಟಿ ಅದ್ವಿತಿ ಶೆಟ್ಟಿ ನಟನೆಯ 'ಮಹಾನ್‌ ಹುತಾತ್ಮ' ಕಿರುಚಿತ್ರ ಈಗ 2019ರ ಹಾಲಿವುಡ್‌ ಸಿಲ್ವರ್‌ ಸ್ಕ್ರೀನ್‌ ಫೆಸ್ಟಿವಲ್‌ಗೆ ಅಧಿಕೃತವಾಗಿ ಆಯ್ಕೆಯಾಗಿದೆ. ಈಗಾಗಲೇ ಈ ಕಿರು ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ಗಳಿಸಿದ್ದು, ಒಂದಾದ ಮೇಲೆ ಒಂದರಂತೆ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸುತ್ತಿದೆ.
Vijaya Karnataka Web ಅದ್ವಿತಿ ಶೆಟ್ಟಿ


ಮಹಾನ್‌ ಹುತಾತ್ಮ ಕಿರುಚಿತ್ರ ಈಗಾಗಲೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ 14ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಸಾಗರ್‌ ಪುರಾಣಿಕ್‌ ನಿರ್ದೇಶನದ ಕಿರುಚಿತ್ರದಲ್ಲಿ ಅಕ್ಷಯ್‌ ಚಂದ್ರಶೇಖರ್‌, ಅದ್ವಿತಿ ಶೆಟ್ಟಿ ನಟಿಸಿದ್ದಾರೆ. ಹಿರಿಯ ನಟ ಶ್ರೀನಾಥ್‌ ಕೂಡಾ ಮುಖ್ಯ ಪಾತ್ರವೊಂದರಲ್ಲಿಕಾಣಿಸಿಕೊಂಡಿರುವುದು ವಿಶೇಷ.

ಫ್ಯಾನ್‌ಗಳ ಭ್ರಮೆ ಕಳಚುವ ಚಿತ್ರ: ಫ್ಯಾನ್ ಚಿತ್ರ ವಿಮರ್ಶೆ

ಸ್ವಾತಂತ್ರ ಹೋರಾಟಗಾರರು ಮತ್ತು ಇಂದಿನವರೆಗೆ ಮಡಿದ ಸೈನಿಕರ ಸ್ಮರಣಾರ್ಥ ಈ ಕಿರುಚಿತ್ರ ತಯಾರಿಸಲಾಗಿದೆ. ಸ್ವಾತಂತ್ರ್ಯಹೋರಾಟಗಾರ ಭಗತ್‌ ಸಿಂಗ್‌ ಕುರಿತಾಗಿಯೂ ಕಿರುಚಿತ್ರದಲ್ಲಿ ಹೇಳಲಾಗಿದೆ. ಇಂದಿನ ಸೈನಿಕರ ಬಗ್ಗೆಯೂ ನಿರ್ದೇಶಕರು ಪ್ರಸ್ತಾಪಿಸಿದ್ದು, ವಿಭಿನ್ನವಾದ ನಿರೂಪಣೆಯಿಂದ ಕೂಡಿದೆ. 'ಚಿತ್ರದಲ್ಲಿ ಎಲ್ಲವನ್ನೂ ಮಿಕ್ಸ್‌ ಮಾಡಿ ಹೇಳಿದ್ದೇವೆ. ವಾರ್‌ ಸನ್ನಿವೇಶವನ್ನೂ ತೋರಿಸಿದ್ದೇವೆ. ನಮ್ಮ ಪ್ರಯತ್ನ, ಶ್ರಮ ಸಾರ್ಥಕ ಎನ್ನಿಸುತ್ತಿದೆ' ಎಂದಿದ್ದಾರೆ ನಿರ್ದೇಶಕ ಸಾಗರ್‌ ಪುರಾಣಿಕ್‌.

ದರ್ಶಿತ್‌ ಶೆಟ್ಟಿ ನಿರ್ದೇಶನದ 'ಫ್ಯಾನ್‌' ಸಿನಿಮಾದಲ್ಲಿ ಶಂಕರ್‌ನಾಗ್‌

34 ನಿಮಿಷಗಳ ಕಿರುಚಿತ್ರ ಇದು. ಇಂಡೋ ಗ್ಲೋಬಲ್‌ ಫಿಲ್ಮ್‌ ಫೆಸ್ಟಿವಲ್‌, ಜೈಪುರ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಸೇರಿದಂತೆ ಅನೇಕ ಚಿತ್ರೋತ್ಸವಗಳಿಗೆ ಅಧಿಕೃತವಾಗಿ ಆಯ್ಕೆಯಾಗಿ ಪ್ರದರ್ಶನ ಕಂಡಿದೆ.

ನಟಿ ಅದ್ವಿತಿ ಶೆಟ್ಟಿ ಇತ್ತೀಚೆಗೆ ಫ್ಯಾನ್‌ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 'ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವುದು ಬೇರೆ, ಇಂಥ ಕಿರುಚಿತ್ರಗಳಲ್ಲಿ ನಟಿಸೋದು ಬೇರೆ. ನನಗೆ ಕಿರುಚಿತ್ರದ ಸಬ್ಜೆಕ್ಟ್ ಬಹಳ ಇಷ್ಟವಾಯ್ತು. ಹಾಗಾಗಿ ನಟಿಸಲು ಒಪ್ಪಿದೆ. ಈಗ ರಾಷ್ಟ್ರ ಪ್ರಶಸ್ತಿ ಜತೆ ಇಷ್ಟೊಂದು ಪ್ರಶಸ್ತಿಗಳು ಬರುತ್ತಿರುವುದು ತುಂಬಾ ಖುಷಿ ಕೊಟ್ಟಿದೆ' ಎಂದಿದ್ದಾರೆ ಅದ್ವಿತಿ. ಈಗ ಕಾರ್ಮೋಡ ಸರಿದು, ಮತ್ತಿತರ ಚಿತ್ರಗಳಲ್ಲಿನಟಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌