ಆ್ಯಪ್ನಗರ

ರಿಯಲ್ ಲೈಫ್‌ನಲ್ಲಿಯೂ ಇಂಥ ಕೆಲಸ ಮಾಡಿ ಜನರಿಂದ ಛೀಮಾರಿ ಹಾಕಿಸಿಕೊಂಡ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್?

ಸಿನಿಮಾದಲ್ಲಿ ಸ್ಟಾರ್ ನಟರು ಏನೇನೋ ದುಸ್ಸಾಹಸ ಮಾಡುತ್ತಾರೆ. ಆದರೆ ರಿಯಲ್ ಲೈಫ್‌ನಲ್ಲಿಯೂ ಈ ರೀತಿ ಮಾಡಿದರೆ ಏನು ಹೇಳಬೇಕು? ಪ್ರಖ್ಯಾತ ನಟರಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಅವರು ಕೂಡ ಇಂತಹ ಕೆಲಸಕ್ಕೆ ಕೈಹಾಕಿದ್ದರು ಎನ್ನಲಾಗುತ್ತಿದೆ.

Vijaya Karnataka Web 24 Jul 2020, 4:11 pm
ಸಿನಿಮಾಗಳಲ್ಲಿ ಹೀರೋಗಳು, ವಿಲನ್ ಬೈಕ್ ಅಥವಾ ಕಾರ್ ಮುಂತಾದ ವಾಹನದಿಂದ ಅತಿವೇಗದಿಂದ ಓಡಿಸುವುದನ್ನು ಕಣ್ಣು ಕಣ್ಣು ಬಿಟ್ಟುಕೊಂಡು ನೋಡಿರುತ್ತೇವೆ, ಆದರೆ ರಿಯಲ್ ಲೈಫ್‌ನಲ್ಲಿಯೂ ಕೂಡ ಅತಿವೇಗದಿಂದ ಕಾರ್ ಓಡಿಸಿ ಇಬ್ಬರು ನಟರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.
Vijaya Karnataka Web malayalam actor dulquer salmaan and prithviraj sukumaran car race video goes viral
ರಿಯಲ್ ಲೈಫ್‌ನಲ್ಲಿಯೂ ಇಂಥ ಕೆಲಸ ಮಾಡಿ ಜನರಿಂದ ಛೀಮಾರಿ ಹಾಕಿಸಿಕೊಂಡ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್?


'ಡ್ರೈವಿಂಗ್ ಲೈಸೆನ್ಸ್' ಸಿನಿಮಾ ಮಾಡಿದ್ದ ನಟ ಪ್ರಥ್ವಿರಾಜ್!

ಸ್ಟಾರ್ ಹೀರೋಗಳ ಬಳಿ ಬಹಳ ಲಕ್ಷುರಿಯಾದ ಕಾರುಗಳಿರುತ್ತವೆ. ಕನ್ನಡದ ಎಷ್ಟೋ ನಟರ ಬಳಿ ತುಂಬ ಬೆಲೆ ಬಾಳುವ ಕಾರುಗಳಿವೆ. ಮಲಯಾಳಂ ಚಿತ್ರರಂಗದ ಸ್ಟಾರ್ ಹೀರೋಗಳಾದ ನಟ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಅವರು ಸಿನಿಮಾದಲ್ಲಿ ತುಂಬ ಸ್ಪೀಡ್ ಆಗಿ ವಾಹನ ಚಲಾಯಿಸಿದ್ದಲ್ಲದೆ, ರಿಯಲ್ ಲೈಫ್‌ನಲ್ಲಿಯೂ ಈ ದುಸ್ಸಾಹಸಕ್ಕೆ ಕೈಹಾಕಿ ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.

2019ರಲ್ಲಿ ನಟ ಪೃಥ್ವಿರಾಜ್ ನಟನೆಯ 'ಡ್ರೈವಿಂಗ್ ಲೈಸೆನ್ಸ್' ಸಿನಿಮಾ ರಿಲೀಸ್ ಆಗಿತ್ತು. ಹೇಗಾದರೂ ಮಾಡಿ ಲೈಸೆನ್ಸ್ ಪಡೆಯಬೇಕು ಎನ್ನುವ ಕಥಾನಾಯಕನ ಲೈಫ್‌ನಲ್ಲಿ ಏನೇನೆಲ್ಲ ಆಗುತ್ತದೆ ಎಂಬುದೇ ಈ ಸಿನಿಮಾದ ಒನ್‌ಲೈನ್ ಸ್ಟೋರಿಯಾಗಿತ್ತು. ಈ ಚಿತ್ರ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು.

Also Read-ಸಿನಿಮಾಕ್ಕೆ ಬರುವ ಮುನ್ನ, ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೇಕೆ ದುಲ್ಕರ್ ಸಲ್ಮಾನ್?

ದುಲ್ಕರ್-ಪ್ರಥ್ವಿರಾಜ್ ಕಾರ್ ರೇಸ್ ಸೆರೆಹಿಡಿದ ಯುವಕರು!
ಕೊಟ್ಟಯಾಮ್-ಕೋಚಿ ಹೆದ್ದಾರಿಯಲ್ಲಿ ನಟ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಅವರ ಲಕ್ಷುರಿ ಕಾರ್‌ ತೆಗೆದುಕೊಂಡು ರೇಸ್‌ಗಿಳಿದಿದ್ದಾರೆ. ಅತಿ ವೇಗವಾಗಿ ಇವರು ಕಾರ್ ಚಲಾಯಿಸಿದ್ದಾರೆ. ಇಬ್ಬರು ಯುವಕರು ಈ ವಿಡಿಯೋವನ್ನು ಬೈಕ್‌ನಲ್ಲಿ ಹೋಗಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗುತ್ತಿದೆ. Porsche ಮತ್ತು Lamborghini ಕಾರ್‌ಗಳನ್ನು ಈ ನಟರು ಕಾರ್‌ ರೇಸ್‌ಗೆ ಬಳಸಿದ್ದಾರೆ ಎನ್ನಲಾಗುತ್ತಿದೆ.

Also Read-ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಪ್ರಖ್ಯಾತ ನಟ ದುಲ್ಕರ್ ಸಲ್ಮಾನ್; ಇವರ ಪತ್ನಿ ಯಾರು?

ಅಧಿಕಾರಿಗಳು ಇದರ ಬಗ್ಗೆ ಹೇಳಿದ್ದೇನು?
'ಕೊಟ್ಟಯಾಮ್-ಕೋಚಿ ಹೆದ್ದಾರಿಯಲ್ಲಿ ಹಾಕಿರುವ ಕ್ಯಾಮರಾಗಳಿಂದ ( speed-detecting camera) ಈ ನಟರು ಅತಿವೇಗವಾಗಿ ಕಾರು ಚಲಾಯಿಸಿದ್ದಾರಾ ಇಲ್ಲವಾ ಎಂದು ತಿಳಿಯಲಾಗುವುದು. ಅದರ ಜೊತೆಗೆ ವಾಹನದ ಸ್ಪೀಡ್ ಕಂಡುಹಿಡಿಯಲು ಪ್ರೋಬ್ ಎಂಬ ಉಪಕರಣ ಕೂಡ ಬಳಸಲಾಗುವುದು. ಕಾರ್‌ಗಳು ಸ್ಪೀಡ್ ಆಗಿ ಹೋಗುತ್ತಿವೆ ಎಂದು ವಿಡಿಯೋದಲ್ಲಿ ಕಾಣಿಸುತ್ತಿಲ್ಲ, ಇವುಗಳನ್ನು ಚೇಸ್ ಮಾಡಲು ಬೈಕ್ ತುಂಬ ತುಂಬ ಸ್ಪೀಡ್ ಆಗಿ ಹೋದಂತೆ ಕಾಣುತ್ತಿದೆ' ಎಂದು ಮೋಟಾರ್ ವೆಹಿಕಲ್ ಡಿಪಾರ್ಟ್‌ಮೆಂಟ್ ಕಮಿಷನರ್ ರಾಜೀವ್ ಮಾಧ್ಯಮಗಳಿಗೆ ಹೇಳಿದ್ದಾರೆ. ಈ ವಿಡಿಯೋ ಯಾವಾಗ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಕೂಡ ಮಾಹಿತಿ ಇಲ್ಲ. ಕ್ಯಾಮರಾಗಳು ಕೂಡ ಅಷ್ಟೊಂದು ಚೆನ್ನಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇದರ ಕುರಿತು ತನಿಖೆ ಮಾಡುವುದು ಸ್ವಲ್ಪ ಕಷ್ಟ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌