ಆ್ಯಪ್ನಗರ

'ಈ ಮಗು ಕ್ಯೂಟ್‌ ಆಗಿದೆ; ಆದರೆ ಇದು ಜೂನಿಯರ್‌ ಚಿರು ಅಲ್ಲ': ಮೇಘನಾ ರಾಜ್‌ ಹೀಗೆ ಹೇಳಿದ್ದೇಕೆ?

ನಟಿ ಮೇಘನಾ ರಾಜ್‌ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಲವು ಸುದ್ದಿಗಳು ಹರಿದಾಡುತ್ತಿವೆ. ಅವುಗಳ ಬಗ್ಗೆ ಮೇಘನಾ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮಗನ ಕುರಿತು ಹಬ್ಬಿರುವ ಕೆಲವು ವದಂತಿಗಳಿಗೆ ಅವರು ಬ್ರೇಕ್‌ ಹಾಕಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Authored byಟೀನಾ | Vijaya Karnataka Web 16 Dec 2020, 12:29 pm
'ಈ ಮಗು ನಿಜಕ್ಕೂ ಮುದ್ದಾಗಿದೆ. ಆದರೆ ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಇದು ಜೂನಿಯರ್‌ ಚಿರು ಅಲ್ಲ' ಎಂದು ನಟಿ ಮೇಘನಾ ರಾಜ್‌ ಪೋಸ್ಟ್‌ ಮಾಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಮೇಘನಾ ಯಾಕೆ ಈ ರೀತಿ ಹೇಳಿದರು? ಯಾವ ಮಗುವಿನ ಬಗ್ಗೆ ಅವರು ಮಾತನಾಡಿದ್ದಾರೆ? ಅದಕ್ಕೆಲ್ಲ ಉತ್ತರ ಈ ಲೇಖನದಲ್ಲಿದೆ.
Vijaya Karnataka Web ಮೇಘನಾ ರಾಜ್‌


ವೈರಲ್‌ ಆಗಿವೆ ವಿಡಿಯೋಗಳು
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ದಂಪತಿಯ ಪುತ್ರ ಜನಿಸಿದ ದಿನವೇ ಫೋಟೋಗಳು ವೈರಲ್‌ ಆಗಿದ್ದವು. ಚಿರು ಅಭಿಮಾನಿಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಶೇರ್‌ ಮಾಡಿಕೊಂಡಿದ್ದರು. ನಂತರ ಮಗುವಿನ ತೊಟ್ಟಿಲ ಶಾಸ್ತ್ರದ ಫೋಟೋಗಳು ಕೂಡ ವೈರಲ್‌ ಆಗಿದ್ದವು. ಅದೇ ರೀತಿ, ಈಗ ಕೆಲವು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದರ ಬಗ್ಗೆ ಮೇಘನಾ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
'ಮೇಘನಾ-ಚಿರು ಮಗು' ಎಂದು ಕ್ಯಾಪ್ಷನ್‌ ಹೊಂದಿರುವ ಕೆಲವು ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಆದರೆ ನಿಜವಾಗಿಯೂ ಆ ಮಗು ಮೇಘನಾ-ಚಿರು ದಂಪತಿಯದ್ದಲ್ಲ. ಬೇರೆ ಯಾವುದೋ ಮಗುವಿನ ವಿಡಿಯೋವನ್ನು ಈ ರೀತಿ ಅಪ್‌ಲೋಡ್‌ ಮಾಡಿ, ಅಭಿಮಾನಿಗಳನ್ನು ನಂಬಿಸುವ ಪ್ರಯತ್ನ ನಡೆಯುತ್ತಿದೆ. ಅದು ಮೇಘನಾ ರಾಜ್‌ ಗಮನಕ್ಕೂ ಬಂದಿದೆ. ಅಂತಹ ಒಂದು ಫೇಕ್‌ ವಿಡಿಯೋ ಸ್ಕ್ರೀನ್‌ ಶಾಟ್‌ ಅನ್ನು ಶೇರ್‌ ಮಾಡಿಕೊಂಡಿರುವ ಮೇಘನಾ, ಸ್ಪಷ್ಟನೆ ನೀಡಿದ್ದಾರೆ. 'ಈ ಮಗು ನಿಜಕ್ಕೂ ಮುದ್ದಾಗಿದೆ. ಆದರೆ ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಇದು ಜೂನಿಯರ್‌ ಚಿರು ಅಲ್ಲ' ಎಂದು ಅವರು ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ತಿಳಿಸಿದ್ದಾರೆ.

also read: Photos: ಮೇಘನಾ ರಾಜ್‌ ಸರ್ಜಾ ಪುತ್ರನ ತೊಟ್ಟಿಲು ಶಾಸ್ತ್ರದ ಕಲರ್‌ಫುಲ್‌ ಫೋಟೋ ಆಲ್ಬಂ!

ಇದೇ ಮೊದಲೇನಲ್ಲ!
ಚಿರು ಪುತ್ರನ ವಿಚಾರದಲ್ಲಿ ಈ ರೀತಿ ಆಗಿರುವುದು ಇದೇ ಮೊದಲೇನಲ್ಲ! ಮೇಘನಾ ರಾಜ್‌ ತುಂಬ ಗರ್ಭಿಣಿ ಆಗಿದ್ದಾಗಲೂ ಕೂಡ ಅನೇಕ್‌ ಫೇಕ್‌ ಪೋಸ್ಟ್‌ಗಳು ವೈರಲ್‌ ಆಗಿದ್ದವು. ಮೇಘನಾಗೆ ಅವಳಿ ಮಕ್ಕಳು ಜನಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದೂ ಅಲ್ಲದೇ ಅದಕ್ಕೆ ತಕ್ಕಂತೆ ಫೋಟೋಗಳನ್ನು ಎಡಿಟ್‌ ಮಾಡಿ ಕೂಡ ಹರಿಬಿಡಲಾಗಿತ್ತು. ಇನ್ನು, ಇತ್ತೀಚೆಗೆ ಮೇಘನಾ ರಾಜ್‌ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ವೈರಸ್‌ ಪಾಸಿಟಿವ್‌ ಆಗಿರುವ ಸುದ್ದಿ ಹೊರಬಿದ್ದಿತ್ತು. ಅದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳೆಲ್ಲ ಪ್ರಾರ್ಥಿಸಿದ್ದಾರೆ.

also read: ಚಿರು ಪುತ್ರ & ಮೇಘನಾ ರಾಜ್‌ ಸೇರಿದಂತೆ ಇಡೀ ಸುಂದರ್‌ ರಾಜ್‌ ಕುಟುಂಬಕ್ಕೆ ಕೊರೊನಾ ಪಾಸಿಟಿವ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌