ಆ್ಯಪ್ನಗರ

ಉಪ್ಪಿ ಕುಟುಂಬದ ನಿರಂಜನ್ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಪ್ರಭುದೇವ ತಂದೆ ಸುಂದರ್‌!

ಉಪೇಂದ್ರ ಸಹೋದರ ಸುಧೀಂದ್ರ ಅವರ ಪುತ್ರ ನಿರಂಜನ್ ಈಗ ಹೀರೋ ಆಗಿದ್ದಾರೆ. ಅವರ ಚೊಚ್ಚಲ ಸಿನಿಮಾಕ್ಕೆ 'ಸೂಪರ್ ಸ್ಟಾರ್' ಎಂದು ಹೆಸರು ಇಡಲಾಗಿದೆ. ಇದೀಗ ಆ ಸಿನಿಮಾದಿಂದ ಒಂದು ಅಪ್‌ಡೇಟ್ ಹೊರಬಿದ್ದಿದೆ. ಆ ಕುರಿತು ಇಲ್ಲಿದೆ ಮಾಹಿತಿ.

Vijaya Karnataka Web 12 Nov 2020, 2:50 pm
'ರಿಯಲ್ ಸ್ಟಾರ್' ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಚೊಚ್ಚಲ ಬಾರಿಗೆ ಹೀರೋ ಆಗಿರುವ 'ಸೂಪರ್ ಸ್ಟಾರ್' ಸಿನಿಮಾವು ಕೆಲ ತಿಂಗಳ ಹಿಂದಷ್ಟೇ ಲಾಂಚ್ ಆಗಿತ್ತು. ಉಪೇಂದ್ರ-ಪ್ರಿಯಾಂಕಾ ಉಪೇಂದ್ರ ಮುಂದೆ ನಿಂತು ಆ ಸಿನಿಮಾದ ಟೀಸರ್‌ವೊಂದನ್ನು ರಿಲೀಸ್ ಮಾಡಿ, ಶುಭ ಹಾರೈಸಿದ್ದರು. ಇದೀಗ ಆ ಸಿನಿಮಾ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ಪ್ರಭುದೇವ ಅವರ ತಂದೆ, ಹಿರಿಯ ನೃತ್ಯ ನಿರ್ದೇಶಕ ಮೂಗೂರ್ ಸುಂದರ್ ಅವರು 'ಸೂಪರ್ ಸ್ಟಾರ್' ಬಳಗಕ್ಕೆ ಕಾಲಿಟ್ಟಿದ್ದಾರೆ.
Vijaya Karnataka Web mugur sundar Niranjan Sudhindra


ಮಹತ್ವದ ಪಾತ್ರದಲ್ಲಿ ಸುಂದರ್‌
ಮೂಗೂರ್ ಸುಂದರ್ ಅವರು 'ಸೂಪರ್ ಸ್ಟಾರ್' ಸಿನಿಮಾದಲ್ಲಿ ಎಂಥ ಪಾತ್ರ ಮಾಡಲಿದ್ದಾರೆ ಎಂಬ ಬಗ್ಗೆ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಇದು ಬಹಳ ಮಹತ್ವದ ಪಾತ್ರ ಎಂಬುದು ತಿಳಿದುಬಂದಿದೆ. ಮೂಗೂರ್ ಸುಂದರ್ ಅವರಿಂದಲೇ ಈ ಪಾತ್ರ ಮಾಡಿಸಬೇಕು ಎಂದುಕೊಂಡು ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದರಂತೆ. ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡೆ ಈ ಪಾತ್ರ ಬರೆದಿದ್ದಾರೆ. 82ರ ಹರೆಯದ ಸುಂದರ್ ಅವರು ಡಿಸೆಂಬರ್‌ನಲ್ಲಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ನೃತ್ಯ ನಿರ್ದೇಶನದ ಜೊತೆಗೆ ನಟನೆ
70-80ರ ದಶಕದಲ್ಲಿ ದಕ್ಷಿಣ ಭಾರತದ ಬೇಡಿಕೆಯ ನೃತ್ಯ ನಿರ್ದೇಶಕರಾಗಿದ್ದ ಮೂಗೂರ್ ಸುಂದರ್, 2002ರಲ್ಲಿ ಪುತ್ರ ನಾಗೇಂದ್ರ ಪ್ರಸಾದ್‌ ನಾಯಕತ್ವದಲ್ಲಿ 'ಮನಸೆಲ್ಲಾ ನೀನೆ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. 'ಶಂಕರ್‌ದಾದಾ ಜಿಂದಾಬಾದ್', 'ತಬ್ಬಲಿ', 'ಜಾನಿ' ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳಿನ 'ಪ.ರಾ. ಪಳನಿಸ್ವಾಮಿ' ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದರು. ಈಗ 'ಸೂಪರ್ ಸ್ಟಾರ್' ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಅವರ ಪುತ್ರ ಪ್ರಭುದೇವ ನಿರ್ದೇಶಕರಾಗಿ ಸಖತ್ ಬೇಡಿಕೆಯಲ್ಲಿದ್ದಾರೆ. ಇನ್ನಿಬ್ಬರು ಪುತ್ರರಾದ ರಾಜು ಸುಂದರಂ ಮತ್ತು ನಾಗೇಂದ್ರ ಪ್ರಸಾದ್ ನಟನೆ-ನೃತ್ಯ ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾರೆ.

'ಸೂಪರ್‌ ಸ್ಟಾರ್‌' ಟೈಟಲ್‌ ಮೇಲೆ ಕಣ್ಣಿಟ್ಟ ಉಪೇಂದ್ರ ಸಹೋದರನ ಪುತ್ರ ನಿರಂಜನ್‌!

ಡ್ಯಾನ್ಸರ್ ಪಾತ್ರದಲ್ಲಿ ನಿರಂಜನ್
ಇನ್ನು, 'ಸೂಪರ್ ಸ್ಟಾರ್' ಚಿತ್ರದಲ್ಲಿ ನಿರಂಜನ್ ಟಾಪ್ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ನಿರಂಜನ್ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಆ.20ರಂದು ರಿಲೀಸ್ ಆದ ಟೀಸರ್‌ನಲ್ಲಿ ಆ ಬಗ್ಗೆ ತಿಳಿದಿತ್ತು. ಅಲ್ಲದೆ, 'ಸೂಪರ್ ಸ್ಟಾರ್' ಶೀರ್ಷಿಕೆಯಲ್ಲಿ ಈಗಾಗಲೇ ಉಪೇಂದ್ರ ಒಂದು ಸಿನಿಮಾ ಮಾಡಿರುವುದರಿಂದ, ಈ 'ಸೂಪರ್ ಸ್ಟಾರ್' ಯಾವ ರೀತಿಯಲ್ಲಿ ಇರಲಿದೆ ಎಂಬ ಬಗ್ಗೆ ಸಿನಿಪ್ರಿಯರಿಗೆ ನಿರೀಕ್ಷೆ ಇದೆ. ಸದ್ಯ ಚಿತ್ರಕ್ಕಿನ್ನೂ ನಾಯಕಿ ಯಾರೆಂದು ಗೊತ್ತಾಗಿಲ್ಲ. ನಿರ್ದೇಶಕ ರಮೇಶ್‌ ಅವರೇ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಅವರಿಗೆ ಮೈಲಾರಿ ಪ್ರೊಡಕ್ಷನ್ಸ್ ಸಾಥ್ ನೀಡಿದೆ.

ಉಪೇಂದ್ರ ಸಹೋದರನ ಮಗನ 'ಸೂಪರ್ ಸ್ಟಾರ್' ಪ್ರಾಜೆಕ್ಟ್‌ಗೆ ಸಾಥ್ ಕೊಟ್ಟ ನಟ ಯಶ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌