ಆ್ಯಪ್ನಗರ

ಹಾಲಿವುಡ್‌ನಲ್ಲಿ ಸೌಂಡ್‌ ಡಿಸೈನರ್‌ ಆಗಿ ಮಿಂಚುತ್ತಿರುವ ಮೈಸೂರಿನ ಸಂಪ್ರೀತ್‌

ಕನ್ನಡ ಸಿನಿಮಾದವರು ಎಲ್ಲಾ ಕಡೆ ಗುರುತಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಕನ್ನಡಿಗೊಬ್ಬರು ದೂರದ ಅಮೆರಿಕದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು, ಸಂಪ್ರೀತ್ ಅವರು ಹಾಲಿವುಡ್‌ ಸಿನಿಮಾಗಳಿಗೆ ಸೌಂಡ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಅವರು 'ಕಾಂತಾರ' ಸಿನಿಮಾದ 'ವರಾಹ ರೂಪಂ..' ಹಾಡಿಗೆ ಟ್ರ್ಯಾಪ್ ಬೀಟ್ ಮಿಕ್ಸ್ ಮಾಡಿ, ರಿಲೀಸ್ ಮಾಡಿದ್ದಾರೆ. ಅದು ಕೂಡ ಸಂಗೀತ ಪ್ರಿಯರ ಗಮನಸೆಳೆದಿದೆ. ಸಂಪ್ರೀತ್ ಕುರಿತ ಮಾಹಿತಿ ಇಲ್ಲಿದೆ ಓದಿ.

Authored byಅವಿನಾಶ್ ಜಿ. ರಾಮ್ | Vijaya Karnataka 5 Mar 2023, 12:13 pm

ಹೈಲೈಟ್ಸ್‌:

  • ಹಾಲಿವುಡ್‌ನಲ್ಲಿ ಸೌಂಡ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿರುವ ಮೈಸೂರಿನ ಸಂಪ್ರೀತ್‌
  • ಸಂಪ್ರೀತ್‌ ಅವರಿಗೆ ಕನ್ನಡ ಸಿನಿಮಾಗಳಿಗೆ ಕೆಲಸ ಮಾಡಬೇಕೆಂಬ ಹಂಬಲ
  • ರಿಷಬ್ ಶೆಟ್ಟಿಯ 'ಕಾಂತಾರ' ಚಿತ್ರದ 'ವರಾಹ ರೂಪಂ..' ಹಾಡಿಗೆ ಹೊಸ ರೂಪ ನೀಡಿದ ಸಂಪ್ರೀತ್‌

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web SAMPREETH (1)
ಹಾಲಿವುಡ್‌ನಲ್ಲಿ ಸೌಂಡ್‌ ಡಿಸೈನರ್‌ ಆಗಿ ಮಿಂಚುತ್ತಿರುವ ಮೈಸೂರಿನ ಸಂಪ್ರೀತ್‌
ಪ್ರತಿಭೆಗೆ ಬ್ಯಾರಿಕೇಡ್‌ಗಳಿಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಕನ್ನಡದ ಹಲವು ತಂತ್ರಜ್ಞರು ಬೇರೆ ಬೇರೆ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಮೈಸೂರಿನ ಸಂಪ್ರೀತ್‌ ನಿವೇದಿತಾ ಲೋಕೇಶ್‌ ಹಾಲಿವುಡ್‌ನಲ್ಲಿ ಸೌಂಡ್‌ ಡಿಸೈನರ್‌ ಆಗಿ ನೆಲೆ ಕಂಡುಕೊಂಡು ಅಲ್ಲಿನ ಹಲವು ಪ್ರಾಜೆಕ್ಟ್ಗಳಿಗೆ ಕೆಲಸ ಮಾಡುತ್ತಿದ್ದಾರೆ.
ಮೈಸೂರಿನ ನಿವೇದಿತಾ ಮತ್ತು ಲೋಕೇಶ್‌ ಅವರ ಪುತ್ರ ಸಂಪ್ರೀತ್‌ ಅಮೆರಿಕದಲ್ಲಿ ಸೌಂಡ್‌ ಡಿಸೈನರ್‌ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ಅಲ್ಲಿಯೇ ಕೆಲಸ ಆರಂಭಿಸಿರುವ ಅವರು ಈಗಾಗಲೇ ಹಲವು ಇಂಗ್ಲಿಷ್‌ ಸಿನಿಮಾಗಳಿಗೆ ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಸದ್ಯ ಒಂದು ಸ್ಟುಡಿಯೋದಲ್ಲಿ ಮ್ಯೂಸಿಕ್‌ ಪ್ರೊಡ್ಯೂಸರ್‌ ಮತ್ತು ಸೌಂಡ್‌ ಡಿಸೈನರ್‌ ಆಗಿದ್ದಾರೆ. ಈಗ ‘ಕಾಂತಾರ’ ಸಿನಿಮಾದ ‘ವರಾಹ ರೂಪಂ’ ಹಾಡಿಗೆ ಟ್ರ್ಯಾಪ್‌ ಬೀಟ್‌ ಹಾಕಿ ಅದನ್ನು ಬಿಡುಗಡೆ ಮಾಡಿದ್ದಾರೆ.

Varaha Roopam: ಕೋರ್ಟ್‌ನಲ್ಲಿ ತೀರ್ಮಾನವಾಯ್ತು; ಮತ್ತೆ ಎಲ್ಲೆಡೆ ಬಂತು 'ಕಾಂತಾರ' ಚಿತ್ರದ 'ವರಾಹ ರೂಪಂ‌' ಹಾಡು
ಕನ್ನಡದ ಸಿನಿಮಾಗಳಿಗೆ ಕೆಲಸ ಮಾಡಬೇಕು ಎಂಬ ಆಸೆ ಇದೆ
‘ನಾನು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಹಲವು ಇಂಗ್ಲಿಷ್‌ ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ಕನ್ನಡದವನಾದ್ದರಿಂದ ಮೊದಲಿನಿಂದಲೂ ಕನ್ನಡದ ಸಿನಿಮಾಗಳಿಗೆ ಕೆಲಸ ಮಾಡಬೇಕು ಎಂಬ ಆಸೆ ಇದೆ. ‘ಕಾಂತಾರ’ ಸಿನಿಮಾದ ವರಹಾರೂಪಂ ಹಾಡನ್ನು ನೋಡಿದಾಗ ಇದಕ್ಕೆ ಟ್ರ್ಯಾಪ್‌ ಬೀಟ್‌ ಹಾಕಿದರೆ ಚೆನ್ನಾಗಿರುತ್ತದೆ ಎನಿಸಿತು. ಟ್ರ್ಯಾಪ್‌ ಬೀಟ್‌ ಎಂದರೆ ಹಿಪ್‌ ಹಾಪ್‌ ಶೈಲಿಯಲ್ಲಿ ಇರುವಂತಹ ಒಂದು ಫಾರ್ಮ್ಯಾಟ್‌. ‘ಕಾಂತಾರ’ ಸಿನಿಮಾದ ಕ್ಷೇತ್ರಪಾಲ ಡೈಲಾಗ್‌, ಗುಳಿಗನ ಡೈಲಾಗ್‌ ಎಲ್ಲವನ್ನು ಇಟ್ಟುಕೊಂಡು ಈ ಮ್ಯೂಸಿಕ್‌ ವಿಡಿಯೋ ಮಾಡಿದ್ದೇನೆ. ಇದಕ್ಕಾಗಿ ಒಂದು ಗೆಜ್ಜೆ ಸದ್ದನ್ನು ರೆಕಾರ್ಡ್‌ ಮಾಡಿದ್ದು, ನನ್ನ ವಿಡಿಯೊದಲ್ಲಿ ಅದು ಪ್ರಮುಖವಾಗಿ ಕೇಳಿಸುತ್ತದೆ. ಈ ಮ್ಯೂಸಿಕ್‌ ವಿಡಿಯೋಗೆ, ಒಂದಷ್ಟು ದೈವ ಕೋಲದ ದೃಶ್ಯಗಳನ್ನು ಬಳಕೆ ಮಾಡಿದ್ದೇನೆ. ಈಗಾಗಲೇ 20 ಸಾವಿರಕ್ಕೂ ಅಧಿಕ ವೀವ್ಸ್ ಸಿಕ್ಕಿದೆ. ಇದರ ಜತೆಗೆ ಬೇರೆ ರೀತಿಯ ಮ್ಯೂಸಿಕ್‌ ವಿಡಿಯೊಗಳನ್ನು ಮಾಡಿದ್ದೇನೆ..' ಎಂದು ಸಂಪ್ರೀತ್‌ ನಿವೇದಿತ ಲೋಕೇಶ್ ಹೇಳಿದ್ದಾರೆ.

'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡಿನ ಬಗ್ಗೆ ಮಹತ್ವದ ತೀರ್ಪು ನೀಡಿದ ಕೆಳ ನ್ಯಾಯಾಲಯ
ಕನ್ನಡ ಕಿರುಚಿತ್ರಗಳಿಗೂ ಸಂಗೀತ
ಸಂಪ್ರೀತ್‌ ಹಲವು ಇಂಗ್ಲಿಷ್‌ ಡಾಕ್ಯುಮೆಂಟರಿಗಳು, ಅಮೆರಿಕದ ಬ್ಯಾಂಕು, ಕಮರ್ಷಿಯಲ್‌ ಜಾಹೀರಾತುಗಳು ಮತ್ತು ಮಲ್ಟಿನ್ಯಾಷನಲ್‌ ಕಂಪನಿಗಳ ಪ್ರಾಜೆಕ್ಟ್‌ಗಳ ಮ್ಯೂಸಿಕ್‌ ಪ್ರೊಡ್ಯುಸರ್‌ ಮತ್ತು ಸೌಂಡ್‌ ಡಿಸೈನರ್‌ ಆಗಿ ಕೆಲಸ ಮಾಡಿದ್ದಾರೆ. ಇದರ ಜತೆಗೆ ಕನ್ನಡದ ಹಳೆಯ ಹಾಡುಗಳಿಗೆ ಆಧುನಿಕ ಇನ್ಸ್‌ಟ್ರುಮೆಂಟಲ್‌ಗಳನ್ನು ಬಳಸಿ ಮ್ಯೂಸಿಕ್‌ ವಿಡಿಯೋ ಮಾಡಬೇಕು ಎಂಬ ಐಡಿಯಾ ಇದೆಯಂತೆ. ಇದರ ಜತೆಗೆ ಅವರು ‘ಸ್ಮೈಲ್‌ ಪ್ಲೀಸ್‌’ ಮತ್ತು ‘ಸದ್ದಿಲ್ಲದೆ’ ಕನ್ನಡ ಕಿರುಚಿತ್ರಗಳಿಗೂ ಸಂಗೀತ ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ.

Kantara Movie: ಓಟಿಟಿಯಲ್ಲಿ 'ಕಾಂತಾರ' ನೋಡಿ ಅದೊಂದು ಕಾರಣಕ್ಕೆ ಬೇಸರಗೊಂಡ ಫ್ಯಾನ್ಸ್!
ಕೋಟ್:
'ನಾನು ಅಮೆರಿಕದಲ್ಲಿಅನುಭವಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಭಾರತಕ್ಕೆ ಬಂದು ನಮ್ಮ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಗುರಿ ಇದೆ. ಸದ್ಯ ಒಂದಷ್ಟು ಇಂಗ್ಲಿಷ್‌ ಸಿನಿಮಾಗಳು, ಡಾಕ್ಯುಮೆಂಟರಿ, ಜಾಹೀರಾತುಗಳು ನನಗೆ ವಿಭಿನ್ನ ಅನುಭವವನ್ನು ನೀಡಿವೆ.
-ಸಂಪ್ರೀತ್‌ ನಿವೇದಿತ ಲೋಕೇಶ್, ಸೌಂಡ್‌ ಡಿಸೈನರ್‌
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌