ಆ್ಯಪ್ನಗರ

'ಕನ್ನಡಕ್ಕೆ ಚಟ್ಟ ತಯಾರು': ಹೊಸ ಪ್ಯಾನ್‌ ಇಂಡಿಯಾ ಚಿತ್ರ ಘೋಷಣೆ ಬೆನ್ನಲ್ಲೇ ಜಗ್ಗೇಶ್ ಹೀಗೆ ಹೇಳಿದ್ದೇಕೆ?

ಟ್ವಿಟರ್‌ನಲ್ಲಿ ಸಖತ್‌ ಸಕ್ರಿಯರಾಗಿರುವ ನಟ ಜಗ್ಗೇಶ್‌ ಅವರು ಪ್ಯಾನ್‌ ಇಂಡಿಯಾ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಹೇಳಿದ ಕೆಲವು ಮಾತುಗಳಿಗೆ ಅವರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Authored byಟೀನಾ | Vijaya Karnataka Web 2 Dec 2020, 7:04 pm
ಕೆಲವೇ ದಿನಗಳ ಹಿಂದೆ ಪ್ಯಾನ್‌ ಇಂಡಿಯಾ ಸಿನಿಮಾ ಕಾನ್ಸೆಪ್ಟ್‌ಗೆ ಸಂಬಂಧಿಸಿದಂತೆ ನಟ ಜಗ್ಗೇಶ್‌ ಆಡಿದ ಕೆಲವು ಮಾತುಗಳು ಭಾರಿ ಚರ್ಚೆಗೆ ಕಾರಣ ಆಗಿದ್ದವು. ಈಗ ಮತ್ತೆ ಅದೇ ವಿಷಯ ಮುನ್ನೆಲೆಗೆ ಬಂದಿದೆ. ಅತ್ತ, 'ಹೊಂಬಾಳೆ ಫಿಲ್ಮ್ಸ್‌' ಬ್ಯಾನರ್‌ ಮೂಲಕ ಹೊಸ ಪ್ಯಾನ್‌ ಇಂಡಿಯಾ ಸಿನಿಮಾ ಘೋಷಣೆ ಆಗುತ್ತಿದ್ದಂತೆಯೇ ಇತ್ತ ಜಗ್ಗೇಶ್‌ ಖಡಕ್‌ ಟ್ವೀಟ್‌ ಮಾಡಿದ್ದಾರೆ. ಆದರೆ ಎಲ್ಲಿಯೂ ಅವರು ಆ ನಿರ್ಮಾಣ ಸಂಸ್ಥೆಯ ಹೆಸರಾಗಲಿ, ಸಿನಿಮಾ ಶೀರ್ಷಿಕೆಯನ್ನಾಗಿ, ಕಲಾವಿದರ ಹೆಸರನ್ನಾಗಲಿ ಪ್ರಸ್ತಾಪಿಸಿಲ್ಲ!
Vijaya Karnataka Web ಜಗ್ಗೇಶ್‌


ಏನಿದು ಬೆಳವಣಿಗೆ?
ಪ್ರಭಾಸ್‌ ಮತ್ತು ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ 'ಸಲಾರ್‌' ಸಿನಿಮಾ ಬುಧವಾರ (ಡಿ.2) ಅನೌನ್ಸ್‌ ಆಗಿದೆ. ಪರಭಾಷೆ ನಟನ ಜೊತೆ ಪ್ರಶಾಂತ್‌ ನೀಲ್‌ ಸಿನಿಮಾ ಮಾಡುತ್ತಿರುವುದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ಯಾನ್‌ ಇಂಡಿಯಾ ಎಂಬುದು ಕನ್ನಡಿಗರಿಗೆ ಕೆಲಸ ಕೊಡುವುದಿಲ್ಲ ಎಂದು ಜಗ್ಗೇಶ್‌ ಕೆಲವೇ ದಿನಗಳ ಹಿಂದೆ ಹೇಳಿದ್ದರು. ಅದನ್ನು ನೆನಪಿಸಿಕೊಂಡು ಅನೇಕರು ಟ್ವೀಟ್‌ ಮಾಡುತ್ತಿದ್ದಾರೆ. ಅವುಗಳಿಗೆ ಜಗ್ಗೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

'ಮುಂದೈತೆ ಕನ್ನಡಿಗರೆ ಊರಬ್ಬ!'
'ಪ್ಯಾನ್‌ ಇಂಡಿಯಾ ಬಗ್ಗೆ ಜಗ್ಗೇಶ್‌ ಹೇಳಿದ ಮಾತು ಈಗ ನಿಜ ಎನಿಸುತ್ತಿದೆ' ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ. ಅದಕ್ಕೆ ಜಗ್ಗೇಶ್‌ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. 'ರಾಯರನಂಬಿ ಬದುಕುವ ನಾನು ಹೃದಯದಿಂದ ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯ ನುಡಿದೆ! ಅರಿವಾಗದ ಬಹುತೇಕರು ನೆಗೆಟಿವ್‌ ತೆಗೆದುಕೊಂಡು, ಉತ್ತಮ ಮಾಹಿತಿ ಅಣಕ ಚರ್ಚೆಗೆ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರು. ಮುಂದೈತೆ ಕನ್ನಡಿಗರೆ ಊರಬ್ಬ. ಆಗ ಅಯ್ಯೋ ಜಗ್ಗೇಶ ಅಂದೇ ಹೇಳಿದ, ನಾವು ಅಣಕಿಸಿದೆವೆ ಎಂದು ಪಶ್ಚಾತಾಪ ಪಡುತ್ತೀರ! ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು!' ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

also read: 'ಯಾವುದದು ಪ್ಯಾನ್‌ ಇಂಡಿಯಾ? ಅದನ್ನು ಕಟ್ಟಿಕೊಂಡು ನಮಗೆ ಏನಾಗಬೇಕಿದೆ': ಜಗ್ಗೇಶ್‌ ನೇರ ಪ್ರಶ್ನೆ!

'ನನ್ನ ಅಪಮಾನಿಸಿದವರು ಅಪಮಾನಿತರಾಗುತ್ತಾರೆ'
ಪ್ಯಾನ್‌ ಇಂಡಿಯಾ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕಾಗಿ ಅನೇಕರು ಜಗ್ಗೇಶ್‌ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದರು. ಆ ಬಗ್ಗೆಯೂ 'ನವರಸ ನಾಯಕ' ಟ್ವೀಟ್‌ ಮಾಡಿದ್ದಾರೆ. 'ರಾಯರ ಮಕ್ಕಳ ನೋಯಿಸಿದವರು ಉದ್ಧಾರವಿಲ್ಲಾ! ನನ್ನ ದೇಹದ ಮೇಲೆ ಉಸಿರಿನ ಜೊತೆಗೆ ರಾಯರು ಬೆರೆತಿದ್ದಾರೆ. ನನ್ನ ಬಗ್ಗೆ ಎಲ್ಲ ಅಣಕದ ಮಾತು ರಾಯರ ಬೃಂದಾವನಕ್ಕೆ ಸಮರ್ಪಣೆ. ನೋಡುತ್ತಿರಿ ನನ್ನ ಅಪಮಾನಿಸಿದವರು ಹೇಗೆ ಅಪಮಾನಿತರಾಗುತ್ತಾರೆ ಸಮಾಜದಲ್ಲಿ ಮುಂದೆ. ಕನ್ನಡದ ಅನ್ನ ತಿಂದು ಕನ್ನಡದ ಮಕ್ಕಳಿಗಾಗಿ ಆಡಿದ ಮಾತು ಸ್ವಾರ್ಥಕ್ಕೆ ಬಳಕೆಯಾಗಿ ದುಃಖವಾಯಿತು' ಎಂದು ಜಗ್ಗೇಶ್‌ ಬರೆದುಕೊಂಡಿದ್ದಾರೆ.

also read: ಆರಂಭದ ದಿನಗಳಲ್ಲಿ ನಟ ಜಗ್ಗೇಶ್‌ ಸಿನಿ ಬದುಕಿಗೆ ತಿರುವು ನೀಡಿದ್ದ ಆ ಮೂವರು ವ್ಯಕ್ತಿಗಳು ಇವರೇ!




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌