ಆ್ಯಪ್ನಗರ

ಹೊಸ ಸುದ್ದಿ ಕೊಟ್ರು ನಟಿ ಭಾವನಾ ಮೆನನ್ ಪತಿ ನವೀನ್

ನಟಿ ಭಾವನಾ ಮೆನನ್ ಬಹುಭಾಷಾ ನಟಿ. ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಚಿತ್ರದಲ್ಲಿ ನಟಿಸಿದ ನಂತರದಲ್ಲಿ ಅವರು ಕನ್ನಡದ ನಟಿ ಎಂದೇ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.

Vijaya Karnataka Web 13 Nov 2019, 10:52 am
ನಟಿ ಭಾವನಾ ಮೆನನ್‌ ಪತಿ, ನಿರ್ಮಾಪಕ, ನಟ ನವೀನ್‌ ಮತ್ತೆ ನಟನೆಗೆ ಹಿಂತಿರುಗಿದ್ದಾರೆ. ಸೂರಿ ನಿರ್ದೇಶನದ 'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರದಲ್ಲಿ ನೆಗೆಟಿವ್‌ ಶೇಡ್‌ನ ಪಾತ್ರದಲ್ಲಿನಟಿಸಿದ್ದಾರೆ.
Vijaya Karnataka Web naveen joins dhananjay starer popcorn monkey tiger movie
ಹೊಸ ಸುದ್ದಿ ಕೊಟ್ರು ನಟಿ ಭಾವನಾ ಮೆನನ್ ಪತಿ ನವೀನ್


9 ವರ್ಷಗಳ ನಂತರ ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ. 'ನಿರ್ದೇಶಕ ಸೂರಿ ಈ ಚಿತ್ರದಲ್ಲಿನಟಿಸುತ್ತೀರಾ ಅಂತ ಕೇಳಿದಾಗ ಮರು ಯೋಚಿಸದೆ ಒಪ್ಪಿಕೊಂಡೆ. ಬಹಳ ವರ್ಷಗಳ ಹಿಂದೆ ಅವರ ಸಿನಿಮಾದಲ್ಲಿ ನಟಿಸಬೇಕು ಅನಿಸಿತ್ತು. ನನ್ನ ಬಿಸ್ನೆಸ್‌ನಲ್ಲಿ ಬಿಝಿಯಾಗಿದ್ದರಿಂದ ನಟನೆಯಿಂದ ಹಿಂದೆ ಸರಿದಿದ್ದೆ. ಆದರೆ, ನಟನೆಯ ಮೇಲಿನ ಒಲವು ಹಾಗೇ ಇತ್ತು. ಸಮಾರಂಭಗಳಲ್ಲಿಒಂದೆರಡು ಬಾರಿ ಸೂರಿ ಮತ್ತು ನನ್ನ ಭೇಟಿ ಆಗಿತ್ತು. ಅವರೇ ಕರೆದಾಗ ಏನು ಪಾತ್ರ ಅಂತಾನೂ ಕೇಳದೆ ಒಪ್ಪಿಕೊಂಡೆ. ಮತ್ತೆ ಕ್ಯಾಮೆರಾ ಮುಂದೆ ನಿಂತಾಗ ಎಮೋಷನಲ್‌ ಆದೆ' ಎಂದಿದ್ದಾರೆ ನವೀನ್‌.

'ಪಾಪ್‌ ಕಾರ್ನ್‌ ಮಂಕಿ ಟೈಗರ್' ಹುಡುಗಿಗೆ ಹೆಚ್ಚಾದ ಬೇಡಿಕೆ

ಪಿ.ಸಿ. ಶೇಖರ್‌ ನಿರ್ದೇಶನದ ನಾಯಕ ಚಿತ್ರದಲ್ಲಿನವೀನ್‌ ಮೊದಲ ಬಾರಿಗೆ ಹೀರೊ ಆಗಿ ನಟಿಸಿದ್ದರು. ಈ ಚಿತ್ರದ ನಂತರ ಮತ್ತೆ ನವೀನ್‌ ನಟಿಸಿರಲಿಲ್ಲ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಬಹುಭಾಷಾ ನಟಿ, ಜಾಕಿ ಚಿತ್ರ ಖ್ಯಾತಿಯ ಭಾವನಾ ಮೆನನ್‌ ಅವರನ್ನು ಕಳೆದ ವರ್ಷ ಜನವರಿಯಲ್ಲಿ ಮದುವೆಯಾಗಿದ್ದಾರೆ.

ಧನಂಜಯ ಬಗ್ಗೆ 'ಪಾಪ್ ಕಾರ್ನ್ ಮಂಕಿ ಟೈಗರ್' ಬೆಡಗಿ ಅಮೃತಾ ಮನದಾಳದ ಮಾತು

ನವೀನ್‌ ನಿರ್ಮಾಣದ 'ರೋಮಿಯೋ' ಚಿತ್ರದಲ್ಲಿ ಭಾವನಾ ನಟಿಸಿದ್ದರು. 'ಒಂದು ಸಾರಿ ನಟಿಸಿದ ನಂತರ ಆ ಪ್ಯಾಷನ್‌ ಹೋಗೋಲ್ಲ. ಆಗಾಗ್ಗೆ ನಟಿಸಬೇಕು ಅನ್ನಿಸಿದ್ರೂ ಯಾರನ್ನೂ ಕೇಳೋಕೆ ಹೋಗಿರಲಿಲ್ಲ. ಸೂರಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಸಂತೋಷದ ಸಂಗತಿ. ಅವರು ಪ್ರತಿಭಾವಂತ ನಿರ್ದೇಶಕರು. ಪಾತ್ರಕ್ಕೆ ತಕ್ಕವರನ್ನು ಹುಡುಕಿ ಆರಿಸುತ್ತಾರೆ. ಅಲ್ಲದೆ, ನಟರೊಳಗೆ ಇರುವ ಪ್ರತಿಭೆಯನ್ನು ಹೊರತೆಗೆಯುವುದರಲ್ಲಿಎಕ್ಸ್‌ಪರ್ಟ್‌. ಈ ಚಿತ್ರ ಕೂಡ ವಿಶೇಷವಾಗಿರುತ್ತದೆ' ಎಂದಿದ್ದಾರೆ ನವೀನ್‌. ಇನ್ನು ಮುಂದೆ ಅವಕಾಶ ಬಂದರೆ ನಟನೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌