ಆ್ಯಪ್ನಗರ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿ, ಸಂಜನಾರನ್ನು ಈವರೆಗೆ ಒಬ್ಬರೂ ಭೇಟಿ ಆಗಿಲ್ಲ! ಕಾರಣ ಏನು?

ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜೈಲಿನಲ್ಲಿ ಕಾಲ ಕಳೆಯುತ್ತ ಒಂದು ತಿಂಗಳ ಮೇಲಾಗಿದೆ. ಇನ್ನೂ ಅವರಿಗೆ ಜಾಮೀನು ಸಿಕ್ಕಿಲ್ಲ. ಅಷ್ಟೇ ಅಲ್ಲ, ಅವರನ್ನು ಭೇಟಿಯಾಗಲು ಯಾರೂ ಸಹ ಜೈಲಿನತ್ತ ಮುಖ ಹಾಕಿಲ್ಲ!

Vijaya Karnataka Web 23 Oct 2020, 10:38 am
ಜೈಲಿನಲ್ಲಿ ಇರುವ ವ್ಯಕ್ತಿಗಳನ್ನು ಭೇಟಿಯಾಗಲು ಅವರ ಆಪ್ತರು ಬರುತ್ತಿರುತ್ತಾರೆ. ಆದರೆ ಚಂದನವನದ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ವಿಚಾರದಲ್ಲಿ ಅದು ಸಾಧ್ಯವಾಗಿಲ್ಲ. ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಪರಪ್ಪನ ಅಗ್ರಹಾರದಲ್ಲಿ ದಿನ ದೂಡುತ್ತಿರುವ ಈ ನಟಿಮಣಿಯರನ್ನು ನೋಡಲು ಒಬ್ಬರೂ ಜೈಲಿಗೆ ಭೇಟಿ ನೀಡಿಲ್ಲ ಎಂಬ ಮಾಹಿತಿ ಈಗ ಬಹಿರಂಗ ಆಗಿದೆ.
Vijaya Karnataka Web ಸಂಜನಾ ಗಲ್ರಾನಿ ರಾಗಿಣಿ ದ್ವಿವೇದಿ


ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ಪ್ರಕರಣದಲ್ಲಿ ಸಂಜನಾ ಮತ್ತು ರಾಗಿಣಿ ಬಂಧನಕ್ಕೆ ಒಳಗಾಗಿದ್ದಾರೆ. ಈವರೆಗೆ ಅವರನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಯಾರೆಲ್ಲ ಭೇಟಿ ನೀಡಿದ್ದಾರೆ ಎಂಬ ಮಾಹಿತಿಯನ್ನು ಕೋರಿ ಆರ್‌ಟಿಐ ಅರ್ಜಿ ಸಲ್ಲಿಸಲಾಗಿತ್ತು. ಟಿ. ನರಸಿಂಹಮೂರ್ತಿ ಈ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಉತ್ತರ ನೀಡಿರುವ ಜೈಲು ಅಧಿಕಾರಿಗಳು, 'ಈವರೆಗೆ ರಾಗಿಣಿ ಮತ್ತು ಸಂಜನಾರನ್ನು ಯಾರೂ ಭೇಟಿ ಆಗಿಲ್ಲ' ಎಂದು ತಿಳಿಸಿದ್ದಾರೆ.

ಯಾಕೆ ಹೀಗೆ? ಉತ್ತರ ಸಿಂಪಲ್‌. ಈಗ ಎಲ್ಲೆಲ್ಲೂ ಕೊರೊನಾ ವೈರಸ್‌ ಹಾವಳಿ ಹೆಚ್ಚಾಗಿದೆ. ಜೈಲಿನಂತಹ ಜಾಗದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯ. ಆ ಕಾರಣಕ್ಕಾಗಿ, ಜೈಲಿನಲ್ಲಿರುವವರನ್ನು ಭೇಟಿ ಮಾಡಲು ಹೊರಗಡೆಯಿಂದ ಯಾವುದೇ ವ್ಯಕ್ತಿಗಳಿಗೂ ಅನುಮತಿ ನೀಡಲಾಗುತ್ತಿಲ್ಲ ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

also read: ನಟಿಯರ ಖಾಸಗಿ ವಿಡಿಯೋ ಲೀಕ್‌! ಬಹಿರಂಗ ಪತ್ರದಲ್ಲಿ ಪೊಲೀಸರಿಗೆ ಪಾರುಲ್‌ ಯಾದವ್‌ ಹೇಳಿದ್ದೇನು?

ಮಾದಕ ವಸ್ತು ಜಾಲದ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪದ ಮೇಲೆ ನಟಿ ರಾಗಿಣಿ ಅವರ ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳು ಸೆ.4ರಂದು ಅವರನ್ನು ಬಂಧಿಸಿದ್ದರು. ಕೆಲವೇ ದಿನಗಳ ನಂತರ, ಅಂದರೆ ಸೆ.8ರಂದು ಸಂಜನಾ ಮನೆ ಮೇಲೆ ಕೂಡ ದಾಳಿ ಮಾಡಿ, ಅವರನ್ನು ವಶಕ್ಕೆ ಪಡೆಯಲಾಯಿತು. ಈ ಇಬ್ಬರೂ ನಟಿಯರು ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಜಾಮೀನು ಪಡೆಯಲು ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲ ಆಗುತ್ತಿವೆ. ಇತ್ತೀಚೆಗೆ ಇದೇ ಕೇಸ್‌ನಲ್ಲಿ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಆದಂ ಪಾಷಾ ಬಂಧನ ಕೂಡ ಆಗಿದೆ.

also read: ಅರೆಸ್ಟ್‌ ಆಗುವ ಕೆಲವೇ ದಿನಗಳ ಮುನ್ನ ಗೂಗಲ್‌ನಲ್ಲಿ ಸಂಜನಾ ಗಲ್ರಾನಿ ಸರ್ಚ್‌ ಮಾಡಿದ್ದು ಏನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌