ಆ್ಯಪ್ನಗರ

ಕುಟುಂಬದ ಜೊತೆ ಗೋವಾ ಟ್ರಿಪ್ ಹೋಗಿಬಂದ 'ಆಪರೇಶನ್ ಅಲಮೇಲಮ್ಮ' ಖ್ಯಾತಿಯ ನಟ ರಿಷಿ!

'ಅನುರೂಪ' ಧಾರಾವಾಹಿ, 'ಆಪರೇಶನ್ ಅಲಮೇಲಮ್ಮ', 'ಕವಲುದಾರಿ' ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದ ನಟ ರಿಷಿ ಅವರು ಕುಟುಂಬದ ಜೊತೆ ಗೋವಾ ಪ್ರವಾಸ ಮಾಡಿ ಬಂದಿದ್ದಾರೆ. ಈ ಬಗ್ಗೆ ಅವರು ಬಹು ಮುಖ್ಯವಾದ ವಿಷಯ ಹೇಳಿದ್ದಾರೆ.

Vijaya Karnataka Web 11 Oct 2020, 3:50 pm
'ಆಪರೇಶನ್ ಅಲಮೇಲಮ್ಮ', 'ಕವಲುದಾರಿ' ಸಿನಿಮಾಗಳ ಮೂಲಕ ಜನರ ಮೆಚ್ಚುಗೆ ಗಳಿಸಿದ ನಟ ರಿಷಿ ಅವರು ಕನ್ನಡ ಚಿತ್ರರಂಗದಲ್ಲಿ ತುಂಬ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರ ನಟನೆ ಕಂಡು ಸಾಕಷ್ಟು ಜನರು ಭೇಷ್ ಎಂದಿದ್ದರು. ಕಥೆ ಹಾಗೂ ಪಾತ್ರ ಆಯ್ಕೆಗಳಿಗೆ ಹೆಚ್ಚು ಒತ್ತು ನೋಡಿ ಸಿನಿಮಾ ಮಾಡುವ ರಿಷಿ ಅವರು ಸ್ವಲ್ಪ ಬಿಡುವು ಮಾಡಿಕೊಂಡು ಫ್ಯಾಮಿಲಿ ಜೊತೆಗೆ ಗೋವಾ ಟ್ರಿಪ್ ಹೋಗಿ ಬಂದಿದ್ದಾರೆ.
Vijaya Karnataka Web operation alamelamma actor rishi family trip to goa
ಕುಟುಂಬದ ಜೊತೆ ಗೋವಾ ಟ್ರಿಪ್ ಹೋಗಿಬಂದ 'ಆಪರೇಶನ್ ಅಲಮೇಲಮ್ಮ' ಖ್ಯಾತಿಯ ನಟ ರಿಷಿ!


ಗೋವಾ ಪ್ರವಾಸದ ಬಗ್ಗೆ ರಿಷಿ ಏನು ಹೇಳ್ತಾರೆ?

'ಗೋವಾದಲ್ಲಿ ಸಮಯ ಕಳೆದದ್ದು ನಿಜಕ್ಕೂ ಕುತೂಹಲಕಾರಿಯಾಗಿತ್ತು. ಪೂರ್ವದ ರೋಮ್ ಅಂತ ನಿಸ್ಸಂಶಯವಾಗಿ ಹೇಳಬಹುದು. ಪ್ರತಿಯೊಂದು ಪ್ರವಾಸ ಕೂಡ ಸಾಕಷ್ಟು ಕಥೆಗಳನ್ನು ಹೇಳುತ್ತದೆ, ನಮ್ಮನ್ನು ಉತ್ತಮ ಕಥೆಗಾರರನ್ನಾಗಿಸುತ್ತದೆ. ಕಥೆಗಳ ಗುಣಮಟ್ಟದಿಂದ ನಮ್ಮ ಜೀವನದ ಗುಣಮಟ್ಟವನ್ನು ಸುಲಭವಾಗಿ ಹೆಚ್ಚಿಸಬಹುದು ಎಂದು ನಾನು ನಂಬುತ್ತೇನೆ. ಪ್ರವಾಸಕ್ಕೆ ಹೋಗುವಾಗ ಮ್ಯೂಸಿಯಂ ನೋಡಲು ನಾನು ಸದಾ ಇಷ್ಟಪಡುತ್ತೇನೆ. ಅಲ್ಲಿನ ಇತಿಹಾಸ, ನಾಗರಿಕತೆ, ಸಂಸ್ಕೃತಿ ತಿಳಿದುಕೊಳ್ಳುವೆ. ನಮ್ಮ ನಗರ ಮತ್ತು ರಾಜ್ಯ ವಸ್ತು ಸಂಗ್ರಹಾಲಯಗಳನ್ನು ಸಂರಕ್ಷಿಸುವುದು ಮತ್ತು ಮರುಸ್ಥಾಪಿಸುವುದು ಕಡ್ಡಾಯ ಅಂತ ನಾನು ಯಾವಾಗಲೂ ನಂಬುತ್ತೇನೆ. ಗೋವಾ ಬೀಚ್‌ಗಿಂತ ಹೆಚ್ಚಾಗಿ ಅಲ್ಲಿನ ಮ್ಯೂಸಿಯಂ, ಸ್ಥಳೀಯ ಸಂಸ್ಕೃತಿ ಬಗ್ಗೆ ಮಾತು ಕೇಳೋದು ಕಡಿಮೆ' ಎಂದು ರಿಷಿ ಸೋಶಿಯಲ್ ಮೀಡಿಯಾದಲ್ಲಿ ಗೋವಾ ಟ್ರಿಪ್ ಕುರಿತ ಅನುಭವವನ್ನು ಹಂಚಿಕೊಂಡಿದ್ದಾರೆ.

ಪುಸ್ತಕ ಓದುವ, ಬರೆಯುವ ಹವ್ಯಾಸವುಳ್ಳ ಸ್ವಾತಿ!

ರಿಷಿ ಪತ್ನಿ ಸ್ವಾತಿ ಸೋಶಿಯಲ್ ಮೀಡಿಯಾದಲ್ಲಿ ಗೋವಾ ಪ್ರವಾಸದ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ವಾತಿ ಸಾಕಷ್ಟು ಪುಸ್ತಕಗಳನ್ನು ಓದುತ್ತಾರೆ, ಬರೆಯುತ್ತಾರೆ. ಅವರಿಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಅಂದರೆ ಎಲ್ಲಿಲ್ಲದ ಪ್ರೀತಿ. ರಿಷಿ ನಟರಾಗಿರೋದಕ್ಕೆ ಅವರು ಹೆಚ್ಚು ಓದುತ್ತಾರೆ, ಕಥೆಗಳನ್ನು ಕೇಳುತ್ತಾರೆ. ಫ್ಯಾಮಿಲಿ ಜೊತೆಗೆ ರಿಷಿ ಗೋವಾದಲ್ಲಿ ಸುಂದರ ಸಮಯ ಕಳೆದಿದ್ದಾರೆ. ಮುಂಜಾಗ್ರತೆ ಕ್ರಮ ಕೈಗೊಂಡು ರಿಷಿ ಕುಟುಂಬ ಸುರಕ್ಷಿತವಾಗಿ ಗೋವಾಗೆ ಹೋಗಿ ಬಂದಿದೆ.

Also Read-'ಸಾರ್ವಜನಿಕರಿಗೆ ಸುವರ್ಣಾವಕಾಶ' ಪಾತ್ರದ ಬಗ್ಗೆ ರಿಷಿ ಏನಂತಾರೆ?

ಸಿನಿಮಾ ಕೆಲಸಗಳಲ್ಲಿ ರಿಷಿ ಸಕ್ರಿಯ!

ರಿಷಿ ಅವರು ಪ್ರಸ್ತುತ ಮೂರು ಸಿನಿಮಾ ಒಪ್ಪಿಕೊಂಡಿದ್ದಾರೆ. 'ರಾಮನವತಾರ', 'ಸಕಲಕಲಾವಲ್ಲಭ', 'ಸೀರೆ' ಸಿನಿಮಾಗೆ ರಿಷಿ ಸಹಿ ಹಾಕಿದ್ದಾರೆ. ಸಿನಿಮಾಕ್ಕೆ ಬರುವ ಮುನ್ನ ರಿಷಿ ರಂಗಭೂಮಿ, ಕಿರುತೆರೆಯಲ್ಲಿ ನಟಿಸಿದ್ದರು. ಕೆಲದಿನಗಳ ಹಿಂದೆ 'ಮನಸಾರೆ' ಧಾರಾವಾಹಿಯಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ರಿಷಿ ಸಹೋದರಿ ಆರ್‌ಜೆ ನೇತ್ರಾ ಬಿಗ್ ಬಾಸ್ ಕನ್ನಡ ಸೀಸನ್ 3ರಲ್ಲಿ ಭಾಗವಹಿಸಿದ್ದರು. 'ಆಟಗಾರ', 'ರಿಂಗ್ ರೋಡ್ ಶುಭಾ' ಸಿನಿಮಾದಲ್ಲಿ ಅವರು ನಟಿಸಿದ್ದರು. ಇವರು ಕೂಡ ಗೋವಾ ಟ್ರಿಪ್‌ಗೆ ಹೋಗಿದ್ದು, ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Also Read-ಮದುವೆ ನಂತರ ಮೊದಲ ಸಿನಿಮಾ; ಪತ್ನಿ ಜತೆ ಮೊದಲ ಶೋ ನೋಡಲಿರುವ ನಟ ರಿಷಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌