ಕೆಜಿಎಫ್ನಲ್ಲಿ ವಿಕ್ರಮ್: ಕನ್ನಡದ ‘ಕೆಜಿಎಫ್’ ಚಿತ್ರಕ್ಕೂ ಇದಕ್ಕೂ ಸಂಬಂಧ ಇದ್ಯಾ?
ಕೆಜಿಎಫ್ ಸಿನಿಮಾದ ಮೂಲಕ ಹೆಚ್ಚು ಜನರಿಗೆ ‘ಕೆಜಿಎಫ್’ ಸ್ಥಳನಾಮವನ್ನು ಭಾರತದಾದ್ಯಂತ ಪರಿಚಯಿಸಿದ ಖ್ಯಾತಿ ಪ್ರಶಾಂತ್ ನೀಲ್ ಅವರಿಗೆ ಸಲ್ಲುತ್ತದೆ. ಈಗ ಇನ್ನೊಂದು ಸಿನಿಮಾ ಕೆಜಿಎಫ್ ಕುರಿತು ತಯಾರಾಗಲಿದೆ. ಆದರೆ ಪ್ರಶಾಂತ್ ನೀಲ್ ಅವರ ‘ಕೆಜಿಎಫ್’ಗೂ ಹೊಸ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಕೆಜಿಎಫ್ ಕುರಿತಾದ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಪಾ ರಂಜಿತ್ ನಿರ್ದೇಶನ ಮಾಡುತ್ತಿದ್ದಾರೆ.
Vijaya Karnataka 1 Jun 2022, 7:13 pm
ಹೈಲೈಟ್ಸ್:
- ಕೆಜಿಎಫ್ ಬಗ್ಗೆ ತಯಾರಾಗುತ್ತಿದೆ ಮತ್ತೊಂದು ಸಿನಿಮಾ
- ಕೆಜಿಎಫ್ ಕುರಿತಾದ ಚಿತ್ರಕ್ಕೆ ಪಾ ರಂಜಿತ್ ಆಕ್ಷನ್ ಕಟ್
- ಕೆಜಿಎಫ್ ಕುರಿತಾದ ಸಿನಿಮಾದಲ್ಲಿ ನಟಿಸಲಿದ್ದಾರೆ ವಿಕ್ರಮ್
ಲವಲವಿಕೆ ಸುದ್ದಿಲೋಕ
ಕೆಜಿಎಫ್ ಸಿನಿಮಾದ ಮೂಲಕ ಹೆಚ್ಚು ಜನರಿಗೆ ‘ಕೆಜಿಎಫ್’ ಸ್ಥಳನಾಮವನ್ನು ಭಾರತದಾದ್ಯಂತ ಪರಿಚಯಿಸಿದ ಖ್ಯಾತಿ ಪ್ರಶಾಂತ್ ನೀಲ್ ಅವರಿಗೆ ಸಲ್ಲುತ್ತದೆ. ಈಗ ಇನ್ನೊಂದು ಸಿನಿಮಾ ಕೆಜಿಎಫ್ ಕುರಿತು ತಯಾರಾಗಲಿದೆ. ಆದರೆ ಪ್ರಶಾಂತ್ ನೀಲ್ ಅವರ ‘ಕೆಜಿಎಫ್’ಗೂ ಹೊಸ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಕೆಜಿಎಫ್ ಕುರಿತಾದ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಪಾ ರಂಜಿತ್ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಗಿದ ಕಾನ್ ಚಿತ್ರೋತ್ಸವದಲ್ಲಿ ಪಾ ರಂಜಿತ್ ತಾನು ಕೆಜಿಎಫ್ ಹಿನ್ನೆಲೆಯ ಸಿನಿಮಾವೊಂದನ್ನು ಮಾಡುತ್ತಿದ್ದು, ಅದರಲ್ಲಿ ವಿಕ್ರಮ್ ನಾಯಕರಾಗಿ ನಟಿಸುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಇದು ಕನ್ನಡದ ‘ಕೆಜಿಎಫ್’ ಚಾಪ್ಟರ್ ಒಂದು ಮತ್ತು ಎರಡಕ್ಕಿಂತ ಭಿನ್ನವಾದ್ದದ್ದು ಎಂದು ಪಾ ರಂಜಿತ್ ಹೇಳಿದ್ದಾರೆ.
'KGF 3' ಸಿನಿಮಾದಲ್ಲಿ ಹೃತಿಕ್ ರೋಶನ್ ನಟಿಸ್ತಾರಾ? ಅಸಲಿ ವಿಷಯ ಏನು?
ಪಾ ರಂಜಿತ್ ‘ಕಬಾಲಿ’ ಚಿತ್ರದ ನಂತರ ಮಾಡಬೇಕು ಎಂದುಕೊಂಡಿದ್ದ ಕಥೆ ಇದು. ಆದರೆ ಬೇರೆ ಬೇರೆ ಕಮಿಟ್ಮೆಂಟ್ಗಳಿಂದ ಈ ಚಿತ್ರ ಸೆಟ್ಟೇರುವುದು ತಡವಾಗುತ್ತಿದೆ. ಈ ಮಧ್ಯೆ ಪ್ರಶಾಂತ್ ನೀಲ್ ಅವರ ಸಿನಿಮಾಗಳು ಅನೌನ್ಸ್ ಆದ ಕಾರಣ, ಪಾ ರಂಜಿತ್ ಬರೆದುಕೊಂಡಿದ್ದ ಕಥೆಗೂ ಪ್ರಶಾಂತ್ ನೀಲ್ ಕಥೆಗೂ ಸಾಮ್ಯ ಇರಬಹುದೇನೋ ಎಂಬ ಕಾರಣಕ್ಕೆ ಅವರೆಡೂ ಚಿತ್ರಗಳು ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದರಂತೆ. ಆದರೆ ಪಾ ರಂಜಿತ್ ಬರೆದುಕೊಂಡಿರುವ ಕಥೆಗೂ, ಕೆಜಿಎಫ್ ಸಿನಿಮಾಗಳಿಗೂ ಸಂಬಂಧವಿಲ್ಲ ಎಂಬುದನ್ನು ಚಿತ್ರ ನೋಡಿ ಕನ್ಫರ್ಮ್ ಮಾಡಿಕೊಂಡು ತಮ್ಮ ಕಥೆಯನ್ನು ಸಿನಿಮಾವಾಗಿಸುತ್ತಿದ್ದಾರಂತೆ ಪಾ ರಂಜಿತ್.
'ಕೆಜಿಎಫ್ 2' ನಂತರ ದೊಡ್ಡ ಪ್ಲ್ಯಾನ್ನೊಂದಿಗೆ ಹೆಜ್ಜೆ ಇಟ್ಟ ಹೊಂಬಾಳೆ ಫಿಲ್ಮ್ಸ್; ಮುಂದಿನ ಸಿನಿಮಾಗಳ ಡೀಟೇಲ್ಸ್ ಇಲ್ಲಿದೆ
ವಿಕ್ರಮ್ ಅವರ ಸಿನಿಮಾ 19ನೇ ಶತಮಾನದಲ್ಲಿ ನಡೆಯುವಂತಹ ಕಥೆ. ಅಲ್ಲಿನ ಕಾರ್ಮಿಕರ ಜೀವನದಲ್ಲಿ ನಡೆದಂತಹ ಕಥೆಯನ್ನು ಪಾ ರಂಜಿತ್ ಸಿನಿಮಾ ಮಾಡುತ್ತಿರಬಹುದು ಎನ್ನಲಾಗಿದೆ. ಈ ಸಿನಿಮಾವನ್ನು ಪಾ ರಂಜಿತ್ ಅವರೇ ನಿರ್ಮಾಣವನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಚಿತ್ರತಂಡ ಕೆಜಿಎಫ್ಗೂ ಬರಲಿದೆ ಎನ್ನಲಾಗುತ್ತಿದೆ.
KGF 2: ಫುಲ್ ಪ್ಯಾಕ್ ಸಿಗರೇಟ್ ಸೇದಿ 15 ವರ್ಷದ ಯುವಕ ಅಸ್ವಸ್ಥ: ಎಲ್ಲಾ ರಾಕಿ ಭಾಯ್ ಪ್ರೇರಣೆ..!
ಪಾ ರಂಜಿತ್
ಕಾಲಿವುಡ್ನ ಖ್ಯಾತ ನಿರ್ದೇಶನ ಪಾ ರಂಜಿತ್. 2012ರಲ್ಲಿ ‘Attakathi’ ಸಿನಿಮಾದ ಮೂಲಕ ಪಾ ರಂಜಿತ್ ಡೈರೆಕ್ಟರ್ ಕ್ಯಾಪ್ ತೊಟ್ಟರು. 2014ರಲ್ಲಿ ‘ಮದ್ರಾಸ್’ ಸಿನಿಮಾಗೆ ಪಾ ರಂಜಿತ್ ನಿರ್ದೇಶನ ಮಾಡಿದರು. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಕಬಾಲಿ’, ‘ಕಾಲಾ’ ಚಿತ್ರಗಳನ್ನ ಡೈರೆಕ್ಟ್ ಮಾಡಿದವರು ಇದೇ ಪಾ ರಂಜಿತ್. 2021ರಲ್ಲಿ ಪಾ ರಂಜಿತ್ ನಿರ್ದೇಶನದ ‘Sarpatta Parambarai’ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Fill this survey and get a chance to win an attractive gift