ಆ್ಯಪ್ನಗರ

ಬದಲಾಗ್ತಾ ಇದ್ದಾರೆ 'ಪಂಚರಂಗಿ' ಹುಡುಗಿ ನಿಧಿ ಸುಬ್ಬಯ್ಯ! ಹೆದರಿಕೊಳ್ತಾರಾ ಪ್ರೇಕ್ಷಕರು?

'ಪಂಚರಂಗಿ' ಸಿನಿಮಾ ಮೂಲಕ ಪ್ರೇಕ್ಷಕರ ಮನ ಗೆದ್ದ ನಟಿ ನಿಧಿ ಸುಬ್ಬಯ್ಯ ಈಗೇನು ಮಾಡುತ್ತಿದ್ದಾರೆ? ಹೊಸ ಹಾರರ್‌ ಸಿನಿಮಾ ಒಪ್ಪಿಕೊಂಡಿರುವ ಅವರು ಹೊಸತನದ ನಿರೀಕ್ಷೆಯಲ್ಲಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಶೂಟಿಂಗ್‌ ಆರಂಭ ಆಗಲಿದೆ.

Vijaya Karnataka Web 5 Dec 2020, 11:37 am
ಒಂದಷ್ಟು ವರ್ಷಗಳ ಹಿಂದೆ ಕನ್ನಡ ಸಿನಿಮಾರಂಗದಲ್ಲಿ ಸಖತ್ ಜನಪ್ರಿಯರಾಗಿದ್ದವರು ನಟಿ ನಿಧಿ ಸುಬ್ಬಯ್ಯ. ಆದರೆ ಇತ್ತೀಚೆಗೆ ಅವರು ಸಿನಿಮಾಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆದರು. ಈವರೆಗೂ ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ನಿಧಿ ಈಗ ಬದಲಾಗುತ್ತಿದ್ದಾರೆ. ಅಂದರೆ, ಬೇರೆ ರೀತಿಯ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ನಿರ್ದೇಶಕ ಲೋಹಿತ್‌ ಎಚ್‌. ಅವರ ಫ್ರೈಡೇ ಫಿಲ್ಮ್ಸ್‌ ಬ್ಯಾನರ್‌ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.
Vijaya Karnataka Web ನಿಧಿ ಸುಬ್ಬಯ್ಯ


ಪವನ್ ಮತ್ತು ಪ್ರಸಾದ್‌ ಜಂಟಿಯಾಗಿ ನಿರ್ದೇಶಿಸಲಿರುವ ಹಾರರ್ ಸಿನಿಮಾವೊಂದರಲ್ಲಿ ನಿಧಿ ಸುಬ್ಬಯ್ಯ ನಟಿಸಲಿದ್ದಾರೆ. ಈ ಹಿಂದೆ 'ಪಂಚರಂಗಿ', 'ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ' ಚಿತ್ರಗಳಲ್ಲಿ ಪಟಪಟ ಮಾತನಾಡುವ ಮಾತಿನ ಮಲ್ಲಿಯಂತೆ ಪ್ರೇಕ್ಷಕರನ್ನು ರಂಜಿಸಿದ್ದ ನಿಧಿಗೆ ಇನ್ನೂ ಹೆಸರಿಡದ ಈ ಹೊಸ ಹಾರರ್‌ ಚಿತ್ರದಲ್ಲಿ ಹೊಸ ಬಗೆಯ ಪಾತ್ರ ಸಿಕ್ಕಿದೆ. ಅದರಲ್ಲಿ ನಟಿಸಲು ನಿಧಿ ಉತ್ಸುಕರಾಗಿದ್ದಾರೆ.

'ಜನರು ನನ್ನನ್ನು ಗುರುತಿಸುವಂತಹ ಪಕ್ಕದ ಮನೆ ಬಬ್ಲಿ ಹುಡುಗಿಯ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿದ್ದವು. ಅದರಲ್ಲೂ ಪಂಚರಂಗಿ ಬಳಿಕ ಅಂಥ ಪಾತ್ರಗಳು ಹೆಚ್ಚಾಗಿದ್ದವು. ಹೊಸದಾಗಿ ಏನಾದರೂ ಮಾಡಬೇಕು ಎಂದು ನಾನು ಯಾವಾಗಲೂ ಬಯಸುತ್ತಿದ್ದೆ. ಈ ಚಿತ್ರದ ಆಫರ್‌ ಬಂದಾಗ ನಾನು ಥ್ರಿಲ್‌ ಆದೆ. ಈ ರೀತಿಯ ಪಾತ್ರವನ್ನು ನಾನು ಹಿಂದೆಂದೂ ಮಾಡಿಲ್ಲ' ಎಂದಿದ್ದಾರೆ ನಿಧಿ.

also read: ಕೊರೊನಾ ಹಬ್ಬುತ್ತಿರುವ ಕಾಲದಲ್ಲೇ ಅಮೆರಿಕದಿಂದ ಬಂದ ನಟಿ ನಿಧಿ ಸುಬ್ಬಯ್ಯ ಆರೋಗ್ಯ ಈಗ ಹೇಗಿದೆ?

'ಮಲಗುವ ಮುನ್ನ ಯಾವುದಾದರೂ ಥ್ರಿಲ್ಲರ್‌ ಅಥವಾ ಹಾರರ್ ಸಿನಿಮಾಗಳನ್ನು ನೋಡುವ ಅಭ್ಯಾಸ ನನಗಿದೆ. ಅವು ನನಗೆ ಹೆಚ್ಚು ಇಷ್ಟ. ಈ ಸಿನಿಮಾದಲ್ಲಿ ನನ್ನ ನಟನೆಗೆ ಹೆಚ್ಚು ಅವಕಾಶ ಸಿಗಲಿದೆ. ಥ್ರಿಲ್ಲಿಂಗ್‌ ಅಂಶಗಳ ಜೊತೆಗೆ ಒಳ್ಳೆಯ ಕಥೆ ಕೂಡ ಇದೆ. ಕಲಾವಿದರಿಗೆ ಈ ರೀತಿಯ ಕಥೆಗಳು ಖುಷಿ ಕೊಡುತ್ತವೆ. ಆದಷ್ಟು ಬೇಗ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಕಾದಿದ್ದೇನೆ' ಎಂದು ಹೊಸ ಹಾರರ್‌ ಪ್ರಯತ್ನದ ಬಗ್ಗೆ ಮಾಹಿತಿ ನೀಡಿರುವ ನಿಧಿ, ಈಗಾಗಲೇ ಪಾತ್ರದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

also read: ಕೊನೆಗೂ ತವರು ಮನೆಗೆ ಬಂದ ನಟಿ ನಿಧಿ ಸುಬ್ಬಯ್ಯ!!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌