ಆ್ಯಪ್ನಗರ

ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದ 'ಪೈಲ್ವಾನ್' ಸಿನಿಮಾ ಗಾಯಕ ಕೈಲಾಶ್ ಖೇರ್!

ಕೈಲಾಶ್ ಖೇರ್ ಅವರು ಭಾರತದ ಅದ್ಭುತ ಗಾಯಕ. ಈಗಾಗಲೇ ಅವರು ಅನೇಕ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಆದರೆ ಈ ಹಿಂದೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದರು. ಈ ಬಗ್ಗೆ ಅವರೇ ಸಂದರ್ಶನದಲ್ಲಿ ಹೇಳಿದ್ದಾರೆ.

THE TIMES OF INDIA NEWS SERVICE 30 Nov 2020, 9:52 pm
ಇಂದು ಗಾಯಕ ಕೈಲಾಶ್ ಖೇರ್ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಒಂದು ಕಾಲದಲ್ಲಿ ಅವರು ಅವಕಾಶವಿಲ್ಲದೆ ಡಿಪ್ರೆಶನ್‌ಗೆ ಜಾರಿದ್ದರಂತೆ, ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದರು. ಈ ಬಗ್ಗೆ ಅವರೇ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
Vijaya Karnataka Web play back singer kailash kher speaks about his struggled days
ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದ 'ಪೈಲ್ವಾನ್' ಸಿನಿಮಾ ಗಾಯಕ ಕೈಲಾಶ್ ಖೇರ್!


ಕೈಲಾಶ್‌ಗೆ ಪ್ರೇರಣೆ ನೀಡಿದ್ದು ಯಾವುದು?

'ನನಗೆ ಯಾರೂ ಪ್ರೇರಣೆ ನೀಡಿಲ್ಲ, ಪ್ರಭಾವ ಬೀರಿಲ್ಲ. ಮುಂಬೈಗೆ ಕೆಲಸಕ್ಕಾಗಿ ಬಂದಾಗ ನನ್ನನ್ನು ಸಾಕಷ್ಟು ಜನರು ರಿಜೆಕ್ಟ್ ಮಾಡಿದ್ದರು. ತುಂಬ ನೋವು ಅನುಭವಿಸಿದ್ದ ನಾನು ಎಲ್ಲವನ್ನೂ ಕಳೆದುಕೊಂಡಿದ್ದೆ, ಕಳೆದುಕೊಳ್ಳಲು ಏನೂ ಇರಲಿಲ್ಲ. ಇದೇ ನನಗೆ ಪ್ರೇರಣೆ ನೀಡಿತು ಅಂತ ಕೂಡ ಹೇಳಬಹುದು. ಸಂಗೀತದ ಮೇಲಿನ ಒಲವು, ಹುಚ್ಚುತನದಿಂದ ನಾನು ಈ ಸ್ಥಿತಿಯಲ್ಲಿದ್ದೇನೆ. ಈ ರಂಗದಲ್ಲಿ 15 ವರ್ಷ ಕಳೆದಿದ್ದೇನೆ' ಎಂದು ಕೈಲಾಶ್ ಖೇರ್ ಹೇಳಿದ್ದಾರೆ.

ಚಿಕ್ಕವಯಸ್ಸಿನಲ್ಲಿಯೇ ಪದ್ಮಶ್ರೀ ಪ್ರಶಸ್ತಿಯ ಗರಿ

'ಸಂಗೀತ ಕ್ಷೇತ್ರದಲ್ಲಿ ಅತಿ ಹೆಚ್ಚು ಚಿಕ್ಕ ವಯಸ್ಸಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿರೋದು ತುಂಬ ಖುಷಿ ನೀಡಿದೆ. 2017ರಲ್ಲಿ ಈ ಪ್ರಶಸ್ತಿ ಪಡೆದುಕೊಂಡಿದ್ದರೂ ಕೂಡ, 2013ರಲ್ಲಿ ನಾಮಿನೇಶನ್‌ ಆಗಿದ್ದೆ. ನಿಮಗೆ ಎಷ್ಟು ವರ್ಷ ಅನುಭವ ಇದೆ, ಎಷ್ಟು ಕಲಿತಿದ್ದೀರೋ ಎನ್ನೋದು ಲೆಕ್ಕಕ್ಕೆ ಬರೋದಿಲ್ಲ. ಸಂಗೀತ ಕ್ಷೇತ್ರದಲ್ಲಿ ಯಾವುದೇ ಸಂಸ್ಥೆಯಿಲ್ಲದೆ ವೈಯಕ್ತಿಕವಾಗಿ ಕಲಿಯಬಹುದು. ನಾನು ಯಶಸ್ಸು ಪಡೆಯುತ್ತೇನೆ ಎಂದು ನನಗೆ ನಾನೇ ಮಾತು ಕೊಟ್ಟುಕೊಂಡಿದ್ದೆ. ಈಗ ಹೊಸ ಗಾಯಕರಿಗೆ ಹಾಡಲು ನಾನು ಅವಕಾಶ ಮಾಡಿಕೊಡುತ್ತೇನೆ' ಎಂದು ಕೈಲಾಶ್ ಖೇರ್ ಹೇಳಿದ್ದಾರೆ.

ನಯಿ ಉಡಾನ್' ಮೂಲಕ ಪ್ರತಿಭೆಗಳಿಗೆ ಅವಕಾಶ
'ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನ ನಾನು 'ನಯಿ ಉಡಾನ್' ಹೆಸರಿನಲ್ಲಿ ಹೊಸ ಪ್ರತಿಭೆಗಳನ್ನು ಪರಿಚಯ ಮಾಡಿಕೊಡುತ್ತೇನೆ. ಇಡೀ ವರ್ಷ ನಾವು ಅವರಿಗೆ ಸಂಗೀತ ಪಾಠ ಕಲಿಸುತ್ತೇವೆ. ಇನ್ನೂ ಕೆಲವರಿಗೆ ಸಂಗೀತ ಗೊತ್ತಿದ್ದರೂ ಕೂಡ ಹೇಗೆ ಅದನ್ನು ಪ್ರಸ್ತುತಪಡಿಸಬೇಕು ಎನ್ನೋದು ಗೊತ್ತಿರೋದಿಲ್ಲ. ಇದನ್ನೆಲ್ಲ ಹೇಳಿಕೊಡಲು ಯಾವುದೇ ಸಂಸ್ಥೆಗಳಿಲ್ಲ ಅಂತ ಇದಕ್ಕೆ ಹೇಳುವುದು' ಎಂದು ಕೈಲಾಶ್ ಖೇರ್ ಹೇಳಿದ್ದಾರೆ.

Also Read-ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ಸುದೀಪ್ 'ಪೈಲ್ವಾನ್' ಹೊಸ ಸಾಂಗ್

ರಿಯಾಲಿಟಿ ಶೋಗಳ ಮೇಲೆ ಕೈಲಾಶ್‌ಗೆ ಇರುವ ಬೇಸರ ಏನು?

'ರಿಯಾಲಿಟಿ ಶೋಗಳು ಇದೇ ರೀತಿ ಮಾಡುತ್ತಿರುವಾಗ ನೀವು ಯಾಕೆ ಇದನ್ನು ಮಾಡುತ್ತಿದ್ದೀರಿ ಅಂತ ಕೆಲವರು ನನ್ನ ಪ್ರಶ್ನಿಸಿದ್ದರು. ಅಲ್ಲಿ ಸ್ಪರ್ಧಿಗಳು ಸ್ಟಾರ್ ಆಗಬಹುದು, ಆದರೆ ವಿಧೇಯಕವಾಗಿ ಕಲಿಯುವುದಿಲ್ಲ. ಅವರು ನಕಲಿ ಕನಸುಗಳನ್ನು ಮಾರುತ್ತಾರೆ. ನಿಮಗೆ ಸ್ಟಾರ್ ಆಗಬೇಕು ಎಂದಿದ್ದರೆ ನನ್ನ ಬಳಿ ಬರಬೇಡಿ ಅಂತ ಹೇಳ್ತೀನಿ. ನಿಮ್ಮ ಕೆಲಸದ ಮೂಲಕ ನೀವು ಜನರ ಮನಸ್ಸನ್ನು ತಲುಪುತ್ತೀರಿ, ಅದೇ ವ್ಯವಹಾರ' ಎಂದು ಕೈಲಾಶ್ ಖೇರ್ ಹೇಳಿದ್ದಾರೆ.

Also Read-#metoo: ಕೈಲಾಶ್‌ ಖೇರ್‌, ತೋಶಿ ಸಬ್ರಿ ಕೂಡ ಕಿರುಕುಳ ನೀಡಿದ್ದರು ಎಂದ ಗಾಯಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌