ಆ್ಯಪ್ನಗರ

'ಪೊಗರು' ಚಿತ್ರದ ರಿಲೀಸ್‌ಗೂ ಮುನ್ನವೇ ಧ್ರುವ ಸರ್ಜಾ ಕೈಯಲ್ಲಿವೆ ಇನ್ನೂ ನಾಲ್ಕು ಸಿನಿಮಾಗಳು!

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಒಬ್ಬರಾದ ಧ್ರುವ ಸರ್ಜಾ ಗಮನವೆಲ್ಲ ಈಗ 'ಪೊಗರು' ಸಿನಿಮಾದ ಮೇಲಿದೆ. ಆ ಚಿತ್ರ ರಿಲೀಸ್‌ ಆಗುವುದಕ್ಕೂ ಮುನ್ನವೇ ಅವರು ಇನ್ನಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

Vijaya Karnataka Web 7 Oct 2020, 10:44 pm
ಬಹಳ ಸಮಯ ತೆಗೆದುಕೊಂಡು ಸಿನಿಮಾ ಮಾಡುತ್ತಾರೆ ನಟ ಧ್ರುವ ಸರ್ಜಾ. 'ಭರ್ಜರಿ' ವಿಚಾರದಲ್ಲೇ ಅದು ಸಾಬೀತಾಗಿತ್ತು. ಈಗ 'ಪೊಗರು' ಸಿನಿಮಾ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಅಂದುಕೊಂಡಿದ್ದಕ್ಕಿಂತಲೂ ಕೊಂಚ ತಡವಾಗಿಯೇ ಈ ಸಿನಿಮಾ ಕೆಲಸಗಳು ಪೂರ್ಣಗೊಳ್ಳುತ್ತಿವೆ. ಅಷ್ಟರಲ್ಲಾಗಲೇ ಇತರೆ ಸಿನಿಮಾಗಳನ್ನೂ ಧ್ರುವ ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ನಾಲ್ಕು ಚಿತ್ರಗಳಿವೆ.
Vijaya Karnataka Web ಧ್ರುವ ಸರ್ಜಾ


ಧ್ರುವ ವೃತ್ತಿ ಜೀವನದಲ್ಲಿ 'ಪೊಗರು' ನಾಲ್ಕನೇ ಸಿನಿಮಾ. ಇತ್ತೀಚೆಗೆ ಅವರು ಜನ್ಮದಿನ ಆಚರಿಸಿಕೊಂಡರು. ಆ ಪ್ರಯುಕ್ತ ನಿರ್ದೇಶಕ ಎ.ಪಿ. ಅರ್ಜುನ್‌ ಹೊಸ ಚಿತ್ರ ಘೋಷಣೆ ಮಾಡಿದರು. ಧ್ರುವ ನಟನೆಯ ಮೊದಲ ಸಿನಿಮಾ 'ಅದ್ದೂರಿ'ಗೆ ನಿರ್ದೇಶನ ಮಾಡಿದ್ದು ಇದೇ ಅರ್ಜುನ್‌. ಈಗ ಬರೋಬ್ಬರಿ 8 ವರ್ಷಗಳ ಬಳಿಕ ಈ ನಟ-ನಿರ್ದೇಶಕನ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ.

ಅರ್ಜುನ್‌ ಈ ಸಿನಿಮಾ ಘೋಷಣೆ ಮಾಡಿದ್ದಾರಾದರೂ ಅದು ಸೆಟ್ಟೇರಲು ಇನ್ನೂ ಸಮಯ ಹಿಡಿಯಲಿದೆ. ಯಾಕೆಂದರೆ, ಧ್ರುವ ಅದಕ್ಕೂ ಮುನ್ನ ಮಾತುಕತೆ ಮಾಡಿರುವ ಸಿನಿಮಾಗಳು ಆರಂಭ ಆಗಬೇಕಿವೆ. 'ಪೊಗರು' ಬಳಿಕ ನಿರ್ಮಾಪಕ ಉದಯ್‌ ಮೆಹ್ತಾ ನಿರ್ಮಾಣದ ಸಿನಿಮಾದಲ್ಲಿ ಧ್ರುವ ನಟಿಸುವ ಸಾಧ್ಯತೆ ದಟ್ಟವಾಗಿದೆ. ಅದಾದ ಬಳಿಕ 'ಜಗ್ಗುದಾದ' ನಿರ್ದೇಶಕ ರಾಘವೇಂದ್ರ ಹೆಗಡೆ ಜೊತೆ ಅವರೊಂದು ಸಿನಿಮಾ ಮಾಡಬೇಕಿದೆ.

also read: ಧ್ರುವ ಸರ್ಜಾ ಜನ್ಮದಿನದಂದು ಫ್ಯಾನ್ಸ್‌ಗೆ 'ಗುಡ್‌ ನ್ಯೂಸ್‌'! 8 ವರ್ಷಗಳ ಬಳಿಕ ಒಂದಾಯ್ತು ಹಿಟ್ ಜೋಡಿ

ಬಿ.ಕೆ. ಗಂಗಾಧರ್‌ ಮತ್ತು ಶಿವಾರ್ಜುನ್‌ ನಿರ್ಮಾಣ ಮಾಡಲಿರುವ ಒಂದು ಸಿನಿಮಾದಲ್ಲೂ ಧ್ರುವ ನಟಿಸಲಿದ್ದಾರೆ. ಈ ಎಲ್ಲ ಸಿನಿಮಾಗಳ ಸರದಿಯಲ್ಲಿ ಕೊಂಚ ವ್ಯತ್ಯಾಸ ಆಗಬಹುದು. ಒಟ್ಟಿನಲ್ಲಿ ಧ್ರುವ ಕೈಯಲ್ಲೀಗ ಸಿಕ್ಕಾಪಟ್ಟೆ ಆಫರ್‌ಗಳಿವೆ. ಸದ್ಯ ಅಭಿಮಾನಿಗಳ ನಿರೀಕ್ಷೆ 'ಪೊಗರು' ಸಿನಿಮಾದ ಮೇಲಿದೆ. ಇದರಲ್ಲಿ ಧ್ರುವಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. 'ಖರಾಬು..' ಹಾಡು ಸೂಪರ್‌ ಹಿಟ್‌ ಆಗಿದೆ. ಈ ಚಿತ್ರಕ್ಕೆ ನಂದಕಿಶೋರ್‌ ನಿರ್ದೇಶನ ಮಾಡುತ್ತಿದ್ದಾರೆ.

also read: ಧ್ರುವ ಸರ್ಜಾ 'ಪೊಗರು' ತೋರಿಸಲಿರುವ ಹಾಡಿನ ಸೆಟ್‌ಗೆ ಒಂದೂವರೆ ಕೋಟಿ ರೂ. ಬಜೆಟ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌