ಆ್ಯಪ್ನಗರ

ದರ್ಶನ್‌ ಚಿತ್ರದ ನಿರ್ದೇಶಕನ ಜೊತೆ ಸಿನಿಮಾ ಮಾಡಲು ಸಜ್ಜಾಗಿರುವ ನಟ ಧ್ರುವ ಸರ್ಜಾ!

ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟ ಧ್ರುವ ಸರ್ಜಾ ಒಪ್ಪಿಕೊಳ್ಳಲಿರುವ ಹೊಸ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದೆ. ಆ ಬಗ್ಗೆ ಇಲ್ಲೊಂದು ಅಪ್‌ಡೇಟ್‌ ಸಿಕ್ಕಿದೆ. ಸ್ವತಃ ಧ್ರುವ ಸರ್ಜಾ ಈ ಕುರಿತು ಮಾಹಿತಿ ನೀಡಿದ್ದಾರೆ.

Vijaya Karnataka Web 23 Dec 2020, 7:15 pm
ಅಭಿಮಾನಿಗಳಿಂದ ಪ್ರೀತಿಯಿಂದ 'ಆ್ಯಕ್ಷನ್‌ ಪ್ರಿನ್ಸ್‌' ಎಂದು ಕರೆಸಿಕೊಳ್ಳುವ ನಟ ಧ್ರುವ ಸರ್ಜಾ ಸದ್ಯಕ್ಕೆ 'ಪೊಗರು' ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ಹೊಸ ಸಿನಿಮಾಗಳತ್ತಲೂ ಅವರು ಗಮನ ಹರಿಸಿದ್ದಾರೆ. ಹೊಸ ಹೊಸ ಕಥೆಗಳನ್ನು ಕೇಳುವುದರಲ್ಲಿ ಬ್ಯುಸಿ ಆಗಿದ್ದಾರೆ. ನಿರ್ದೇಶಕ ರಾಘವೇಂದ್ರ ಹೆಗಡೆ ಜೊತೆ ಅವರು ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ.
Vijaya Karnataka Web ರಾಘವೇಂದ್ರ ಹೆಗಡೆ ಧ್ರುವ ಸರ್ಜಾ


ದರ್ಶನ್‌ಗೆ ನಿರ್ದೇಶನ ಮಾಡಿದ್ದ ರಾಘವೇಂದ್ರ
2016ರಲ್ಲಿ ತೆರೆಕಂಡ 'ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌ ನಟನೆಯ 'ಜಗ್ಗುದಾದ' ಸಿನಿಮಾಗೆ ನಿರ್ದೇಶನ ಮಾಡಿದ್ದರು ರಾಘವೇಂದ್ರ ಹೆಗಡೆ. ಆ ಬಳಿಕ ಗ್ಯಾಪ್‌ ಪಡೆದುಕೊಂಡ ಅವರು ಈಗ ಮತ್ತೊಂದು ಮಾಸ್‌ ಕಥೆಯನ್ನು ಹಿಡಿದುಕೊಂಡು ಬಂದಿದ್ದಾರೆ. ದರ್ಶನ್‌ರಂತಹ ಸ್ಟಾರ್‌ ನಟನಿಗೆ ಆ್ಯಕ್ಷನ್‌-ಕಟ್ ಹೇಳಿರುವ ಅನುಭವ ಹೊಂದಿರುವ ಅವರು ಈಗ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ.

ಕಥೆ ಇಷ್ಟಪಟ್ಟ ಧ್ರುವ!
ಈಗಾಗಲೇ ಧ್ರುವ ಸರ್ಜಾ ಮತ್ತು ರಾಘವೇಂದ್ರ ಹೆಗಡೆ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ. ತಾವು ಸಿದ್ಧಪಡಿಸಿರುವ ಕಥೆಯನ್ನು ಧ್ರುವಗೆ ವಿವರಿಸಿದ್ದಾರೆ ರಾಘವೇಂದ್ರ. ಅದನ್ನು ಕೇಳಿ ಇಷ್ಟಪಟ್ಟಿದ್ದಾರೆ 'ಆ್ಯಕ್ಷನ್‌ ಪ್ರಿನ್ಸ್‌'. ಈ ಬಗ್ಗೆ ಅವರು ಟ್ವೀಟ್‌ ಕೂಡ ಮಾಡಿದ್ದಾರೆ. 'ರಾಘವೇಂದ್ರ ಹೆಗಡೆ ಸರ್‌ ಕಥೆ ಹೇಳಿದರು. ಎಂಥ ಅದ್ಭುತವಾದ ಫಸ್ಟ್‌ ಹಾಫ್‌. ರಿಫ್ರೆಶ್‌ ಎನಿಸಿತು. ಜೈ ಹನುಮಾನ್‌' ಎಂದು ಧ್ರುವ ಬರೆದುಕೊಂಡಿದ್ದಾರೆ.

also read: 7.2 ಕೋಟಿ ರೂ.ಗಳಿಗೆ 'ಪೊಗರು' ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಮಾರಾಟ! ಇದು ಧ್ರುವ ಸರ್ಜಾ ಹವಾ!

ಯಾವಾಗ ಬರಲಿದೆ 'ಪೊಗರು'?
ಧ್ರುವ ಸರ್ಜಾ ಅಭಿಮಾನಿಗಳು 'ಪೊಗರು' ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ 'ಖರಾಬು..' ಹಾಡು ಸೂಪರ್‌ ಹಿಟ್‌ ಆಗಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಈ ಸಿನಿಮಾ ತೆರೆ ಕಾಣಲಿದೆ. 2021ರ ಜನವರಿಯಲ್ಲಿ ತೆರೆಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಸಿನಿಪ್ರಿಯರು. ಈ ಚಿತ್ರದಲ್ಲಿ ಧ್ರುವಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಎಲ್ಲ ಕಾರಣದಿಂದ 'ಪೊಗರು' ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಮಾಡಿದೆ.

also read: 'ಪೊಗರು' ಬಳಿಕ ಧ್ರುವ ಸರ್ಜಾ ನಟಿಸಲಿರುವ ಹೊಸ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿ ಬಹಿರಂಗ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌