ಆ್ಯಪ್ನಗರ

ಮದುವೆ ವಿಚಾರಕ್ಕೆ ಕನ್ನಡದ 'ಜೋಶ್' ಸಿನಿಮಾ ನಟಿ ಶಾಮ್ನಾಗೆ ವಂಚನೆ! ಏನಿದು ಪ್ರಕರಣ?

ಸಮಾಜದಲ್ಲಿ ಕಳ್ಳ-ಕದೀಮರು, ನಯವಂಚಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇವರು ಹೆಣೆದ ಬಲೆಯಲ್ಲಿ ಹಲವರು ಬೀಳುತ್ತಾರೆ. ಕನ್ನಡದ 'ಜೋಶ್' ಸಿನಿಮಾದಲ್ಲಿ ನಟಿಸಿದ್ದ ನಟಿ ಶಾಮ್ನಾಗೆ ಈಗ ಇಂತಹ ಕಳ್ಳರ ಸಮಸ್ಯೆ ಎದುರಾಗಿದ್ದು, ಅವರೀಗ ಪೊಲೀಸರ ಮೊರೆ ಹೋಗಿದ್ದಾರೆ.

Vijaya Karnataka Web 25 Jun 2020, 10:22 pm
ಕೇರಳ ಪೊಲೀಸರು ಬುಧವಾರ ನಟಿ ಶಾಮ್ನಾ ಕಾಸಿಂಗೆ ಹಣ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ. 'ನಾಲ್ಕು ಜನ ಬಂಧಿತರನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಬೇಕಿದೆ. ತನಿಖೆ ನಡೆಯುತ್ತಿದೆ' ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
Vijaya Karnataka Web 1243


ನಟಿ ಮಾಧ್ಯಮದ ಮುಂದೆ ಹೇಳಿದ್ದೇನು?
ನಟಿಯ ಹಳೆಯ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಈ ನಾಲ್ಕು ಜನರು ಬೆದರಿಕೆಯೊಡ್ಡಿದ್ದಾರೆ ಎಂದು ನಟಿಯ ತಂದೆ ದೂರು ಕೊಟ್ಟಿದ್ದರು. ಮಲಯಾಳಂ ಮಾಧ್ಯಮದ ಬಳಿ ಮಾತನಾಡಿರುವ ಶಾಮ್ನಾ, 'ಯಾರಾದರೊಬ್ಬರು ಇದಕ್ಕೆ ಬಲಿಯಾಗುತ್ತಾರೆ. ಹೀಗಾಗಿ ನನ್ನ ಪಾಲಕರ ಬಳಿ ದೂರು ನೀಡಲು ಹೇಳಿದೆ. ಇದು ಒಂದು ಗ್ಯಾಂಗ್‌ನ ಪಾರ್ಟ್' ಎಂದಿದ್ದಾರೆ.

ಏನಿದು ಘಟನೆ?
ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೋರ್ವ ಶಾಮ್ನಾ ತಂದೆಗೆ ಕರೆ ಮಾಡಿ, ದುಬೈನಲ್ಲಿ ಉದ್ಯಮಿಯೋರ್ವನಿದ್ದಾನೆ. ಈತನ ಮೂಲ ನಾರ್ತ್ ಕೇರಳ ಎಂದು ಹೇಳಿದ್ದಾರೆ. 6 ಜನರು ಶಾಮ್ನಾ ಅವರ ಕೋಚಿ ಮನೆಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಅವರ ಸಂಬಂಧಿಕರ ವಿಡಿಯೋ ಕೂಡ ಮಾಡಿದ್ದಾರೆ. ಶಾಮ್ನಾ ತಂದೆಗೆ ಪುನಃ ಪುನಃ ಕಾಲ್ ಮಾಡಿ ಹಣ ಕೇಳಲಾಗುತ್ತಿದೆ. ಹಣ ಕೊಡಲು ನಟಿ ಮನೆಯವರು ಒಪ್ಪದಿದ್ದಾಗ ವಿಡಿಯೋ ಲೀಕ್ ಮಾಡುವುದಾಗಿ ಹೇಳಿದ್ದಾರೆ, ಅಷ್ಟೇ ಅಲ್ಲದೆ ಪೊಲೀಸ್ ಬಳಿ ಹೋಗದಂತೆ ಧಮ್ಕಿ ಹಾಕಿದ್ದಾರೆ. ಮೂರು ವರ್ಷಗಳ ಹಿಂದೆ ಈ ನಟಿಗೆ ಲೈಂಗಿಕ ದೌರ್ಜನ್ಯವಾಗಿತ್ತು. ಇದರ ಕುರಿತ ಕೇಸ್ ಇನ್ನೂ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಕನ್ನಡದಲ್ಲಿ ನಟಿಸಿದ್ದ ಶಾಮ್ನಾ
ಶಾಮ್ನಾರನ್ನು ಪೂರ್ಣ ಎಂದು ಕರೆಯಲಾಗುತ್ತದೆ. ತಮಿಳು, ಮಲಯಾಳಂ ಸಿನಿಮಾಗಲ್ಲಿ ಇವರು ನಟಿಸಿದ್ದಾರೆ. 13 ವರ್ಷಗಳ ಸಿನಿ ಜೀವನದಲ್ಲಿ 40 ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 2004ರಿಂದ ಶಾಮ್ನಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 'ಜೋಶ್', 'ರಾಧನ್ ಗಂಡ' ಸಿನಿಮಾದಲ್ಲಿಯೂ ನಟಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌