ಆ್ಯಪ್ನಗರ

Vairam Movie: ಆ್ಯಕ್ಷನ್ ಅವತಾರ ತಾಳಿದ ದೇವರಾಜ್ ಪುತ್ರ ಪ್ರಣಾಮ್‌; 'ವೈರಂ' ಚಿತ್ರದ ಟೀಸರ್ ರಿಲೀಸ್‌

'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಸಹೋದರ ಪ್ರಣಾಮ್ ದೇವರಾಜ್ ಅವರು ಈಗ ಆ್ಯಕ್ಷನ್ ಅವತಾರ ತಾಳಿದ್ದಾರೆ. ಅವರ ಮುಂದಿನ 'ವೈರಂ' ಸಿನಿಮಾ ಸಖತ್ ಮಾಸ್ ಆಗಿ ಮೂಡಿಬಂದಿದೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ, ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಪ್ರಣಾಮ್ ಪೋಷಕರಾದ ದೇವರಾಜ್ ಮತ್ತು ಚಂದ್ರಕಲಾ ದೇವರಾಜ್ ಆಗಮಿಸಿದ್ದರು.

Authored byಅವಿನಾಶ್ ಜಿ. ರಾಮ್ | Vijaya Karnataka Web 10 Jan 2023, 6:16 pm

ಹೈಲೈಟ್ಸ್‌:

  • ಈ ಬಾರಿ ಆ್ಯಕ್ಷನ್ ಅವತಾರ ತಾಳಿರುವ ದೇವರಾಜ್‌ ಪುತ್ರ ಪ್ರಣಾಮ್ ದೇವರಾಜ್
  • ಪ್ರಣಾಮ್ ದೇವರಾಜ್ ನಟನೆಯ 'ವೈರಂ' ಸಿನಿಮಾದ ಟೀಸರ್ ರಿಲೀಸ್ ಆಗಿದೆ
  • 'ವೈರಂ' ಸಿನಿಮಾದಲ್ಲಿ ಪ್ರಣಾಮ್ ದೇವರಾಜ್‌ಗೆ 'ಗರುಡ' ರಾಮ್ ವಿಲನ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web pranam
Vairam Movie: ಆ್ಯಕ್ಷನ್ ಅವತಾರ ತಾಳಿದ ದೇವರಾಜ್ ಪುತ್ರ ಪ್ರಣಾಮ್‌; 'ವೈರಂ' ಚಿತ್ರದ ಟೀಸರ್ ರಿಲೀಸ್‌
ನಟ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್‌ ದೇವರಾಜ್‌ ಅವರು ಈ ಹಿಂದೆ 'ಕುಮಾರಿ 21ಎಫ್‌' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಆ ಸಿನಿಮಾದಲ್ಲಿ ತುಂಬ ಸಾಫ್ಟ್ ಆಗಿರುವಂತಹ ಪಾತ್ರ ಮಾಡಿದ್ದರು. ಇದೀಗ ಪಕ್ಕಾ ಆ್ಯಕ್ಷನ್ ಅವತಾರದಲ್ಲಿ ಮಿಂಚಲು ಅವರು ರೆಡಿ ಆಗಿದ್ದಾರೆ. ಅವರು ಆಂಗ್ರಿ ಯಂಗ್ ಮ್ಯಾನ್ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ 'ವೈರಂ' ಚಿತ್ರದಲ್ಲಿ ಅವರು ಹೀರೋ ಆಗಿ ನಟಿಸಿದ್ದಾರೆ. ಈಚೆಗೆ ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಪ್ರಣಾಮ್ ಪೋಷಕರಾದ ದೇವರಾಜ್ ಮತ್ತು ಚಂದ್ರಕಲಾ ದೇವರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹೋದರ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು. ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ನಟ ದೇವರಾಜ್, 'ಕನ್ನಡ ಚಿತ್ರರಂಗ ಮತ್ತೆ ಬ್ಯುಸಿಯಾಗಿದೆ. ಇಂತಹ ಸಮಯದಲ್ಲಿ ನನ್ನ ಮಗನ 2ನೇ ಸಿನಿಮಾ ಬರುತ್ತಿದೆ. ನಿರ್ದೇಶಕ ಸಾಯಿ ಶಿವನ್ ಒಂದೊಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಕೇಳಿದ್ದೇನೆ, ಎಲ್ಲವೂ ಚೆನ್ನಾಗಿದೆ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ..' ಎಂದು ಹಾರೈಸಿದರು.

Devaraj: 'ಪ್ರಜಾರಾಜ್ಯ' ಟೀಸರ್ ರಿಲೀಸ್ ಮಾಡಿದ ನಟ ದೇವರಾಜ್
ಈ ಬಾರಿ ಆ್ಯಕ್ಷನ್ ಹೀರೋ ಆಗಿದ್ದೆನೆ
ಎರಡನೇ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಣಾಮ್, 'ಚಿಕ್ಕ ವಯಸಿನಿಂದ ಅಪ್ಪ ಮತ್ತು ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು ನಾನು. ನನ್ನ ಹಿಂದಿನ ಸಿನಿಮಾದಲ್ಲಿ ಚಾಕೊಲೇಟ್ ಬಾಯ್ ಆಗಿದ್ದೆ. ಈ ಬಾರಿ ಆ್ಯಕ್ಷನ್ ಹೀರೋ ಆಗಿದ್ದೆನೆ. ಸಾಯಿ ಶಿವನ್ ಅವರಲ್ಲಿ ತುಂಬಾ ಕಾನ್ಫಿಡೆನ್ಸ್ ಇದೆ. ನಿರ್ಮಾಪಕರಾದ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ನಮಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಛಾಯಾಗ್ರಹಣ ತುಂಬ ಚೆನ್ನಾಗಿ ಮೂಡಿಬಂದಿದೆ. ನಾನು ಇಷ್ಟು ಚೆನ್ನಾಗಿ ತೆರೆಮೇಲೆ ಕಾಣಿಸಲು ಛಾಯಾಗ್ರಾಹಕರೇ ಕಾರಣ. ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ ಮಾತ್ರ. ನನಗೆ 2ನೇ ಚಿತ್ರದಲ್ಲೇ 'ಗರುಡ' ರಾಮ್ ಅವರಂಥ ಕಲಾವಿದರ ಎದುರು ಅಭಿನಯಿಸುವ ಅವಕಾಶ ಸಿಕ್ಕಿದೆ..' ಎಂದರು.

Prajwal Devaraj: 'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ನಟನೆಯ 'ಗಣ' ಸಿನಿಮಾದ ಶೂಟಿಂಗ್ ಕಂಪ್ಲೀಟ್
'ವೈರಂ' ಚಿತ್ರಕ್ಕೆ ಮೋನಾಲ್ ನಾಯಕಿ
ಈ ಚಿತ್ರಕ್ಕೆ ನಾಯಕಿಯಾಗಿ ಮೋನಾಲ್ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಇದು ಅವರ ಮೊದಲ ಚಿತ್ರ. 'ವೈರಂ'ನಲ್ಲಿ ಅವರು ಕ್ರಿಶ್ಚಿಯನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. 'ಈ ಚಿತ್ರದಲ್ಲಿ ಜನರಿಗೆ ಒಂದು ಯೂನಿವರ್ಸಲ್ ಮೆಸೇಜ್ ಇದೆ. ಜನ ಬದಲಾಗಬೇಕು ಎಂದು ಹೇಳಲಾಗಿದೆ. ನಮ್ಮ ಸಿನಿಮಾಗೆ ಪ್ರೇಕ್ಷಕರು ಸಪೋರ್ಟ್ ಮಾಡುತ್ತಾರೆ ಎಂಬ ನಂಬಿಕೆಯಿದೆ..' ಎಂದರು ನಬಟ 'ಗರುಡ' ರಾಮ್.


ಪುತ್ರನ 'ಅಬ್ಬರ' ಸಿನಿಮಾದ ಟ್ರೇಲರ್ ಲಾಂಚ್ ಮಾಡಿದ ದೇವರಾಜ್; ಅಬ್ಬರಿಸಲು ಪ್ರಜ್ವಲ್ ರೆಡಿ
ಈ ಚಿತ್ರಕ್ಕೆ ಗೋಪಿನಾಥ್ ಅವರ ಛಾಯಾಗ್ರಹಣವಿದ್ದು, ಮಹತಿ ಸ್ವರಸಾಗರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರ್ ಅಶ್ವತ್ಥ್‌ ಹಾಗೂ ವೀಣಾಸುಂದರ್ ಅವರು ಹೀರೋ ತಂದೆ-ತಾಯಿ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು, ಕವಿರಾಜ್, ನಾಗೇಂದ್ರ ಪ್ರಸಾದ್, ರಾಮ್ ನಾರಾಯಣ್ ಬರೆದಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌