ಆ್ಯಪ್ನಗರ

ಸಿನಿಪ್ರಿಯರಿಗೆ ಪುನೀತ್ ರಾಜ್‌ಕುಮಾರ್‌ ಬಡಿಸಲಿದ್ದಾರೆ 'ಫ್ರೆಂಚ್ ಬಿರಿಯಾನಿ'!

ದಾನೀಶ್‌ ಸೇಠ್‌, ರಂಗಾಯಣ ರಘು, ಸಾಲ್‌ ಯೂಸುಫ್‌ ನಟಿಸಿರುವ 'ಫ್ರೆಂಚ್‌ ಬಿರಿಯಾನಿ' ಚಿತ್ರವು ಅಮೇಜಾನ್‌ ಪ್ರೈಮ್‌ನಲ್ಲಿ ಪ್ರಸಾರ ಆರಂಭಿಸುವುದಕ್ಕೆ ಸಿದ್ಧವಾಗಿದೆ. ಪನ್ನಗಭರಣ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.

Vijaya Karnataka Web 14 Jul 2020, 10:20 pm
'ಪವರ್‌ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಿಂದ ಈ ಹಿಂದೆ 'ಕವಲುದಾರಿ' ಮತ್ತು 'ಮಾಯಾಬಜಾರ್‌' ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದ್ದವು. ಇದೀಗ ಆ ಬ್ಯಾನರ್‌ನಿಂದ ಇನ್ನೆರಡು ಸಿನಿಮಾಗಳು ನೇರವಾಗಿ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ತೆರೆಗೆ ಬರಲಿದೆ. ಕಾರಣ, ಕೊರೊನಾ ವೈರಸ್‌! ಈಗಾಗಲೇ ಪ್ರಜ್ವಲ್‌ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ನಟಿಸಿರುವ 'ಲಾ' ಚಿತ್ರವು ಜುಲೈ 17ರಂದು ಅಮೇಜಾನ್‌ ಪ್ರೈಮ್‌ನಲ್ಲಿ ರಿಲೀಸ್ ಆಗೋಕೆ ರೆಡಿ ಆಗಿದೆ. ಈಗ ಪುನೀತ್ ನಿರ್ಮಾಣದ ಇನ್ನೊಂದು ಸಿನಿಮಾ 'ಫ್ರೆಂಚ್ ಬಿರಿಯಾನಿ' ಕೂಡ ಜುಲೈ 24ರಿಂದ ಅಮೇಜಾನ್ ಪ್ರೈಮ್‌ನಲ್ಲಿ ಪ್ರಸಾರ ಆರಂಭಿಸಲಿದೆ.
Vijaya Karnataka Web puneeth rajkumar danish sait starrer french biriyani movie will release on july 24
ಸಿನಿಪ್ರಿಯರಿಗೆ ಪುನೀತ್ ರಾಜ್‌ಕುಮಾರ್‌ ಬಡಿಸಲಿದ್ದಾರೆ 'ಫ್ರೆಂಚ್ ಬಿರಿಯಾನಿ'!


ಕನ್ನಡದಲ್ಲಿ ಹೊಸ ಸಿನಿಮಾಗಳು ತೆರೆಕಂಡು ಬರೋಬ್ಬರಿ 4 ತಿಂಗಳಾಯ್ತು. ಹೊಸ ಕನ್ನಡ ಸಿನಿಮಾಗಳಿಗಾಗಿ ಕಾದು ಕುಳಿತಿದ್ದ ಸಿನಿಪ್ರಿಯರಿಗೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ನೀಡುತ್ತಿದೆ ಪುನೀತ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆ. ಈ ಹಿಂದೆ 'ಹ್ಯಾಪಿ ನ್ಯೂ ಇಯರ್‌' ಸಿನಿಮಾಗೆ ನಿರ್ದೇಶನ ಮಾಡಿದ್ದ ಪನ್ನಗಭರಣ, 'ಫ್ರೆಂಚ್‌ ಬಿರಿಯಾನಿ'ಗೆ ನಿರ್ದೇಶನ ಮಾಡಿದ್ದಾರೆ. ಶಿವಾಜಿನಗರದ ಆಟೋ ಡ್ರೈವರ್ ಹಾಗೂ ಫ್ರೆಂಚ್ ವ್ಯಕ್ತಿ ನಡುವೆ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ.

'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರದಲ್ಲಿ ರಾಜಕಾರಣಿ ಆಗಿ ಮಿಂಚು ಹರಿಸಿದ್ದ ನಟ ದಾನೀಶ್‌ ಸೇಠ್‌, 'ಫ್ರೆಂಚ್ ಬಿರಿಯಾನಿ'ಯಲ್ಲಿ ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಫ್ರೆಂಚ್ ವ್ಯಕ್ತಿಯಾಗಿ ಬಾಲಿವುಡ್‌ ನಟ ಸಾಲ್‌ ಯೂಸೂಫ್ ಬಣ್ಣ ಹಚ್ಚಿದ್ದಾರೆ. ನಿಜ ಅನುಭವಗಳನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಪನ್ನಗಭರಣ ಈ ಸಿನಿಮಾದ ಕಥೆ ಮಾಡಿದ್ದು, ಹಾಸ್ಯಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿದೆಯಂತೆ. ಉಳಿದಂತೆ ರಂಗಾಯಣ ರಘು, ದಿಶಾ ಮದನ್, ನಾಗಭೂಷಣ್, ಸಿಂಧೂ ಶ್ರೀನಿವಾಸಮೂರ್ತಿ ಮುಂತಾದವರು ಚಿತ್ರದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಕಾರ್ತಿಕ್ ಇದರ ಛಾಯಾಗ್ರಹಣ ಮಾಡಿದ್ದಾರೆ.

ವಕಿಲೆಯಾದ ಪ್ರಜ್ವಲ್‌ ದೇವರಾಜ್ ಪತ್ನಿ ರಾಗಿಣಿ

ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ ತಲ್ವಾರ್‌ 'ಫ್ರೆಂಚ್ ಬಿರಿಯಾನಿ'ಗೆ ಬಂಡವಾಳ ಹೂಡಿದ್ದಾರೆ. ಜುಲೈ 16ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ.

ನಾನು ದಾನೀಶ್‌ ಸೇಠ್‌ ದೊಡ್ಡ ಅಭಿಮಾನಿ ಎಂದ ಪುನೀತ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌