ಆ್ಯಪ್ನಗರ

ಪುನೀತ್‌ಗೆ ಅಣ್ಣಾವ್ರನ್ನು ನೆನಪು ಮಾಡಿದ 'ಯುವ ರಣಧೀರ ಕಂಠೀರವ' ಚಿತ್ರದ ಈ ವಿಡಿಯೋ!

ರಾಘವೇಂದ್ರ ರಾಜ್‌ಕುಮಾರ್ ಅವರ 2ನೇ ಮಗ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದಾರೆ. ಅವರ ಚೊಚ್ಚಲ ಚಿತ್ರದ ಲಾಂಚಿಂಗ್ ವಿಡಿಯೋವನ್ನು ನ.1ರಂದು ರಿಲೀಸ್ ಮಾಡಲಾಗಿದೆ. ಅದಕ್ಕೆ ಪುನೀತ್ ನೀಡಿದ ಪ್ರತಿಕ್ರಿಯೆ ಹೀಗಿದೆ!

Vijaya Karnataka Web 1 Nov 2020, 9:41 pm
'ವರನಟ' ಡಾ. ರಾಜ್‌ಕುಮಾರ್ ಅವರ ಕುಟುಂಬದ ಮತ್ತೊಂದು ಕುಡಿ ಇಂದು (ನ.1) ಅಧಿಕೃತವಾಗಿ ನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರ 2ನೇ ಮಗ ಯುವ ರಾಜ್‌ಕುಮಾರ್ ನಟನೆಯ ಹೊಸ ಸಿನಿಮಾದ ಶೀರ್ಷಿಕೆ ಮತ್ತು ಲಾಂಚಿಂಗ್ ವಿಡಿಯೋ ಕನ್ನಡ ರಾಜ್ಯೋತ್ಸವದ ಈ ಶುಭದಿನದಂದು ರಿಲೀಸ್ ಆಗಿದೆ. ಈ ವಿಡಿಯೋಗೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಯುವ ಚಿಕ್ಕಪ್ಪ, ನಟ ಪುನೀತ್ ರಾಜ್‌ಕುಮಾರ್ ಅವರು ಕೂಡ ಮೆಚ್ಚಿಕೊಂಡಿದ್ದಾರೆ. ವಿಡಿಯೋ ನೋಡಿದ ಅವರು, 'ನನಗೆ ಒಬ್ಬ ಪ್ರೇಕ್ಷಕನಾಗಿ ಆತನ ಸಂಭಾಷಣೆ ಶೈಲಿ ಇಷ್ಟವಾಯ್ತು. ಅದನ್ನು ಕೇಳಿದಾಗ ನನ್ನ ತಂದೆ ನೆನಪಾಗ್ತಾರೆ' ಎಂದು ಹೇಳಿದ್ದಾರೆ.
Vijaya Karnataka Web Yuva rajkumar


ಯುವ ನಮ್ಮನೆ ಮಗ!
ಈ ವಿಡಿಯೋ ಬಗ್ಗೆ ಮಾತನಾಡಿರುವ ಪುನೀತ್ ರಾಜ್‌ಕುಮಾರ್, 'ಯುವ ನಮ್ಮ ಮನೆ ಮಗ. ನಾವು ಏನೇ ಮಾತನಾಡಿದರೂ, ಹೆಚ್ಚಾಗಿ ಮಾತನಾಡಿದಂತೆ ಇರುತ್ತದೆ. ಈ ಸಿನಿಮಾಗೆ ಒಂದು ಶೋ ರೀಲ್ ಥರ ಮಾಡಿ, ಐದು ನಿಮಿಷದ ವಿಡಿಯೋ ಮಾಡಿದ್ದಾರೆ. ಅದನ್ನು ಯುವನ ಒಳಗೆ ಇರುವ ಪ್ರತಿಭೆಯನ್ನು ತೋರಿಸಬೇಕು ಎಂಬ ಉದ್ದೇಶದಿಂದ ನಿರ್ದೇಶಕ ಪುನೀತ್ ಮಾಡಿದ್ರು ಎನಿಸುತ್ತದೆ. ಆಗ ಶೂಟಿಂಗ್‌ ಸೆಟ್‌ಗೆ ನಾನು ಕೂಡ ಹೋಗಿದ್ದೆ. ನಾವು ಏನೇ ಹೇಳಿದರೂ, ಜಾಸ್ತಿ ಎನಿಸುತ್ತದೆ. ಕಷ್ಟಪಟ್ಟಿದ್ದಾನೆ, ಶ್ರದ್ಧೆಯಿಂದ ಕೆಲಸ ಮಾಡಿದ್ದಾನೆ. ಸ್ಟಂಟ್ ಎಲ್ಲ ಉತ್ತಮವಾಗಿ ಮಾಡಿದ್ದಾನೆ' ಎಂದು ಹೇಳಿದ್ದಾರೆ.

ಯುವ ತುಂಬ ಕಷ್ಟಪಡಲಿ!
'ನನಗೆ ಒಬ್ಬ ಪ್ರೇಕ್ಷಕನಾಗಿ ಆತನ ಸಂಭಾಷಣೆ ಶೈಲಿ ಇಷ್ಟವಾಯ್ತು. ಅದನ್ನು ಕೇಳಿದಾಗ ನನ್ನ ತಂದೆ (ಡಾ. ರಾಜ್‌ಕುಮಾರ್) ನೆನಪಾಗ್ತಾರೆ. ಏನೇ ಆಗಲಿ, ಕಷ್ಟಪಡಬೇಕು. ಇನ್ನೂ ಹೆಚ್ಚಿನ ರೀತಿಯಲ್ಲಿ ಕಷ್ಟಪಡಲಿ. ಮುಂದೆ ಬರುವುದಕ್ಕೆ ಪ್ರಯತ್ನಪಡಲಿ, ಚೆನ್ನಾಗಿ ಕೆಲಸ ಮಾಡಲಿ. ಸಿನಿಮಾಕ್ಕೆ ಒಳ್ಳೆಯದಾಗಲಿ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರೇಕ್ಷಕರ ಆಶೀರ್ವಾದ ತಂಡದ ಮೇಲೆ ಇರಲಿ. ಅವನನ್ನು ಹರಸಿ..' ಎಂದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

ಅಣ್ಣಾವ್ರ ಮೊಮ್ಮಗನ ಮೊದಲ ಚಿತ್ರದ ಟೈಟಲ್‌ ಬಹಿರಂಗ! ಡಾ. ರಾಜ್‌ ಸಿನಿಮಾದ ಶೀ‍ರ್ಷಿಕೆಯಲ್ಲಿ ಯುವ ಸಿನಿಮಾ

ಚಿತ್ರಕ್ಕೆ 'ಯುವ ರಣಧೀರ ಕಂಠೀರವ' ಎಂದು ಟೈಟಲ್ ಇಡಲಾಗಿದೆ. ಅಣ್ಣಾವ್ರಂತೆಯೇ ಯುವ ಕೂಡ ಖಡಕ್ ಆಗಿಯೇ ಡೈಲಾಗ್ ಹೊಡೆದಿದ್ದಾರೆ. ಜೊತೆಗೆ ಸಾಹಸ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ದೇಹವನ್ನು ಹುರಿಗೊಳಿಸಿ, ಗಡ್ಡದ ಲುಕ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ರಾಜ್ ಕುಟುಂಬದ ಅಭಿಮಾನಿಗಳಿಗೆ ಖುಷಿ ನೀಡಿದೆ. 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಳಿ ಸಹಾಯಕರಾಗಿದ್ದ ಪುನೀತ್ ರುದ್ರನಾಗ್ 'ಯುವ ರಣಧೀರ ಕಂಠೀರವ' ಸಿನಿಮಾಕ್ಕೆ ನಿರ್ದೇಶನ ಮಾಡಲಿದ್ದಾರೆ. 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡಲಿದ್ದು, ಸಂಕೇತ್ ಛಾಯಾಗ್ರಹಣ ಮಾಡಲಿದ್ದಾರೆ. ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಮಾಡಲಿದ್ದು, ವಿಜಯ್ ರಾಜ್ ಸಂಕಲನದ ಹೊಣೆ ಹೊತ್ತಿದ್ದಾರೆ.

ಉತ್ತರ ಕರ್ನಾಟಕದ ನೆರೆ ಸಂಕಷ್ಟಕ್ಕೆ ಮಿಡಿದ ಸ್ಯಾಂಡಲ್‌ವುಡ್‌ ತಾರೆಯರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌