ಆ್ಯಪ್ನಗರ

ಸದ್ದಿಲ್ಲದೇ ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆದ ಪುನೀತ್ ರಾಜ್‌ಕುಮಾರ್!

'ಪವರ್ ಸ್ಟಾರ್‌' ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಆದರೆ, ಬಿಡುಗಡೆಗೂ ಮೊದಲೇ ಹೊಸದೊಂದು ದಾಖಲೆ ಬರೆದಿದೆ ಅಪ್ಪು ಅಭಿನಯದ ಈ ಸಿನಿಮಾ!

Vijaya Karnataka Web 31 Oct 2019, 5:58 pm
ದಸರಾ ಹಬ್ಬದ ಕೊಡುಗೆಯಾಗಿ ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿತ್ತು. ಸ್ಫೋರ್ಟ್ಸ್‌ಮನ್‌ ಲುಕ್‌ನಲ್ಲಿ ಸಖತ್ ಆಗಿಯೇ ಮಿಂಚಿದ್ದರು ಪುನೀತ್‌. ಅಭಿಮಾನಿಗಳಿಂದಲೂ ಈ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಸದ್ದಿಲ್ಲದೇ, 'ಯುವರತ್ನ' ಹೊಸ ದಾಖಲೆಯೊಂದನ್ನು ಬರೆದಿದೆ. ಅದೇನು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.
Vijaya Karnataka Web APPU


ಪುನೀತ್‌ ರಾಜ್‌ಕುಮಾರ್ 'ಜೇಮ್ಸ್‌' ಚಿತ್ರಕ್ಕೆ ಈಗಲೇ ಎಂಥ ಕ್ರೇಜ್‌ ಶುರುವಾಗಿದೆ ನೋಡಿ!!

ಸಂತೋಷ್‌ ಆನಂದ್‌ರಾಮ್ ನಿರ್ದೇಶನ ಮಾಡಿರುವ ಈ ಸಿನಿಮಾದ ಟೀಸರ್‌ ಇದುವರೆಗೂ 31 ಲಕ್ಷ ಬಾರಿ ವೀಕ್ಷಣೆಗೊಳಪಟ್ಟಿದೆ. ಅಲ್ಲದೆ, 1.34 ಲಕ್ಷ ಜನರು ಅದಕ್ಕೆ ಲೈಕ್ ಒತ್ತಿದ್ದಾರೆ. ಆದರೆ, ದಾಖಲೆ ಸೃಷ್ಟಿಯಾಗಿರುವುದು ಕಾಮೆಂಟ್ಸ್‌ಗಳ ವಿಚಾರದಲ್ಲಿ. ಹೌದು, 'ಯುವರತ್ನ' ಟೀಸರ್‌ಗೆ ಯುಟ್ಯೂಬ್‌ನಲ್ಲಿ ಈವರೆಗೂ 64 ಸಾವಿರಕ್ಕೂ ಅಧಿಕ ಕಾಮೆಂಟ್ಸ್‌ಗಳು ಸಿಕ್ಕಿವೆ. ಕನ್ನಡ ಸಿನಿಮಾವೊಂದರ ಟೀಸರ್‌ಗೆ ಇಷ್ಟೊಂದು ಪ್ರಮಾಣದಲ್ಲಿ ಕಾಮೆಂಟ್ಸ್‌ ಬಂದಿರೋದು ಇದೇ ಮೊದಲು. ಈ ಮೂಲಕ ಪುನೀತ್ ಹೊಸ ದಾಖಲೆ ಬರೆದಿದ್ದಾರೆ.


ಈ ವಿಚಾರವನ್ನು ಸ್ವತಃ ಹೊಂಬಾಳೆ ಸಂಸ್ಥೆಯೇ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 'ರಾಜಕುಮಾರ' ನಂತರ ಪುನೀತ್‌, ನಿರ್ದೇಶಕ ಸಂತೋಷ್ ಹಾಗೂ ನಿರ್ಮಾಪಕ ವಿಜಯ್‌ ಕಿರಗಂದೂರು 'ಯುವರತ್ನ' ಚಿತ್ರಕ್ಕಾಗಿ ಮತ್ತೊಮ್ಮೆ ಒಟ್ಟಾಗಿದ್ಧಾರೆ. ಶಿಕ್ಷಣ ವ್ಯವಸ್ಥೆಯ ಕುರಿತ ಕಥೆ ಈ ಸಿನಿಮಾದಲ್ಲಿದೆಯಂತೆ. ಅಪ್ಪು ಇಲ್ಲಿ ಕಾಲೇಜು ವಿದ್ಯಾರ್ಥಿಯಾಗಿಯೂ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ಅನೇಕ ವರ್ಷಗಳ ಬಳಿಕ ಪಾತ್ರಕ್ಕಾಗಿ ಅವರು ಪುನಃ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಸಾಯೇಷಾ ಸೈಗಲ್ ನಟಿಸಿದ್ಧಾರೆ. ಪ್ರಕಾಶ್ ರೈ, ಧನಂಜಯ, ದಿಗಂತ್‌, ಸೋನು ಗೌಡ ಪೋಷಕ ಪಾತ್ರಗಳಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌