ಆ್ಯಪ್ನಗರ

ರಾಗಿಣಿ-ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ! ಇನ್ನೂ 3 ದಿನ ಪರಪ್ಪನ ಅಗ್ರಹಾರದಲ್ಲೇ ವಾಸ!

ಡ್ರಗ್ ಮಾಫಿಯಾಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರನ್ನು ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಈ ಮಧ್ಯೆ ಅವರ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ ಆಗಿದೆ.

Vijaya Karnataka Web 21 Sep 2020, 11:19 pm
ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ ಆಗಿದೆ. ಕಳೆದ ಕೆಲ ದಿನಗಳಿಂದ ಇಬ್ಬರು ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಇಬ್ಬರ ಕುಟುಂಬವದವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ಅದರ ವಿಚಾರಣೆ ಇತ್ತು. ಆದರೆ, ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ (ಸೆ.24) ಮುಂದೂಡಿದ್ದಾರೆ. ಅಲ್ಲಿಗೆ, ಇನ್ನೂ ಮೂರು ದಿನಗಳ ಕಾಲ ಈ ನಟಿಯರು ಜೈಲಿನಲ್ಲಿ ಇರುವುದು ಅನಿವಾರ್ಯವಾಗಿದೆ.
Vijaya Karnataka Web ರಾಗಿಣಿ-ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ! ಇನ್ನೂ 3 ದಿನ ಪರಪ್ಪನ ಅಗ್ರಹಾರದಲ್ಲೇ ವಾಸ!


ನಟಿ ರಾಗಿಣಿಯ ನ್ಯಾಯಾಂಗ ಬಂಧನ ಸೆ.28ಕ್ಕೆ ಮುಕ್ತಾಯಗೊಳ್ಳಲಿದ್ದು, ನಟಿ ಸಂಜನಾರ ನ್ಯಾಯಾಂಗ ಬಂಧನವು ಸೆ.30ರಂದು ಮುಕ್ತಾಯಗೊಳ್ಳಲಿದೆ. ಅಷ್ಟರೊಳಗೆ ಆಚೆ ಬರಲು ಅವರಿಬ್ಬರು ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈಗ ಅರ್ಜಿ ವಿಚಾರಣೆ ಮುಂದೂಡಿರುವುದರಿಂದ ಪರಪ್ಪನ ಅಗ್ರಹಾರದಲ್ಲೇ ಇನ್ನೂ 3 ದಿನ ಇರಬೇಕಾಗಿದೆ. ಡ್ರಗ್ ಜಾಲದ ಆರೋಪಿಗಳ ಜೊತೆಗೆ ಈ ಇಬ್ಬರು ನಟಿಯರಿಗೆ ನಿಕಟ ಸಂಪರ್ಕ ಇದೆ ಎನ್ನಲಾಗಿದೆ.

ಡ್ರಗ್ ಮಾಫಿಯಾ ಪ್ರಕರಣದಲ್ಲಿ ರಾಗಿಣಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರಿಗೆ ಸೆ.3ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಆಗ ಅವರು ಗೈರಾಗಿದ್ದರು. ನಂತರ ಸೆ.4ರಂದು ಬೆಳ್ಳಂಬೆಳಗ್ಗೆ ರಾಗಿಣಿ ಮನೆ ಮೇಲೆ ದಾಳಿ ಮಾಡಿ, ಅವರನ್ನು ಸಿಸಿಬಿ ಕಚೇರಿಗೆ ಕರೆತರಲಾಗಿತ್ತು. ನಂತರ ಅವರನ್ನು ವಶಕ್ಕೆ ಪಡೆದು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಕೆಲ ದಿನಗಳ ಕಾಲ ಇರಿಸಲಾಗಿತ್ತು. ನಂತರ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.

ಡ್ರಗ್ ಮಾಫಿಯಾ ಕುರಿತು ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್‌!

ನಟಿ ಸಂಜನಾ ಮನೆ ಮೇಲೆಯೂ ಸೆ.8ರಂದು ಬೆಳ್ಳಂಬೆಳಗ್ಗೆಯೇ ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳು, ಅನೇಕ ದಾಖಲೆಗಳನ್ನು ವಶಪಡಿಸಿಕೊಂಡು, ಅವರನ್ನೂ ಕೂಡ ಕಚೇರಿಗೆ ಕರೆತಂದು ವಿಚಾರಣೆ ಮಾಡಿದ್ದರು. ನಂತರ ವಶಕ್ಕೆ ಪಡೆದು ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಿದ್ದರು. ಅಂತಿಮವಾಗಿ ಅವರು ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಹೋಗಬೇಕಾಯಿತು. ಡ್ರಗ್ ಪ್ರಕರಣದಲ್ಲಿ ಈ ಇಬ್ಬರು ನಟಿಯರ ಬಂಧನ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ.

ಸಂಜನಾ ಗಲ್ರಾನಿ ಮುಸ್ಲಿಂ ಧರ್ಮಕ್ಕೆ ಮತಾಂತರ? ಹೊಸ ಬಾಂಬ್‌ ಸಿಡಿಸಿದ ಪ್ರಶಾಂತ್‌ ಸಂಬರಗಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌