ಆ್ಯಪ್ನಗರ

ರಜನಿಕಾಂತ್‌ ರಾಜಕೀಯ: ಮಹತ್ವದ ಸಭೆ ನಂತರ ಮಾಹಿತಿ ಹಂಚಿಕೊಂಡ 'ಸೂಪರ್‌ ಸ್ಟಾರ್‌'!

ರಜನಿಕಾಂತ್‌ ರಾಜಕೀಯ ಪ್ರವೇಶವನ್ನು ಕೋಟ್ಯಂತರ ಜನರು ಎದುರು ನೋಡುತ್ತಿದ್ದಾರೆ. ಈ ಕುರಿತಂತೆ ಸೋಮವಾರ (ನ.30) ಒಂದು ಪ್ರಮುಖ ಸಭೆಯನ್ನು ನಡೆಸಿರುವ ರಜನಿ, ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Vijaya Karnataka Web 30 Nov 2020, 2:52 pm
ಮುಂಬರುವ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ರಜನಿಕಾಂತ್‌ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ದೊಡ್ಡ ಕೌತುಕ ನಿರ್ಮಾಣ ಆಗಿದೆ. ಈ ಕುರಿತಂತೆ ತಮ್ಮ 'ರಜನಿ ಮಕ್ಕಳ್ ಮಂಡ್ರಮ್‌' ಸಂಘಟನೆಯ ಜಿಲ್ಲಾ ಪದಾಧಿಕಾರಿಗಳ ಜೊತೆ ಅವರು ಸಭೆ ನಡೆಸಿದ್ದಾರೆ.
Vijaya Karnataka Web ರಜನಿಕಾಂತ್‌


ಅಧಿಕೃತ ರಾಜಕೀಯ ಪ್ರವೇಶದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಲುವಾಗಿ ಸೋಮವಾರ (ನ.30) 'ರಜನಿ ಮಕ್ಕಳ್ ಮಂಡ್ರಮ್‌'ನ ಪ್ರಮುಖರ ಜೊತೆ 'ತಲೈವಾ' ಸಭೆ ಸೇರುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಎಲ್ಲರಲ್ಲೂ ಕೌತುಕ ಮನೆ ಮಾಡಿತ್ತು. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ರಜನಿ ಘೋಷಣೆ ಮಾಡುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆ ಕುರಿತು ರಜನಿಕಾಂತ್‌ ಮಾಹಿತಿ ನೀಡಿದ್ದಾರೆ.

ಚೆನ್ನೈನಲ್ಲಿ ಸೋಮವಾರ ನಡೆದ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಜನಿಕಾಂತ್‌, 'ರಜನಿ ಮಕ್ಕಳ್ ಮಂಡ್ರಮ್‌'ನ ಜಿಲ್ಲಾ ಕಾರ್ಯದರ್ಶಿಗಳು ತಮ್ಮ ಯೋಜನೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾನು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೆ ಬೆಂಬಲ ನೀಡುವುದಾಗಿ ತಿಳಿದಿದ್ದಾರೆ. ಶೀಘ್ರದಲ್ಲೇ ನಾನು ನನ್ನ ನಿರ್ಧಾರ ಪ್ರಕಟಿಸುತ್ತೇನೆ' ಎಂದಿದ್ದಾರೆ.

also read: ತಮಿಳುನಾಡು ಚುನಾವಣೆ: ರಜನಿಕಾಂತ್‌ಗೆ ಮೈತ್ರಿ ಆಹ್ವಾನ ನೀಡಿದ ಎಸ್‌ಎಂಕೆ ಶರತ್‌ ಕುಮಾರ್‌

ಆದಷ್ಟು ಬೇಗ ಪಾರ್ಟಿ ಘೋಷಣೆ ಮಾಡುವಂತೆ 'ರಜನಿ ಮಕ್ಕಳ್ ಮಂಡ್ರಮ್‌' ಪ್ರಮುಖರು ರಜನಿಗೆ ಒತ್ತಾಯಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ರಜನಿಯೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಬೇರೆ ಯಾವುದೇ ವ್ಯಕ್ತಿಗಳ ಹೆಸರನ್ನೂ ಘೋಷಿಸಬಾರದು ಎಂದು ಜಿಲ್ಲಾ ಕಾರ್ಯದರ್ಶಿಗಳೆಲ್ಲ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

also read: ರಜನಿಕಾಂತ್‌ ಆರೋಗ್ಯದ ಬಗ್ಗೆ ನಕಲಿ ಪತ್ರ ವೈರಲ್‌! ಆದರೆ ಅದರಲ್ಲಿ ಇರುವುದು ಅಸಲಿ ವಿಷಯ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌