ಆ್ಯಪ್ನಗರ

ಕೊನೆಗೂ ಬಹಿರಂಗವಾಯ್ತು 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೇಲರ್ ರಿಲೀಸ್ ಡೇಟ್‌!!

'ಅವನೇ ಶ್ರೀಮನ್ನಾರಾಯಣ' ಚಿತ್ರತಂಡದಿಂದ ಯಾವುದೇ ಅಪ್‌ಡೇಟ್ಸ್ ಸಿಗ್ತಾ ಇಲ್ಲ ಎಂದು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈಗ ಚಿತ್ರದ ಕುರಿತು ರಕ್ಷಿತ್ ದೊಡ್ಡ ಮಾಹಿತಿಯೊಂದನ್ನೇ ನೀಡಿದ್ದಾರೆ!

Vijaya Karnataka Web 23 Nov 2019, 6:59 pm
ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೇಲರ್ ಯಾವಾಗ ರಿಲೀಸ್‌ ಆಗಲಿದ ಎಂಬುದಕ್ಕೆ ಬ್ರೇಕ್ ಬಿದ್ದಿದೆ. ಈ ಬಗ್ಗೆ ಮಾಹತಿ ನೀಡುವುದಾಗಿ ರಕ್ಷಿತ್‌ ಇದ್ದಕ್ಕಿದ್ದಂತೆಯೇ ಸಂಜೆ ಅನೌನ್ಸ್ ಮಾಡಿದ್ದರು. 'ಸಂಜೆ 6 ಗಂಟೆಗೆ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಫಸ್ಟ್‌ಲುಕ್‌ ಮತ್ತು ಟ್ರೇಲರ್ ರಿಲೀಸ್‌ ದಿನಾಂಕವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ನಮ್ಮ ಮೇಲಿರಲಿ' ಎಂದಿದ್ದರು. ಹೇಳಿದಂತೆಯೇ ಅವರು ಸಂಜೆ ಅಧಿಕೃತ ಮಾಹಿತಿ ನೀಡಿದ್ದಾರೆ.
Vijaya Karnataka Web ರಕ್ಷಿತ್ (1)


ಹೌದು, ನವೆಂಬರ್ 28ಕ್ಕೆ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಒಂದು ಸುಂದರವಾದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ. 'ಟ್ರೇಲರ್‌ ಫೈನಲ್‌ ಕಟ್‌ ಆಗಿದೆ. ಎಲ್ಲಾಭಾಷೆಗಳಲ್ಲೂಏಕಕಾಲದಲ್ಲಿ ಟ್ರೇಲರ್‌ ರಿಲೀಸ್‌ ಮಾಡಬೇಕೆಂಬುದು ನಮ್ಮ ಆಸೆ. ಹಾಗಾಗಿ ಸಮಯ ಬೇಕಾಯಿತು. ಈಗ ಒಟ್ಟಿಗೆ ರಿಲೀಸ್‌ ಮಾಡಲು ಸಿದ್ಧರಾಗುತ್ತಿದ್ದೇವೆ' ಎಂದು ಈ ಹಿಂದೆಯೇ ರಕ್ಷಿತ್‌ ಹೇಳಿದ್ದರು.

ಈ ಚಿತ್ರವು ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್‌ ಆಗಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಡಿ.27ಕ್ಕೆ ಈ ಸಿನಿಮಾ ರಿಲೀಸ್ ಆಗುವುದು ಖಚಿತ. ಚಿತ್ರದಲ್ಲಿರಕ್ಷಿತ್‌ ಮತ್ತು ಡಕಾಯಿತರ ನಡುವಿನ ಕತೆ ಜತೆ ಲವ್‌ ಸ್ಟೋರಿಯೂ ಇದೆ. ರಕ್ಷಿತ್‌ ಮೊದಲ ಬಾರಿಗೆ ಭರ್ಜರಿ ಆ್ಯಕ್ಷನ್‌ ದೃಶ್ಯಗಳಲ್ಲಿನಟಿಸಿದ್ದಾರೆ. ಅಲ್ಲದೆ, ಪೊಲೀಸ್ ಅಧಿಕಾರಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಶಾನ್ವಿ ಶ್ರೀವಾಸ್ತವ ಚಿತ್ರದ ನಾಯಕಿಯಾದರೆ, ಅಚ್ಯುತ್‌ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್, ಅಶ್ವಿನ್‌ ಹಾಸನ್‌ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಎಚ್‌.ಕೆ. ಪ್ರಕಾಶ್ ಇದರ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ಅಜನೀಶ್‌ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕನಾಗಿ ಸಚಿನ್ ರವಿ ಈ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ. 'ಕಿರಿಕ್ ಪಾರ್ಟಿ' ನಂತರ ರಕ್ಷಿತ್ ಶೆಟ್ಟಿ ಮಾಡಿರುವ ಸಿನಿಮಾ ಇದಾಗಿರುವುದರಿಂದ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌