ಆ್ಯಪ್ನಗರ

ಮತ್ತೆ ಮುಖಾಮುಖಿ ಆಗಲಿದ್ದಾರೆ 'ಬಾಹುಬಲಿ' ಮತ್ತು ಬಲ್ಲಾಳದೇವ? ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್‌!

ನಟ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ 'ಬಾಹುಬಲಿ' ಸರಣಿಯ ಸಿನಿಮಾಗಳಲ್ಲಿ ಮಾಡಿದ ಮೋಡಿ ಸಾಮಾನ್ಯದ್ದಲ್ಲ. ಈ ಇಬ್ಬರು ಅಜಾನುಬಾಹು ಕಲಾವಿದರು ಆ ಸಿನಿಮಾಗೆ ಹೊಸ ಮೆರುಗನ್ನೇ ತಂದಿದ್ದರು.

Vijaya Karnataka Web 17 May 2020, 10:13 pm
'ಬಾಹುಬಲಿ' ಚಿತ್ರದಲ್ಲಿ ಎರಡು ಖಡಕ್ ಪಾತ್ರಗಳನ್ನು ಮಾಡಿದವರು ಪ್ರಭಾಸ್‌ ಮತ್ತು ರಾಣಾ ದಗ್ಗುಬಾಟಿ. 'ಬಾಹುಬಲಿ' ಪಾತ್ರದಲ್ಲಿ ಪ್ರಭಾಸ್‌ ಅಬ್ಬರಿಸಿದರೆ, ಬಲ್ಲಾಳದೇವನ ಪಾತ್ರದಲ್ಲಿ ಹೀರೋಗೆ ಸರಿಸಮಾನಾಗಿ ಮಿಂಚಿದವರು ರಾಣಾ ದಗ್ಗುಬಾಟಿ. ಮಾಡಿದ್ದು ಖಳ ಪಾತ್ರವಾದರೂ, ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದುಕೊಂಡರು ರಾಣಾ. ಈ ಸಿನಿಮಾದಿಂದಾಗಿ ಸಾಕಷ್ಟು ಜನಪ್ರಿಯತೆಯೂ ಸಿಕ್ಕಿತ್ತು. ಪ್ರಭಾಸ್‌-ರಾಣಾ ಕಾಂಬಿನೇಷನ್‌ ನೋಡುಗರಿಗೆ ಭರ್ಜರಿ ಮನರಂಜನೆ ಒದಗಿಸಿತ್ತು. ಅಷ್ಟಕ್ಕೂ ಈಗೇಕೆ ಆ ಸಿನಿಮಾ ಕುರಿತು ಮಾತು? ಅದಕ್ಕೆ ಕಾರಣ, ನಾಗ್‌ ಅಶ್ವಿನ್‌!
Vijaya Karnataka Web ಮತ್ತೆ ಮುಖಾಮುಖಿ ಆಗಲಿದ್ದಾರೆ ಬಾಹುಬಲಿ ಮತ್ತು ಬಲ್ಲಾಳದೇವ? ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್‌!


ಪ್ರಭಾಸ್‌ ಜೊತೆ ಮಹಾನಟಿ ನಿರ್ದೇಶಕ
'ಸಾಹೋ' ನಂತರ ನಟ ಪ್ರಭಾಸ್‌, ನಿರ್ದೇಶಕ ರಾಧಾಕೃಷ್ಣಕುಮಾರ್ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ ಅದರ ನಾಯಕಿ. ಇದು ಪ್ರಭಾಸ್ ನಟನೆಯ 20ನೇ ಸಿನಿಮಾ. ಕೊರೊನಾ ಕಿರಿಕಿರಿ ಇಲ್ಲದೇ ಇದ್ದರೆ ಈಗಾಗಲೇ ಶೂಟಿಂಗ್ ಮುಕ್ತಾಯವಾಗಿರಬೇಕಿತ್ತು. ಅದರ ನಡುವೆಯೇ 'ಮಹಾನಟಿ' ನಿರ್ದೇಶಕ ನಾಗ್ ಅಶ್ವಿನ್‌ ಜೊತೆ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ ಪ್ರಭಾಸ್. ಪ್ರತಿಷ್ಠಿತ ವೈಜಯಂತಿ ಮೂವೀಸ್‌ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ಸಿದ್ಧಗೊಳ್ಳಲಿದೆ. ಇದು ಪ್ರಭಾಸ್‌ ನಟನೆಯ 21ನೇ ಸಿನಿಮಾ.

ಪ್ರಭಾಸ್‌ಗೆ ಮತ್ತೊಮ್ಮೆ ರಾಣಾ ವಿಲನ್‌!
ಮೂಲಗಳ ಪ್ರಕಾರ, ನಾಗ್‌ ಅಶ್ವಿನ್ ನಿರ್ದೇಶನ ಮಾಡಲಿರುವ ಈ ಸಿನಿಮಾದಲ್ಲಿ ಪ್ರಭಾಸ್‌ ಎದುರು ಖಳನಾಗಿ ರಾಣಾ ನಟಿಸುವ ಸಾಧ್ಯತೆ ಇದೆಯಂತೆ! ಈ ಕುರಿತು ಈಗಾಗಲೇ ರಾಣಾ ತಂದೆ ಸುರೇಶ್‌ ಬಾಬು ಅವರ ಬಳಿ ನಾಗ್ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ, ಯಾವುದು ಅಧಿಕೃತಗೊಂಡಿಲ್ಲ. ಈ ಮಧ್ಯೆ, ಪ್ರಭಾಸ್‌ ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ, 'ಕಲಾವಿದರ ಆಯ್ಕೆ ಅಂತಿಮವಾಯ್ತೇ' ಎಂದು ನಾಗ್‌ಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ನಾಗ್ ಅಶ್ವಿನ್ ಉತ್ತರ ನೀಡಿದ್ದು, 'ಸ್ಕ್ರಿಪ್ಟ್ ಕೆಲಸಗಳು ಸಾಗುತ್ತಿವೆ. ಕೊರೊನಾದಿಂದಾಗಿ ಸ್ವಲ್ಪ ತಡವಾಗಿದೆ. ಆದರೆ, ಇದರಿಂದ ಸ್ಕ್ರಿಪ್ಟ್‌ ತಿದ್ದುಪಡಿಗೆ ಇನ್ನಷ್ಟು ಸಮಯಕ್ಕೆ ಸಿಕ್ಕಂತೆ ಆಗಿದೆ. ಪಾತ್ರವರ್ಗದ ಆಯ್ಕೆ ಮಾಡಬೇಕಿದೆ. ಆದರೆ, ಇದುವರೆಗೂ ಯಾರನ್ನೂ ಅಧಿಕೃತಗೊಳಿಸಿಲ್ಲ' ಎಂದಿದ್ದಾರೆ.

ರಾಣಾ ದಗ್ಗುಬಾಟಿ ಹೊಸ ಫೋಟೋ ನೋಡಿ ಮತ್ತೆ ಕಂಗಾಲಾದ ಅಭಿಮಾನಿಗಳು!

ಬಹುತೇಕ ಈ ಸಿನಿಮಾ 2021ರಲ್ಲಿ ಶುರುವಾಗುವ ಸಾಧ್ಯತೆಗಳಿವೆ. 'ಮಹಾನಟಿ'ಯಂತಹ ಹಿಟ್‌ ಸಿನಿಮಾ ನೀಡಿದ ನಿರ್ದೇಶಕ ಮತ್ತು 'ಬಾಹುಬಲಿ'ಯಂತಹ ಮೆಗಾ ಹಿಟ್ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡ ನಟ ಒಟ್ಟಿಗೆ ಸೇರಿರುವುದರಿಂದ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿದೆ. ಇದೀಗ ಈ ಕಾಂಬಿನೇಷನ್‌ಗೆ ರಾಣಾ ಕೂಡ ಕೈಜೋಡಿಸಿದರೆ, ಆ ನಿರೀಕ್ಷೆ ಡಬಲ್ ಆಗಲಿದೆ. ಇನ್ನು, ಇತ್ತೀಚೆಗಷ್ಟೇ ನಟ ರಾಣಾ ಅವರು ತಮ್ಮ ಪ್ರಿಯತಮೆ ಕುರಿತು ಮಾಹಿತಿ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌