ಆ್ಯಪ್ನಗರ

'ಭೀಷ್ಮ' ಸಕ್ಸಸ್; ರಶ್ಮಿಕಾ ಮಂದಣ್ಣ ಮಡಿಲಿಗೆ ಮತ್ತೊಂದು ಸಿನಿಮಾ ಆಫರ್‌!

ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಭೀಷ್ಮ' ಹಿಟ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ. ಮೊದಲ ಮೂರು ದಿನಕ್ಕೆ 30 ಕೋಟಿ ರೂ.ಗಳವರೆಗೆ ಕಲೆಕ್ಷನ್‌ ಮಾಡಿದೆ ಎಂಬ ಮಾಹಿತಿ ಇದೆ. ಮೊದಲ ಬಾರಿಗೆ ನಿತಿನ್ ಜೊತೆ ಅವರು ಕಾಣಿಸಿಕೊಂಡಿದ್ದು, ಈ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿದೆ. 2020ರಲ್ಲಿ ರಶ್ಮಿಕಾ ನೀಡುತ್ತಿರುವ ಎರಡನೇ ಹಿಟ್ ಇದು.

Vijaya Karnataka Web 26 Feb 2020, 8:22 am
ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಭೀಷ್ಮ' ಹಿಟ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ. ಮೊದಲ ಮೂರು ದಿನಕ್ಕೆ 30 ಕೋಟಿ ರೂ.ಗಳವರೆಗೆ ಕಲೆಕ್ಷನ್‌ ಮಾಡಿದೆ ಎಂಬ ಮಾಹಿತಿ ಇದೆ. ಮೊದಲ ಬಾರಿಗೆ ನಿತಿನ್ ಜೊತೆ ಅವರು ಕಾಣಿಸಿಕೊಂಡಿದ್ದು, ಈ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿದೆ. 2020ರಲ್ಲಿ ರಶ್ಮಿಕಾ ನೀಡುತ್ತಿರುವ ಎರಡನೇ ಹಿಟ್ ಇದು. ಈ ಹಿಂದೆ ಮಹೇಶ್ ಬಾಬು ಜೊತೆ ನಟಿಸಿದ್ದ 'ಸರಿಲೇರು ನೀಕೆವ್ವರು' ಮೆಗಾ ಹಿಟ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ. ಗಳಿಕೆ ಮಾಡಿದೆಯಂತೆ ಆ ಸಿನಿಮಾ. ಕನ್ನಡದಲ್ಲಿ ನಟಿಸಿರುವ 'ಪೊಗರು' ಹಾಗೂ ತಮಿಳಿನಲ್ಲಿ ನಟಿಸಿರುವ 'ಸುಲ್ತಾನ್‌' ಇದೇ ವರ್ಷ ರಿಲೀಸ್ ಆಗಲಿದ್ದು, ಅಲ್ಲಿಗೆ ವರ್ಷಪೂರ ಅವರ ಸಿನಿಮಾಗಳ ಝಲಕ್ ಇದ್ದೇ ಇರಲಿದೆ. ಹೀಗೆ ಬ್ಯಾಕ್ ಟು ಬ್ಯಾಕ್‌ ಹಿಟ್ ಸಿನಿಮಾಗಳನ್ನು ನೀಡುತ್ತಿರುವುದರಿಂದ ಅವರಿಗೆ
Vijaya Karnataka Web rashmika mandanna will be act in nani starrer shyam singha roy movie
'ಭೀಷ್ಮ' ಸಕ್ಸಸ್; ರಶ್ಮಿಕಾ ಮಂದಣ್ಣ ಮಡಿಲಿಗೆ ಮತ್ತೊಂದು ಸಿನಿಮಾ ಆಫರ್‌!

ಮತ್ತೊಂದಿಷ್ಟು ಹೊಸ ಅವಕಾಶಗಳು ಸಿಗುತ್ತಿವೆ. ಈಗ ಕೇಳಿಬಂದಿರುವ ಮಾಹಿತಿ ಪ್ರಕಾರ, ನಾನಿ ನಟಿಸಲಿರುವ ಹೊಸ ಸಿನಿಮಾಗೆ ಅವರಿಗೆ ಆಫರ್ ಬಂದಿದೆಯಂತೆ!


​ನಾನಿ ಈಗ 'ಶ್ಯಾಮ್ ಸಿಂಗ ರಾಯ್‌'

ನಾನಿ ನಟನೆಯಲ್ಲಿ ಹೊಸ ಸಿನಿಮಾವೊಂದು ಘೋಷಣೆ ಆಗಿದ್ದು, ಅದಕ್ಕೆ 'ಶ್ಯಾಮ್ ಸಿಂಗ ರಾಯ್‌' ಎಂದು ನಾಮಕರಣ ಮಾಡಲಾಗಿದೆಯಂತೆ. ಈ ಹಿಂದೆ ವಿಜಯ್‌ ದೇವರಕೊಂಡಗೆ 'ಟ್ಯಾಕ್ಸಿವಾಲಾ' ಸಿನಿಮಾ ಮಾಡಿದ್ದ ರಾಹುಲ್‌ ಸಂಕ್ರಿತ್ಯಾನ್‌ 'ಶ್ಯಾಮ್‌ ಸಿಂಘ ರಾಯ್‌'ಗೂ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ನಾನಿ ಹೀರೋ ಆಗಿ ನಟಿಸಲಿದ್ದಾರೆ. ಮೇ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ.


ತಮಿಳುನಾಡಿನಲ್ಲೂ ಟ್ರೋಲ್ ಆದ ರಶ್ಮಿಕಾ ಮಂದಣ್ಣ! ಕೊಡಗಿನ ಕುವರಿ ಮೇಲೆ ಯಾಕಿಷ್ಟು ಕೋಪ?

​ನಾನಿಗೆ ಮತ್ತೊಮ್ಮೆ ರಶ್ಮಿಕಾ ನಾಯಕಿ

ಈ 'ದೇವದಾಸ್‌' ಚಿತ್ರದಲ್ಲಿ ನಾನಿಗೆ ನಾಯಕಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂಥ ಯಶಸ್ಸೇನು ಕಾಣಲಿಲ್ಲ. ನಾಗಾರ್ಜುನ ಇದ್ದಾಗ್ಯೂ 'ದೇವದಾಸ್' ಹೀನಾಯ ಸೋಲು ಕಂಡಿತ್ತು. ಆದರೆ, ಇದೀಗ 'ಶ್ಯಾಮ್ ಸಿಂಗ ರಾಯ್‌'ಗೂ ರಶ್ಮಿಕಾರನ್ನೇ ನಾಯಕಿಯನ್ನಾಗಿ ಮಾಡಬೇಕು ಎಂಬ ಮಾತುಗಳು ಕೇಳಿಬಂದಿವೆ. ಸದ್ಯ ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. 'ಶ್ಯಾಮ್‌..'ನಲ್ಲಿ ನಟಿಸುತ್ತಾರಾ ಇಲ್ಲವಾ ಅನ್ನೋದು ಇನ್ನೂ ಕನ್ಫರ್ಮ್‌ ಆಗಿಲ್ಲ.


Photos: 'ಭೀಷ್ಮ' ಸಕ್ಸಸ್ ಖುಷಿಯಲ್ಲಿ ತೇಲುತ್ತಿದ್ದಾರೆ ರಶ್ಮಿಕಾ ಮಂದಣ್ಣ

​ಸಾಯಿ ಪಲ್ಲವಿಗೂ ಚಾನ್ಸ್

ಕನ್ನಡದಿಂದ ರಶ್ಮಿಕಾ ಹೇಗೆ ಟಾಲಿವುಡ್‌ನಲ್ಲಿ ಹವಾ ಕ್ರಿಯೆಟ್ ಮಾಡಿದ್ದಾರೋ, ಅದೇ ಥರ ಮಲಯಾಳಂ ಚಿತ್ರರಂಗದಿಂದ ಟಾಲಿವುಡ್‌ಗೆ ಬಂದು ಹವಾ ಸೃಷ್ಟಿಸಿದವರು ನಟಿ ಸಾಯಿ ಪಲ್ಲವಿ. ತೆಲುಗಿನಲ್ಲಿ ಅವರಿಗೆ ಸಿಕ್ಕಾಪಟ್ಟೆ ಅವಕಾಶಗಳಿವೆ. ಸದ್ಯ 'ಶ್ಯಾಮ್‌..'ಗಾಗಿ ಅವರನ್ನೂ ಸಂಪರ್ಕ ಮಾಡಲಾಗಿದೆಯಂತೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ರಶ್ಮಿಕಾ ಮತ್ತು ಸಾಯಿ ಪಲ್ಲವಿ ಮಾಡಲಿದ್ದಾರಾ ಅನ್ನೋದು ಸದ್ಯದ ಪ್ರಶ್ನೆ.

-----------------------------------

ಈ ಕೆಳಗಿನ ಪ್ರಶ್ನೆಗೆ ಸರಿಯಾದ ಉತ್ತರವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ

1. 'ಪ್ರಿನ್ಸ್' ಮಹೇಶ್ ಬಾಬು ಜೊತೆ ರಶ್ಮಿಕಾ ಮಂದಣ್ಣ ನಟಿಸಿದ ಸಿನಿಮಾದ ಹೆಸರೇನು?

Twitter-Rahul Sankrityan

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌