ಆ್ಯಪ್ನಗರ

'ಕ್ರೇಜಿ ಕ್ವೀನ್‌' ರಕ್ಷಿತಾ ಪ್ರೇಮ್‌ ಹುಟ್ಟುಹಬ್ಬಕ್ಕೆ ದರ್ಶನ್‌ & ರಮ್ಯಾ ಸ್ಪೆಷಲ್ ಶುಭಾಶಯಗಳು!

ಕನ್ನಡ ಚಿತ್ರರಂಗದ ಒಂದು ಕಾಲದ ಭಾರಿ ಬೇಡಿಕೆಯುಳ್ಳ ನಟಿ ಎಂದರೆ, ಅದು ರಕ್ಷಿತಾ ಪ್ರೇಮ್. ಅಭಿಮಾನಿಗಳಿಂದ ಅವರು 'ಕ್ರೇಜಿ ಕ್ವೀನ್‌' ಅಂತಲೇ ಕರೆಸಿಕೊಂಡವರು. ಇಂದು (ಮಾ.31) ಅವರಿಗೆ ಜನ್ಮದಿನದ ಸಂಭ್ರಮ. ಆ ಹಿನ್ನೆಲೆಯಲ್ಲಿ ಅವರಿಗೆ ದರ್ಶನ್ ಮತ್ತು ರಮ್ಯಾ ಶುಭಾಶಯ ತಿಳಿಸಿದ್ದಾರೆ.

Vijaya Karnataka Web 31 Mar 2021, 12:11 pm

ಹೈಲೈಟ್ಸ್‌:

  • 'ಕ್ರೇಜಿ ಕ್ವೀನ್' ರಕ್ಷಿತಾ ಪ್ರೇಮ್‌ಗೆ ಜನ್ಮದಿನದ ಸಂಭ್ರಮ
  • ರಕ್ಷಿತಾಗೆ ವಿಶೇಷವಾಗಿ ಶುಭಾಶಯ ತಿಳಿಸಿದ ದರ್ಶನ್‌
  • ರಕ್ಷಿತಾ ಹುಟ್ಟುಹಬ್ಬಕ್ಕೆ ರಮ್ಯಾ ಏನಂತ ವಿಶ್ ಮಾಡಿದ್ದಾರೆ ನೋಡಿ?
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ramya Darshan
ಸ್ಯಾಂಡಲ್‌ವುಡ್‌ನಲ್ಲಿ 'ಕ್ರೇಜಿ ಕ್ವೀನ್‌' ಎಂದೇ ಹೆಸರಾದವರು ನಟಿ ರಕ್ಷಿತಾ ಪ್ರೇಮ್. 2002ರಲ್ಲಿ 'ಪವರ್‌ ಸ್ಟಾರ್' ಪುನೀತ್ ರಾಜ್‌ಕುಮಾರ್ ಜೊತೆ 'ಅಪ್ಪು' ಸಿನಿಮಾದಿಂದ ಭರ್ಜರಿಯಾಗಿ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದವರು ನಟಿ ಅವರು. ಆನಂತರ ದಕ್ಷಿಣ ಭಾರತದಲ್ಲೇ ಭಾರಿ ಬೇಡಿಕೆಯ ನಟಿಯಾಗಿ ಮೆರೆದವರು ರಕ್ಷಿತಾ. ಇಂದು (ಮಾರ್ಚ್ 31) ರಕ್ಷಿತಾಗೆ ಜನ್ಮದಿನದ ಸಂಭ್ರಮ. ಈ ಬಾರಿ ಹುಟ್ಟುಹಬ್ಬ ಇನ್ನಷ್ಟು ವಿಶೇಷವಾಗಿರುವುದಕ್ಕೆ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಮತ್ತು ನಟಿ, ಮಾಜಿ ಸಂಸದೆ ರಮ್ಯಾ ಅವರ ಈ ಶುಭಾಶಯಗಳು ಕೂಡ ಕಾರಣ.
'ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ' ಎಂದ ಡಿ ಬಾಸ್‌
ದರ್ಶನ್ ಮತ್ತು ರಕ್ಷಿತಾ ಅವರದ್ದು ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಕಾಂಬಿನೇಷನ್‌ ಎಂದೇ ಹೆಸರುವಾಸಿ. ಅವರಿಬ್ಬರು ಒಟ್ಟಿಗೆ ಕಲಾಸಿಪಾಳ್ಯ, ಅಯ್ಯ, ಮಂಡ್ಯ, ಸುಂಟರಗಾಳಿ ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲೂ ಕಲಾಸಿಪಾಳ್ಯ ಸಿನಿಮಾ ಆ ಕಾಲಕ್ಕೆ ದಾಖಲೆ ಬರೆದಿತ್ತು. ಆಗಿನಿಂದಲೂ ಇಬ್ಬರ ನಡುವೆ ಒಳ್ಳೆಯ ಸ್ನೇಹ ಮನೆ ಮಾಡಿದೆ. ಈಗ ರಕ್ಷಿತಾ ಜನ್ಮದಿನಕ್ಕೆ ವಿಶೇಷವಾಗಿ ಡಿ ಬಾಸ್ ಶುಭಾಶಗಳನ್ನು ತಿಳಿಸಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು. ಪ್ರತಿವರ್ಷ ಜನ್ಮದಿನಗಳು ಬರುತ್ತವೆ, ಆದರೆ ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು 'ಕ್ರೇಜಿ ಕ್ವೀನ್' ರಕ್ಷಿತಾ ಪ್ರೇಮ್' ಎಂದು ಶುಭ ಕೋರಿದ್ದಾರೆ 'ಡಿ ಬಾಸ್' ದರ್ಶನ್‌.

ರಮ್ಯಾ ಕಡೆಯಿಂದ ಸ್ಪೆಷಲ್‌ ಶುಭಾಶಯ!
ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಸಿನಿಮಾದಿಂದ ರಕ್ಷಿತಾ ಎಂಟ್ರಿ ಕೊಟ್ಟರೆ, ಪುನೀತ್ ನಟನೆಯ 2ನೇ ಸಿನಿಮಾ 'ಅಭಿ'ಯಿಂದ ರಮ್ಯಾ, ನಟಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಈ ಇಬ್ಬರು ನಟಿಯರ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತಹ ಮಾತುಗಳು ಕೇಳಿಬಂದಿದ್ದವು. ಆದರೆ 'ತನನಂ ತನನಂ' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿ, ಎಲ್ಲರ ಗಮನಸೆಳೆದರು. ಈಗಲೂ ಅವರಿಬ್ಬರ ನಡುವೆ ಒಳ್ಳೆಯ ಒಡನಾಟ ಇದೆ. ಅದಕ್ಕೆ ರಕ್ಷಿತಾಗೆ ರಮ್ಯಾ ತಿಳಿಸಿರುವ ಈ ಶುಭಾಶಯವೇ ಸಾಕ್ಷಿ. 'ಹುಟ್ಟುಹಬ್ಬದ ಶುಭಾಶಯಗಳು ರಕ್ಷಿತಾ. ನನ್ನ ಸಿನಿಮಾ ಜರ್ನಿ ನೀನು ಇಲ್ಲದೇ ಪರಿಪೂರ್ಣವಾಗುವುದಿಲ್ಲ. ಅದು ತುಂಬ ಸಂತೋಷ ಮತ್ತು ಡ್ರಾಮಾಗಳಿಂದ ಕೂಡಿತ್ತು. ಯಾವಾಗಲೂ ನನ್ನ ಪ್ರೀತಿ ನಿನ್ನೆಡೆಗೆ ಇರಲಿದೆ..' ಎಂದು ಬಹಳ ಪ್ರೀತಿಯಿಂದಲೇ ರಕ್ಷಿತಾಗೆ ಜನ್ಮದಿನದ ಶುಭಾಶಯಗಳನ್ನು ರಮ್ಯಾ ತಿಳಿಸಿದ್ದಾರೆ.

ಫಾರ್ಮ್‌ಹೌಸ್‌ನಲ್ಲಿ ಪತಿ ಪ್ರೇಮ್, ಮಗ ಸೂರ್ಯ ಜೊತೆ ಸಂಕ್ರಾಂತಿ ಆಚರಿಸಿದ ನಟಿ ರಕ್ಷಿತಾ!

ನಿರ್ಮಾಪಕಿಯಾಗಿರುವ ರಕ್ಷಿತಾ
2002ರಲ್ಲಿ ಚಿತ್ರರಂಗಕ್ಕೆ ಕಾಲಿಡುವ ರಕ್ಷಿತಾ, ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುವುದು 2007ರವರೆಗೆ ಮಾತ್ರ. ಬರೀ ಐದು ವರ್ಷಗಳಲ್ಲಿ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಅವರು ನಟಿಸಿದ ಸಿನಿಮಾಗಳ ಸಂಖ್ಯೆ 28 ದಾಟುತ್ತದೆ. ಆ ಮಟ್ಟಿಗೆ ಅವರ ಜನಪ್ರಿಯತೆ ಇತ್ತು. 2007ರಲ್ಲಿ ಅವರು ನಟ/ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗುತ್ತಾರೆ. 'ಜೋಗಯ್ಯ', 'ಡಿಕೆ' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಅವರು, ಈಗ ಸಹೋದರ ರಾಣಾ ಮೊದಲ ಬಾರಿಗೆ ಹೀರೋ ಆಗಿರುವ 'ಏಕ್‌ ಲವ್ ಯಾ' ಸಿನಿಮಾಗೆ ಹಣ ಹಾಕಿದ್ದಾರೆ. ಪ್ರೇಮ್ ಇದರ ನಿರ್ದೇಶಕ. ಬಹಳ ದಿನಗಳ ನಂತರ ಈ ಸಿನಿಮಾದ ಹಾಡೊಂದರಲ್ಲಿ ರಕ್ಷಿತಾ ಕಾಣಿಸಿಕೊಂಡಿದ್ದಾರೆ.

ದರ್ಶನ್ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿ ಬಾಯ್ಬಿಟ್ಟ ನಟಿ ರಕ್ಷಿತಾ.! ಏನದು.?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌