ಆ್ಯಪ್ನಗರ

ರಾಕಿ ಭಾಯ್‌ ಭೇಟಿ ಮಾಡೋಕೆ ಫಿಲಿಫೈನ್ಸ್‌ನಿಂದ ಬಂದ ಅಭಿಮಾನಿ!

'ಕೆಜಿಎಫ್' ಚಿತ್ರದ ನಂತರ ನಟ ಯಶ್ ನ್ಯಾಷನಲ್ ಸ್ಟಾರ್ ಎನಿಸಿಕೊಂಡಿದ್ದರು. ಆದರೆ, ಅವರ ಖ್ಯಾತಿ ಭಾರತದಾಚೆಗೂ ವಿಸ್ತರಿಸಿದೆ. ಈ ಹಿಂದೆ ಅವರನ್ನು ಭೇಟಿ ಮಾಡೋಕೆ ಅಂತ ತಮಿಳುನಾಡು, ಆಂಧ್ರ ಪ್ರದೇಶ, ಕೇರಳದಿಂದ ಅಭಿಮಾನಿಗಳು ಬೆಂಗಳೂರಿಗೆ ಬರುತ್ತಿದ್ದರು. ಇದೀಗ ಅವರನ್ನು ಮೀಟ್ ಮಾಡುವ ಸಲುವಾಗಿ ಫಿಲಿಫೈನ್ಸ್‌ ದೇಶದಿಂದ ಅಭಿಮಾನಿಯೊಬ್ಬರು ಬೆಂಗಳೂರಿಗೆ ಬಂದು, ಯಶ್ ಮೀಟ್‌ ಮಾಡಿದ್ದಾರೆ. 'ಕೆಜಿಎಫ್' ಸಿನಿಮಾ ನೋಡಿ‌ ಸ್ಫೂರ್ತಿಗೊಂಡು ಯಶ್ ಅವರನ್ನು ಭೇಟಿಯಾಗಲು ಬೆಂಗಳೂರಿನಿಂದ 4622ಕಿ.ಮೀ. ದೂರದಲ್ಲಿರುವ ಪಿಲಿಫೈನ್ಸ್ ದೇಶದ ಪೀಟ್‌ ಅಶೋಕ್ ಜೊರ್ನಲ್‌ ಬಂದು ಯಶ್ ಅವರನ್ನ ಭೇಟಿ ಮಾಡಲು ಬಂದಿದ್ದರು. ಏರ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿರುವ ಪೆಟೆ ಅಶೋಕ್, ಯಶ್ ಅವರ ಸಿನಿಮಾಗಳನ್ನು ನೋಡಿ, ಅವ್ರ ಕೆಲಸಗಳನ್ನು ನೋಡಿ ಸ್ಫೂರ್ತಿಗೊಂಡಿದ್ದಾರಂತೆ. ಅದರಲ್ಲೂ 'ಕೆಜಿಎಫ್' ಸಿನಿಮಾ ನೋಡಿದ ಮೇಲೆ ಭೇಟಿಯಾಗೋ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು, ಯಶ್ ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಈ ಬಗ್ಗೆ ಫೇಸ್‌ಬುಕ್ ಮೂಲಕವೂ ಮಾಹಿತಿ ನೀಡಿದ್ದರು. ಇದೀಗ ಮಾಧ್ಯಮಗಳು ಮತ್ತು ಯಶ್ ಅಭಿಮಾನಿಗಳ ಸಂಘದ ಸಹಾಯದಿಂದ ಮಂಗಳವಾರ ತಾಜ್ ಹೊಟೆಲ್ ಆವರಣದಲ್ಲಿ ಯಶ್ ಭೇಟಿ ಮಾಡಿದ ಪೀಟ್ ಅಶೋಕ್, ಸಂತಸಗೊಂಡಿದ್ದಾರೆ. ಕೆಲ ಹೊತ್ತು ಯಶ್ ಜತೆ ಉಭಯ ಕುಶಲೋಪರಿ ಹಂಚಿಕೊಂಡಿದ್ದಾರೆ. ಅಲ್ಲದೆ, 'ಕೆಜಿಎಫ್ 2' ಚಿತ್ರವನ್ನು ಫಿಲಿಫೈನ್ಸ್ ದೇಶದಲ್ಲಿ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಊರಿನಿಂದ ತಂದಿದ್ದ ಸಿಹಿ ತಿನ್ನಿಸನ್ನು ನೆಚ್ಚಿನ ನಟನಿಗೆ ನೀಡಿ ಖುಷಿ ಹಂಚಿಕೊಂಡರು ಪೀಟ್‌ ಅಶೋಕ್‌.

Vijaya Karnataka Web 20 Nov 2019, 11:07 am

Vijaya Karnataka Web rocking star yash meet his philippines fan
ರಾಕಿ ಭಾಯ್‌ ಭೇಟಿ ಮಾಡೋಕೆ ಫಿಲಿಫೈನ್ಸ್‌ನಿಂದ ಬಂದ ಅಭಿಮಾನಿ!

ವಿದೇಶಿ ಅಭಿಮಾನಿಗೆ ಆತ್ಮೀಯ ಆಲಿಂಗನ ಮಾಡಿದ ಯಶ್‌

ಫಿಲಿಫೈನ್ಸ್‌ನಿಂದ ಆಗಮಿಸಿದ್ದ ಪೀಟ್‌ ಅಶೋಕ್‌ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಯಶ್‌, ಅವರನ್ನು ಪ್ರೀತಯಿಂದ ಅಪ್ಪಿಕೊಂಡರು.

ರಾಕಿಂಗ್ ಸ್ಟಾರ್ ಜತೆ ಸೆಲ್ಫಿ ತೆಗೆದುಕೊಂಡ ಪೀಟ್‌ ಅಶೋಕ್‌

ಸಾವಿರಾರು ಕಿ.ಮೀ. ದೂರದಿಂದ ಬಂದಿದ್ದ ಪೀಟ್ ಅಶೋಕ್‌, ಯಶ್ ಅವರನ್ನು ನೋಡುತ್ತಲೇ ಅವರು ಕಾಲಿಗೆರಗಿದರು. ನಂತರ ಯಶ್ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಕೆಜಿಎಫ್ ನೋಡಿ ಫ್ಯಾನ್‌ ಆದ ಫೀಟ್‌ ಅಶೋಕ್

ಯಶ್ ಅಭಿನಯದ 'ಕೆಜಿಎಫ್‌' ಚಿತ್ರವನ್ನು ನೋಡಿದ ಪೀಟ್ ಅಶೋಕ್‌, ಆನಂತರ ಯಶ್‌ಗೆ ದೊಡ್ಡ ಫ್ಯಾನ್ ಆದರು. ಕೊನೆಗೆ ಬೆಂಗಳೂರಿಗೆ ಬಂದು ಅವರನ್ನು ಮೀಟ್ ಮಾಡಿದರು. ಈ ವೇಳೆ ಉಭಯ ಕುಶಲೋಪರಿ ಮಾತನಾಡಿದರು.

'ಕೆಜಿಎಫ್‌ 2' ಮಾಹಿತಿ ಪಡೆದ ಅಭಿಮಾನಿ

ಯಶ್ ಅವರ ಮುಂದಿನ 'ಕೆಜಿಎಫ್‌ 2' ಚಿತ್ರದ ಬಗ್ಗೆ ಫೀಟ್‌ ಅಶೋಕ್ ಮಾಹಿತಿ ಪಡೆದುಕೊಂಡರು. ಅಲ್ಲದೆ, ಫಿಲಿಫೈನ್ಸ್‌ನಲ್ಲೂ ನಿಮಗೆ ಅಭಿಮಾನಿಗಳಿದ್ದಾರೆ. ಅಲ್ಲಿಯೂ ರಿಲೀಸ್ ಮಾಡುವಂತೆ ಕೇಳಿಕೊಂಡರು.

ಅಭಿಮಾನಿಯನ್ನು ಪ್ರೀತಿಯಿಂದ ಬೀಳ್ಕೊಟ್ಟ ಯಶ್‌

ದೂರದ ದೇಶದಿಂದ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿ, ಅವರಿಗೆ ಆತ್ಮೀಯವಾಗಿ ಯಶ್‌ ಬೀಳ್ಕೊಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌