ಆ್ಯಪ್ನಗರ

'ಕೆಜಿಎಫ್' ಸಿನಿ ಪ್ರಿಯರಿಗೆ ಸಂಭ್ರಮದ ಸುದ್ದಿ ಕೊಟ್ಟ ರಾಕಿಂಗ್ ಸ್ಟಾರ್ ಯಶ್

2017 ಮಾರ್ಚ್‌ನಿಂದ ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಸಿನಿಮಾದಲ್ಲಿ ಬಿಜಿಯಿದ್ದಾರೆ. ಈ ಸಿನಿಮಾ ಹಿಟ್ ಆದಮೇಲೆ ಇದರ ಸೀಕ್ವೇಲ್ ನೀಡೋದಿಕ್ಕೆ ರೆಡಿಯಾಗಿದ್ದಾರೆ. ಈಗ ಈ ಟೀಮ್‌ನಿಂದ ಹೊಸ ಸುದ್ದಿ ಹೊರ ಬಿದ್ದಿದೆ.

Vijaya Karnataka Web 4 Dec 2019, 3:22 pm
ಅಕ್ಟೋಬರ್ 3ರಂದು ಯಶ್‌ಗೆ ಗಂಡು ಮಗು ಜನನವಾಗಿತ್ತು. ಗಂಡು ಮಗುವಿನ ತಂದೆಯಾದ ನಂತರ, ಮಗಳು ಆಯ್ರಾ ಹುಟ್ಟುಹಬ್ಬದ ನಂತರದಲ್ಲಿ ಚಿತ್ರೀಕರಣಕ್ಕೆ ಮರಳಿದ್ದಾರೆ ಯಶ್.
Vijaya Karnataka Web rocking star yash to resume shoot for kgf chapter 2
'ಕೆಜಿಎಫ್' ಸಿನಿ ಪ್ರಿಯರಿಗೆ ಸಂಭ್ರಮದ ಸುದ್ದಿ ಕೊಟ್ಟ ರಾಕಿಂಗ್ ಸ್ಟಾರ್ ಯಶ್


ಬುಧವಾರದಿಂದ 'ಕೆಜಿಎಫ್ 2' ಸಿನಿಮಾದ ಶೂಟಿಂಗ್‌ನಲ್ಲಿ ಯಶ್ ತೊಡಗಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಪ್ಲ್ಯಾನ್ ಆಗಿದ್ದ ಶೂಟಿಂಗ್‌ನಲ್ಲಿ ಯಶ್ ಪಾಲ್ಗೊಳ್ಳಲಿದ್ದಾರೆ. ತದನಂತರದಲ್ಲಿ ಕೆಜಿಎಫ್ ಚಿತ್ರತಂಡ ಬಳ್ಳಾರಿಯತ್ತ ಸಾಗಲಿದೆ. ಅಲ್ಲಿ ಚಿತ್ರದ ಮೇಜರ್ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ. 'ಕೆಜಿಎಫ್' ಸಿನಿಮಾ 2018ರಲ್ಲಿ ತೆರೆಕಂಡ ಮೊದಲ ಪ್ಲ್ಯಾನ್ ಇಂಡಿಯಾ ಚಿತ್ರವಾಗಿತ್ತು. ಹೊಂಬಾಳೆ ಫಿಲ್ಮ್ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗಿತ್ತು. ದೇಶದಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ಚಿತ್ರ ಇದಾಗಿತ್ತು. 'ಕೆಜಿಎಫ್ 2' ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿ ಬಾಲಿವುಡ್‌ನ ಖಳನಾಯಕ ಸಂಜಯ್ ದತ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದುದರಿಂದ ಇನ್ನಷ್ಟು ನಿರೀಕ್ಷೆ ಹೆಚ್ಚಿದೆ. 'ಅಧೀರ' ಪಾತ್ರವನ್ನು ಸಂಜಯ್ ದತ್ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರವೀನಾ ಟಂಡನ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದು, ಅಧಿಕೃತ ಘೋಷಣೆಯೊಂದು ಪ್ರೊಡಕ್ಷನ್ ಹೌಸ್‌ನಿಂದ ಹೊರಬೀಳಬೇಕಿದೆ.

ರಾಕಿಂಗ್ ಸ್ಟಾರ್ ಯಶ್‌ ಬಗ್ಗೆ ಫಿಲಿಪೈನ್ಸ್ ವ್ಯಕ್ತಿಯೊಬ್ಬ ಹೇಳಿದ್ದನ್ನು ಕೇಳಿದ್ರೆ ಅಚ್ಚರಿಪಡ್ತೀರಾ! ಏನದು?

ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್, ಅನಂತ್‌ನಾಗ್, ವಸಿಷ್ಠ ಸಿಂಹ, ಮಾಳವಿಕಾ ಅವಿನಾಶ್ , ರಾಮಚಂದ್ರ ರಾಜು ಮುಂತಾದವರು ನಟಿಸುತ್ತಿದ್ದಾರೆ. 2020ರಲ್ಲಿ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ. ಭುವನ್ ಗೌಡ ಈ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ, ಶಿವಕುಮಾರ್ ಈ ಸಿನಿಮಾದಲ್ಲಿ ಸೆಟ್ ಹಾಕಿದ್ದಾರೆ.
ಇಂದಿಗೂ 'ಆ ಸಿನಿಮಾ' ಬಗ್ಗೆ ಕೊರಗುತ್ತಿರುವ ರಾಧಿಕಾ ಕುಮಾರಸ್ವಾಮಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌