ಆ್ಯಪ್ನಗರ

ಟಾಲಿವುಡ್‌ ನಟ ರಾಮ್‌ ಚರಣ್‌ಗೆ ಕೊರೊನಾ ಪಾಸಿಟಿವ್‌! ಚಿರಂಜೀವಿ ಫ್ಯಾಮಿಲಿಗೆ ಈಗ ಸಂಕಟ

ಕೊರೊನಾ ವೈರಸ್‌ ಹಾವಳಿ ಇನ್ನೂ ನಿಂತಿಲ್ಲ. ಹೊಸ ವರ್ಷದ ನಿರೀಕ್ಷೆಯಲ್ಲಿದ್ದ ಟಾಲಿವುಡ್‌ನ ಸ್ಟಾರ್‌ ನಟ ರಾಮ್‌ ಚರಣ್‌ ಅವರಿಗೂ ಈ ಮಹಾಮಾರಿ ಕಾಟ ಕೊಡುತ್ತಿದೆ. ಆ ಬಗ್ಗೆ ಅವರು ತಮ್ಮೆಲ್ಲ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

Vijaya Karnataka Web 29 Dec 2020, 9:12 am
ಜನಪ್ರಿಯ ಟಾಲಿವುಡ್‌ ನಟ ರಾಮ್‌ ಚರಣ್‌ ಅವರಿಗೆ ಕೊರೊನಾ ವೈರಸ್‌ ಪಾಸಿಟಿವ್‌ ಆಗಿದೆ. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 'ನನಗೆ ಕೋವಿಡ್‌-19 ಪಾಸಿಟಿವ್‌ ವರದಿ ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲ. ಮನೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ಆದಷ್ಟು ಬೇಗ ಗುಣಮುಖನಾಗಿ ಮತ್ತಷ್ಟು ಸದೃಢನಾಗಿ ಬರುತ್ತೇನೆ' ಎಂಬ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದ್ದಾರೆ ರಾಮ್‌ ಚರಣ್‌.
Vijaya Karnataka Web ರಾಮ್‌ ಚರಣ್‌


'ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರೆಲ್ಲ ದಯವಿಟ್ಟು ಕೊರೊನಾ ವೈರಸ್‌ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ನೀಡುತ್ತೇನೆ' ಎಂದು ರಾಮ್‌ ಚರಣ್‌ ಟ್ವೀಟ್‌ ಮಾಡಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಸಾವಿರಾರು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇತ್ತೀಚೆಗೆ ಅವರು 'ಆರ್‌ಆರ್‌ಆರ್‌' ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಅಲ್ಲದೆ, ಕುಟುಂಬದವರ ಜೊತೆ ಸೇರಿ ಅದ್ದೂರಿಯಾಗಿ ಕ್ರಿಸ್‌ಮಸ್‌ ಹಬ್ಬ ಆಚರಿಸಿದ್ದರು. ಹಾಗಾಗಿ, 'ಮೆಗಾ ಸ್ಟಾರ್‌' ಚಿರಂಜೀವಿ ಕುಟುಂಬದ ಹಲವರು ಕೋವಿಡ್‌-19 ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ. ಒಂದಷ್ಟು ದಿನಗಳ ಹಿಂದೆ ಕಸಿನ್‌ ನಿಹಾರಿಕಾ ಕೊನಿಡೆಲಾ ಮದುವೆಯಲ್ಲೂ ರಾಮ್‌ ಚರಣ್‌ ಪಾಲ್ಗೊಂಡಿದ್ದರು.

also read: Photos: ಮೆಗಾ ಫ್ಯಾಮಿಲಿಯಲ್ಲಿ ಸಂಭ್ರಮದ ಕ್ರಿಸ್‌ಮಸ್‌ ಆಚರಣೆ! ಯಾರೆಲ್ಲ ಇದ್ದಾರೆ ನೋಡಿ!

'ಆಚಾರ್ಯ' ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಬೇಕಿದ್ದ ಚಿರಂಜೀವಿ ಅವರಿಗೂ ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಅದು ತಪ್ಪು ವರದಿಯಿಂದ ಆದ ಪ್ರಮಾದ ಎಂದು ಸ್ವತಃ 'ಮೆಗಾ ಸ್ಟಾರ್‌' ಸ್ಪಷ್ಟಪಡಿಸಿದ್ದರು. ಆದರೆ ಈಗ ರಾಮ್‌ ಚರಣ್‌ಗೆ ಪಾಸಿಟಿವ್‌ ಆಗಿರುವುದರಿಂದ ಅವರ ತಂದೆ ಚಿರಂಜೀವಿ ಕೂಡ ಪರೀಕ್ಷೆಗೆ ಒಳಗಾಗಬೇಕಿದೆ.

also read: ರಾಮ್‌ ಚರಣ್‌ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್‌! ಅಪ್ಪನ ಸಿನಿಮಾದಲ್ಲಿ ಮಗನಿಗೆ ಇಂಥ ಗತಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌