ಆ್ಯಪ್ನಗರ

ಅಭಿಮಾನಿಗಳ ತಲೆಕೆಡಿಸಿದ ನಟಿ ಸಮಂತಾ ಅಕ್ಕಿನೇನಿ ಪಾರದರ್ಶಕ ಉಡುಗೆ

ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಕಾರ್ಯಕ್ರಮವೊಂದರಲ್ಲಿ ಹಾಕಿಕೊಂಡಿದ್ದ ಭಿನ್ನ ಶೈಲಿಯ ಡ್ರೆಸ್ ಎಲ್ಲರ ಗಮನಸೆಳೆದಿದೆ. "ಜೋನಾಥನ್ ಸಿಮ್‍ಕಾಯ್ ಡ್ರೆಸ್" ನೋಡಿದ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಈ ಹಿಂದೆಂದೂ ಸಮಂತಾ ಈ ರೀತಿಯ ಡ್ರೆಸ್‌ನಲ್ಲಿ, ಇಷ್ಟೊಂದು ಗ್ಲಾಮರಸ್ ಆಗಿ ಕಾಣಿಸಿಕೊಂಡಿರಲಿಲ್ಲ.

Vijaya Karnataka Web 13 Jan 2020, 4:55 pm
ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಕಾರ್ಯಕ್ರಮವೊಂದರಲ್ಲಿ ಹಾಕಿಕೊಂಡಿದ್ದ ಭಿನ್ನ ಶೈಲಿಯ ಡ್ರೆಸ್ ಎಲ್ಲರ ಗಮನಸೆಳೆದಿದೆ. "ಜೋನಾಥನ್ ಸಿಮ್‍ಕಾಯ್ ಡ್ರೆಸ್" ನೋಡಿದ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಈ ಹಿಂದೆಂದೂ ಸಮಂತಾ ಈ ರೀತಿಯ ಡ್ರೆಸ್‌ನಲ್ಲಿ, ಇಷ್ಟೊಂದು ಗ್ಲಾಮರಸ್ ಆಗಿ ಕಾಣಿಸಿಕೊಂಡಿರಲಿಲ್ಲ.
Vijaya Karnataka Web samantha akkineni mesmerizing with lacy jonathan simkhai dress
ಅಭಿಮಾನಿಗಳ ತಲೆಕೆಡಿಸಿದ ನಟಿ ಸಮಂತಾ ಅಕ್ಕಿನೇನಿ ಪಾರದರ್ಶಕ ಉಡುಗೆ


ಸಮಂತಾ ಅಕ್ಕಿನೇನಿ ಸದ್ಯಕ್ಕೆ ಪ್ರೊಫೆಷನಲ್ ಹಾಗೂ ಪರ್ಸನಲ್ ಲೈಫ್‌ನಲ್ಲಿ ಬಿಝಿಯಾಗಿದ್ದಾರೆ. ತಮ್ಮ ಪ್ರತಿಕ್ಷಣದ ಗೆಲುವನ್ನೂ ಸಮಂತಾ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಓ ಬೇಬಿ ಹಾಗೂ ಮಜಲಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ಈ ರೀತಿಯ ಡ್ರೆಸ್‌ನಲ್ಲಿ ಕಂಗೊಳಿಸಿದ್ದಾರೆ.

ಸದಾ ಕ್ಲಾಸಿಯಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಂತಾ ಈ ಸಲ ತಮ್ಮ ವರಸೆಯನ್ನು ಬದಲಾಯಿಸಿದ್ದಾರೆ. ಕಂಫೋರ್ಟ್ ಝೋನ್‌ನಲ್ಲಿರುತ್ತಿದ್ದ ಸಮಂತಾ ಈ ಸಲ ಅದನ್ನು ಬಿಟ್ಟು ಹೊರಬಂದಿದ್ದಾರೆ. ಈ ಡ್ರೆಸ್‍ನಲ್ಲಿ ತುಂಬಾ ಗಾಂಭೀರ್ಯವಾಗಿ ಆತ್ಮವಿಶ್ವಾಸದಿಂದ ಕಾಣಿಸಿದ್ದಾರೆ.

ಗಮನಸೆಳೆಯುವ ಗಾಢವಾದ ಲಿಪ್‍ಸ್ಟಿಕ್, ಸರಳ ಓಲೆ

ಅತ್ಯಂತ ಸರಳವಾದ ಮೇಕಪ್, ಸದಾ ಪೋನಿಟೈಲ್‍ನಲ್ಲಿ ಕಾಣಿಸುತ್ತಿದ್ದ ಸಮಂತಾ ಈ ಸಲ ಕೂದಲನ್ನು ಇಳಿಬಿಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ತುಟಿಗೆ ಅಷ್ಟೇನು ಗಾಢವಲ್ಲದ ಲಿಪ್‍ಸ್ಟಿಕ್, ಸರಳವಾದ ಓಲೆ ಗಮನಸೆಳೆಯುತ್ತದೆ.

ನಟಿ ಸಮಂತಾ ಅಕ್ಕಿನೇನಿ ರಹಸ್ಯ ಟ್ಯಾಟೂ ಬಹಿರಂಗ!

ನಾನು ಪ್ರತಿ ಸಲವೂ ಲಕ್ಕಿ ಎನ್ನಿಸಿಕೊಳ್ಳುತ್ತೇನೆ

ಒಟ್ಟಿಗೆ ಎರಡು ಪ್ರಶಸ್ತಿಗಳಿಗೆ ಭಾಜನರಾಗಿರುವ ಸಮಂತಾ ಈ ಬಗ್ಗೆ ಇನ್‍ಸ್ಟಾಗ್ರಾಮ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. "ವಿಸ್ಮಯಗೊಳಿಸುವ ಸಿನಿಮಾಗಳ ಮೂಲಕ ನಾನು ಪ್ರತಿ ಸಲವೂ ಲಕ್ಕಿ ಎನ್ನಿಸಿಕೊಳ್ಳುತ್ತಿದ್ದೇನೆ. ನನ್ನ ನಿರ್ದೇಶಕರು ನನ್ನನ್ನು ಇನ್ನಷ್ಟು ಬಳಸಿಕೊಂಡು ಉತ್ತಮ ಸಿನಿಮಾಗಳು ಮೂಡಿಬರುವಂತೆ ಆಗಲಿ. ನನ್ನಲ್ಲಿನ ಸಾಮರ್ಥ್ಯವನ್ನು ಹೊರತರಲಿ. ನಿಮ್ಮೆಲ್ಲರಿಗೂ ಅಂತಹದ್ದೇ ಒಂದು ಶಕ್ತಿ ಸಿಗಲಿ, ಲವ್ ಯೂ" ಎಂದಿದ್ದಾರೆ ಸಮಂತಾ.

'ತಾಳಿ ಕಟ್ಟೋ ಸೀನ್‍ ನೋಡಿ ನಿಮ್ಮ ಗಂಡ ಏನೂ ಅನ್ನಲ್ಲವೇ?'

ಸದ್ಯಕ್ಕೆ ತೆಲುಗಿನ ಜಾನು ಸಿನಿಮಾದಲ್ಲಿ ಸಮಂತಾ ಬಿಝಿ

ಸದ್ಯಕ್ಕೆ ಸಮಂತಾ ತಮಿಳಿನ 96 ಸಿನಿಮಾದ ತೆಲುಗು ರೀಮೇಕ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಜಾನು ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಸೆಳೆದಿದೆ. ಶರ್ವಾನಂದ್ ಚಿತ್ರದ ಹೀರೋ. ತಮಿಳಿನ 96 ಸಿನಿಮಾದಲ್ಲಿ ತ್ರಿಷಾ ಜೊತೆಗೆ ವಿಜಯ್ ಸೇತುಪತಿ ಅಭಿನಯಿಸಿದ್ದಾರೆ.

ಈ ಹಿಂದೊಮ್ಮೆ ಟ್ರೋಲ್ ಆಗಿದ್ದ ಸಮಂತಾ ಅಕ್ಕಿನೇನಿ

ಕೊರಿಯನ್ ಸಿನಿಮಾ 'ಮಿಸ್ ಗ್ರ್ಯಾನಿ' ರೀಮೇಕ್ ಓಹ್ ಬೇಬಿ. ಈ ಚಿತ್ರದ ಕಟೌಟ್‌ಗಾಗಿ ಸಮಂತಾ ಸಖತ್ ಟ್ರೋಲ್ ಆಗಿದ್ದರು. "ನನ್ನ ಸ್ನೇಹಿತನೊಬ್ಬ ಈ ಕಟೌಟನ್ನು ಜಿಮ್ ಜಾಹೀರಾತಿಗಾಗಿ ಬಳಸುತ್ತಿದ್ದಾನೆ. ಗ್ರಾಫಿಕ್ಸ್‌ನಲ್ಲಿ ಜಿಮ್ ಬಾಡಿ ಕಾಣಿಸುವಂತೆ ಮಾಡಿ ನಿಮ್ಮ ಅಭಿಮಾನಿಯಾದ ಅವ ನಮ್ಮ ಊರಿನಲ್ಲಿ ಜಿಮ್ ನಡೆಸುತ್ತಿದ್ದಾನೆ. ನೀವೇನಂತೀರ" ಎಂದು ಕಾಮೆಂಟ್ ಮಾಡಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌