ಆ್ಯಪ್ನಗರ

ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾಗೆ ವರ ಸಿಕ್ಕಾಗ; ಈಗ ಪೂರ್ತಿ ಕಥೆ ಹೇಳಿದ ನಟಿ!

ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಅವರು ಇತ್ತೀಚಿನ ದಿನಗಳಲ್ಲಿ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ 'ವರ' ಸಿಕ್ಕಿದ್ದರ ಬಗ್ಗೆಯೂ ಅವರು ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಆ ವರದ ಬಗ್ಗೆ ಸಂಪೂರ್ಣ ಕಥೆ ಹೇಳಿದ್ದಾರೆ. ಏನದು?

Vijaya Karnataka Web 14 May 2020, 10:10 am
ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಲಾಕ್ ಡೌನ್‌ನಲ್ಲಿ ಬರವಣಿಗೆ ಶುರು ಮಾಡಿದಾರೆ. ಅವರ ಬ್ಲಾಗ್‌ನಲ್ಲಿ ಅವರ ಜೀವನದಲ್ಲಾದ ಘಟನೆಗಳು, ಆಸಕ್ತಿಕರ ವಿಚಾರಗಳು, ಅವರಿಗಿರುವ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿಯಲ್ಲಿ ಈಗ 'ವರ'ದ ಬಗ್ಗೆ ಮಾತನಾಡಿದ್ದಾರೆ. ಏನದು?
Vijaya Karnataka Web hj


ಹರಿಪ್ರಿಯಾ ಹೇಳಿದ್ದಿಷ್ಟು.......
'ಇವತ್ತು ಬೆಳಗ್ಗೆ ದೇವರಿಗೆ ಪೂಜೆ ಮಾಡಿ, ಪ್ರಾರ್ಥನೆ ಮಾಡಿ ಕಣ್ಣು ಬಿಟ್ಟು ನೋಡಿದರೆ ದೇವರ ತಲೆಯಿಂದ ಬಲಗಡೆಗೆ ಹೂ ಬಿತ್ತು. ಇನ್ನೂ ಅದೇ ಖುಷಿಯ ಹ್ಯಾಂಗೋವರ್‌ನಲ್ಲೇ ಇದೀನಿ. ಅದರ ಬಗ್ಗೆ ಯೋಚನೆ ಮಾಡುತ್ತ ಅದೆಷ್ಟೋ ವಿಷಯಗಳು ನೆನಪಿಗೆ ಬಂದವು. ದೇವರ ತಲೆಯಿಂದ ಹೂ ಬೀಳೋದಕ್ಕೆ ಕೆಲವರು ‘ವರ’ ಅಂತ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ರಾಜರಿಗೆ, ಋಷಿಗಳಿಗೆ, ಕೆಲವು ರಾಕ್ಷಸರಿಗೂ ದೇವರು ವರ ಕೊಡ್ತಿದ್ದ ಅಂತ ಕೇಳಿದೀನಿ, ಓದಿದೀನಿ ಕೂಡ. ಆದರೆ ಈಗಿನ ಕಾಲದಲ್ಲಿ ಹಾಗೆಲ್ಲ ವರ ಸಿಗೋಕೆ ಸಾಧ್ಯವೇ ಇಲ್ಲ. ಹೆಚ್ಚಂದ್ರೆ ಮದುವೆ ಹೆಣ್ಣಿಗೆ ವರ ಸಿಗಬಹುದು, ಅಷ್ಟೇ..

ಈ ದೇವರು ಅನ್ನೋದೇ ಒಂಥರ ನಂಬಿಕೆ ವಿಚಾರ. ನಂಬಿಕೆ ಇರೋರು ದೇವರು ಇದಾರೆ ಅಂತಾರೆ, ಇಲ್ಲದೋರು ದೇವರಿಲ್ಲ ಅಂತಾರೆ. ನನಗಂತೂ ಆ ಬಗ್ಗೆ ನಂಬಿಕೆ ಇದೆ. ನಮ್ಮದು ಸಂಪ್ರದಾಯಸ್ಥ ಕುಟುಂಬವಾದ್ದರಿಂದ ನಮ್ಮ ಮನೆಯಲ್ಲಿ ಆ ರೀತಿ ನಂಬಿಕೆಗಳು ಜಾಸ್ತಿ. ಹಾಗಾಗಿ ನಾವು ಎಲ್ಲ ಹಬ್ಬ, ಸಂಪ್ರದಾಯವನ್ನು ಪಾಲಿಸ್ತೀವಿ. ನನ್ನ ಪ್ರಕಾರ ಅಂಥ ನಂಬಿಕೆಗಳೆಲ್ಲ ತಪ್ಪಲ್ಲ. ಆದ್ರೆ ಮೂಢನಂಬಿಕೆ ಇರಬಾರದು.

ಕೆಲವರು ರಸ್ತೆಯಲ್ಲಿ ಹೋಗೋವಾಗ ಬೆಕ್ಕು ಅಡ್ಡ ಬಂದ್ರೆ ಗಾಡಿ ನಿಲ್ಸಿ, ಇಂಜಿನ್ ಆಫ್ ಮಾಡಿ, ಪುನಃ ಸ್ಟಾರ್ಟ್ ಮಾಡ್ಕೊಂಡು ಹೊರಡುತ್ತಾರೆ. ಇನ್ನು ಕೆಲವರು ಒಂದುಸಲ ರಿವರ್ಸ್ ತಗೊಂಡು, ಇನ್ನೊಂದು ಗಾಡಿ ಪಾಸ್ ಆಗೋವರೆಗೂ ಕಾದು ಹೊರಡ್ತಾರೆ. ಹಾಗೆ ದಾರಿಯಲ್ಲಿ ಹೋಗುತ್ತ ಅಳಿಲು ಎಡಕ್ಕೆ ಹೋದ್ರೆ ಕೆಟ್ಟದ್ದು, ಬಲಕ್ಕೆ ಹೋದ್ರೆ ಒಳ್ಳೇದು.. ಅಂತ ಇನ್ನೂ ಏನೇನೋ ಹೇಳ್ತಾರೆ. ಅದರ ಬಗ್ಗೆ ನನಗೆ ಜಾಸ್ತಿ ಗೊತ್ತಿಲ್ಲ. ಅವೆಲ್ಲ ಮೂಢನಂಬಿಕೆ ಇರ್ಬೋದಾ? ಅದೂ ಗೊತ್ತಿಲ್ಲ.

ನಟಿ ಹರಿಪ್ರಿಯಾ ಮದುವೆಯಂತೆ ನಿಜವೇ? ಈ ಬಗ್ಗೆ ಏನಂತಾರೆ 'ನೀರ್‌ದೋಸೆ' ಬೆಡಗಿ?

ದೇವರು ಇದ್ದಾನೆ ಎಂಬ ಬಗ್ಗೆ ನಂಗೆ ಅನುಭವ ಆಗಿದೆ. ದೇವಸ್ಥಾನಗಳಿಗೆ ಹೋದಾಗ ಅಲ್ಲೊಂದು ಪಾಸಿಟಿವ್ ಎನರ್ಜಿ ಫೀಲ್ ಆಗತ್ತೆ. ಏನೋ ಪಾಸಿಟಿವ್ ವೈಬ್ಸ್ ಇದ್ದಂಗೆ ಅನಿಸತ್ತೆ. ಅದು ದೇವಸ್ಥಾನ ಮಾತ್ರ ಅಲ್ಲ, ಯಾವುದೇ ದೇವರ ಕಾರ್ಯ ಮಾಡುವಾಗಲೂ ಗೊತ್ತಾಗುತ್ತೆ. ಮನೇಲಿ ಪೂಜೆ ಮಾಡೋವಾಗ ಕೂಡ. ಏನೂ ತೋಚದಿದ್ದಾಗ ಸುಮ್ಮನೆ ದೇವರನ್ನು ನೆನಪಿಸಿಕೊಂಡ್ರೂ ಸಾಕು, ಏನೋ ಒಂದು ನೆಮ್ಮದಿ ಸಿಗುತ್ತೆ. ನಿಮಗೂ ಹಾಗೇನಾ? ಹ್ಞಾ.. ಕೇಳೋದನ್ನು ಮರೆತೆ. ಅದೇ ವರ ಅಂದ್ನಲ್ವಾ? (ಹಹಹ.. ಮದ್ವೆ ಆಗೋ ಹುಡುಗ ಅಲ್ಲ). ಅದೇ ದೇವರ ತಲೆ ಮೇಲಿಂದ ಹೂ ಬಿತ್ತು ಅಂದ್ನಲ್ವಾ, ಅದರ ಬಗ್ಗೆ. ಬಲ ಬದಿಯಿಂದ ಬಿದ್ರೆ ಒಳ್ಳೇದು ಅಂತಾರೆ ಸರಿ. ಆದ್ರೆ ಅದು ನಮ್ಮ ಬಲ ಬದಿನಾ ಅಥವಾ ದೇವರ ಬಲ ಬದಿನಾ?'

'ಸೂಜಿದಾರ' ಹರಿಪ್ರಿಯಾಗೆ ವಾಣಿಜ್ಯ ಮಂಡಳಿಯಿಂದ ನೋಟಿಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌