ಆ್ಯಪ್ನಗರ

ಡ್ರಗ್‌ ಮಾಫಿಯಾ: ಸಿಸಿಬಿ ನೋಟಿಸ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಐಂದ್ರಿತಾ ರೇ & ದಿಗಂತ್‌ ಮಂಚಾಲೆ!

ಮಾದಕ ವಸ್ತು ಜಾಲದ ತನಿಖೆಯನ್ನು ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಅಚ್ಚರಿ ಎಂದರೆ ಈಗ ಸೆಲೆಬ್ರಿಟಿ ದಂಪತಿಗಳಾದ ದಿಗಂತ್‌ ಮತ್ತು ಐಂದ್ರಿತಾಗೆ ನೋಟಿಸ್‌ ನೀಡಲಾಗಿದ್ದು, ಆ ಬಗ್ಗೆ ಅವರಿಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

Vijaya Karnataka Web 15 Sep 2020, 6:20 pm
ಎಲ್ಲ ಆಯಾಮದಿಂದಲೂ ಡ್ರಗ್ಸ್‌ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ಸಂಶಯ ಮೂಡಿರುವ ಎಲ್ಲ ಸೆಲೆಬ್ರಿಟಿಗಳನ್ನೂ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ. ಈಗಾಗಲೇ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರನ್ನು ವಶಕ್ಕೆ ಪಡೆದು ಹಲವು ಪ್ರಶ್ನೆ ಕೇಳಲಾಗಿದೆ. ಈಗ ದಿಗಂತ್‌ ಮಂಚಾಲೆ ಮತ್ತು ಐಂದ್ರಿತಾ ರೇಗೆ ನೋಟಿಸ್‌ ನೀಡಲಾಗಿದೆ.
Vijaya Karnataka Web ಐಂದ್ರಿತಾ ರೇ ದಿಗಂತ್‌ ಮಂಚಾಲೆ


ನಟಿ ರಾಗಿಣಿ ದ್ವಿವೇದಿ ಅವರಿಗೆ ನೋಟಿಸ್‌ ನೀಡಿದ್ದಾಗ ಅವರು ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ನಂತರ ಸಿಸಿಬಿ ಅಧಿಕಾರಿಗಳು ನೇರವಾಗಿ ಅವರ ಮನೆ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದಿದ್ದರು. ಈಗ ಅಂಥದ್ದಕ್ಕೆಲ್ಲ ಆಸ್ಪದ ನೀಡದ ರೀತಿಯಲ್ಲಿ ಐಂದ್ರಿತಾ ರೇ ಮತ್ತು ದಿಗಂತ್‌ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಈ ಜೋಡಿ ಬರೆದುಕೊಂಡಿದೆ.

'ಸಿಸಿಬಿಯಿಂದ ದೂರವಾಣಿ ಮೂಲಕ ನಮಗೆ ನೋಟಿಸ್‌ ಬಂದಿದೆ. ನಾಳೆ (ಸೆ.16) ಬೆಳಗ್ಗೆ 11 ಗಂಟೆಗೆ ವಿಚಾರಣೆ ಇದೆ. ನಾವು ಅಲ್ಲಿಗೆ ಹಾಜರಾಗಿ ಸಿಸಿಬಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ' ಎಂದು ದಿಗಂತ್‌ ಮತ್ತು ಐಂದ್ರಿತಾ ಟ್ವೀಟ್‌ ಮಾಡಿದ್ದಾರೆ. ಡ್ರಗ್‌ ಪೆಡ್ಲರ್‌ ಎಂದು ಹೇಳಲಾದ ಶೇಕ್‌ ಫಾಸಿಲ್‌ ಎಂಬಾತನ ಜೊತೆ ಕೆಲವು ಪಾರ್ಟಿಗಳಲ್ಲಿ ಐಂದ್ರಿತಾ ಕಾಣಿಸಿಕೊಂಡಿದ್ದರು. ಅವರ ಫೋಟೋಗಳು ವೈರಲ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಿರುವ ಸಾಧ್ಯತೆ ಇದೆ.

also read: ಐಂದ್ರಿತಾ ರೇ ಜೊತೆ ಫಾಸಿಲ್‌ ನಂಟು? ಪರಿಚಯವೂ ಇಲ್ಲ; ಭೇಟಿಯೂ ಆಗಿಲ್ಲ ಎಂದ ನಟಿ

ಇಂದ್ರಜಿತ್‌ ಲಂಕೇಶ್‌ ಅವರು 10ರಿಂದ 15 ಜನರ ಹೆಸರನ್ನು ಸಿಸಿಬಿಗೆ ನೀಡಿರುವುದಾಗಿ ಈ ಹಿಂದೆ ಹೇಳಿದ್ದರು. ಅಲ್ಲದೆ, ವಿಚಾರಣೆ ವೇಳೆ ರಾಗಿಣಿ, ಸಂಜನಾ ಹಾಗೂ ಇತರೆ ಆರೋಪಿಗಳು ಇನ್ನೂ ಕೆಲವು ಸೆಲೆಬ್ರಿಟಿಗಳ ಹೆಸರನ್ನು ಬಾಯಿ ಬಿಟ್ಟಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇನ್ನೂ ಯಾವ್ಯಾವ ನಟ-ನಟಿಯರು ಸಿಸಿಬಿ ಬಲೆಗೆ ಬೀಳಲಿದ್ದಾರೆ ಎಂಬ ಕುತೂಹಲ ನಿರ್ಮಾಣ ಆಗಿದೆ.

also read: ನಟಿ ಐಂದ್ರಿತಾ ರೇ, ದಿಗಂತ್‌ಗೆ ಸಿಸಿಬಿಯಿಂದ ನೋಟೀಸ್‌; ವಿಚಾರಣೆಯಲ್ಲಿ ಭಾಗಿಯಾಗುವಂತೆ ಕರೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌