ಆ್ಯಪ್ನಗರ

ಮಿಲಿಟರಿ ಅಧಿಕಾರಿಯಾಗಿ ಮಿಂಚಲಿದ್ದಾರೆ ಶಿವಣ್ಣ! ಜನಪ್ರಿಯ ನಟಿಯೊಬ್ಬರು ಈ ಚಿತ್ರದ ನಾಯಕಿ!

'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಭಾನುವಾರವಷ್ಟೇ (ಜುಲೈ 12) ತಮ್ಮ 58ನೇ ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಹೊಸದೊಂದು ಸಿನಿಮಾಕ್ಕೂ ಅವರು ಚಾಲನೆ ನೀಡಿದ್ದಾರೆ.

Vijaya Karnataka Web 13 Jul 2020, 2:32 pm
ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬ್ಯುಸಿ ಇರುವ ನಟ ಯಾರು ಎಂದರೆ, ಮೊದಲು ಕೇಳಿಬರುವ ಹೆಸರು ಶಿವರಾಜ್‌ಕುಮಾರ್! ವರ್ಷಕ್ಕೆ ಅವರ ನಟನೆಯ ಮೂರ್ನಾಲ್ಕು ಸಿನಿಮಾಗಳಾದರೂ ತೆರೆಗೆ ಬರುವುದು ನಿಶ್ವಿತ. ಸದ್ಯ ಅವರ ಸಿನಿಮಾವೊಂದು ಲಾಂಚ್ ಆಗಿದೆ. ಭಾನುವಾರ (ಜುಲೈ 12) ಶಿವಣ್ಣ ಜನ್ಮದಿನ. ಅಂದೇ ಅವರ ಹೊಸ ಸಿನಿಮಾಕ್ಕೆ ಚಾಲನೆ ನೀಡಲಾಗಿದೆ. ಅಂದಹಾಗೆ, ಇದು ಯಾವ ಸಿನಿಮಾ? ಶೀರ್ಷಿಕೆ ಏನು? ನಾಯಕಿ ಯಾರು? ಇಲ್ಲಿದೆ ಪೂರ್ಣ ಮಾಹಿತಿ.
Vijaya Karnataka Web shivarajkumars new movie with director ram dhulipudi gets launched
ಮಿಲಿಟರಿ ಅಧಿಕಾರಿಯಾಗಿ ಮಿಂಚಲಿದ್ದಾರೆ ಶಿವಣ್ಣ! ಜನಪ್ರಿಯ ನಟಿಯೊಬ್ಬರು ಈ ಚಿತ್ರದ ನಾಯಕಿ!


ಶಿವರಾಜ್‌ಕುಮಾರ್ ನಟನೆಯ ಸಿನಿಮಾವೊಂದನ್ನು ತೆಲುಗಿನ ರಾಮ್ ಧುಲಿಪುಡಿ ನಿರ್ದೇಶನ ಮಾಡಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿ ಹೊರಬಿದ್ದಿತ್ತು. ಶಿವಣ್ಣ ಜನ್ಮದಿನದಂದು ಅದು ಅಧಿಕೃತಗೊಂಡಿದೆ. ಸ್ಟೈಲಿಶ್ ಆದ ಜೀಪೊಂದನ್ನು ಶಿವಣ್ಣ ಚಾಲನೆ ಮಾಡುತ್ತಿರುವಂತೆ ಇರುವ ಪೋಸ್ಟರ್‌ವೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸ್ವತಃ ಶಿವಣ್ಣ ಈ ಪೋಸ್ಟರ್ ರಿಲೀಸ್ ಮಾಡಿ, ಚಾಲನೆ ನೀಡಿದ್ದಾರೆ. ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಬಾಲಶ್ರೀರಾಮ್ ಸ್ಟುಡಿಯೋ ಬ್ಯಾನರ್‌ನಡಿಯಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಹಾಗೂ ನರಳ ಶ್ರೀನಿವಾಸ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಕುಡಿಪುಡಿ ವಿಜಯಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಎಮೋಷನಲ್ ಹಾಗೂ ಮಿಲಿಟರಿ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕಾಶ್ಮೀರ, ಚಿಕ್ಕಮಗಳೂರು, ಅಮೆರಿಕದಲ್ಲಿ ಚಿತ್ರೀಕರಣ ಮಾಡುವ ಉದ್ದೇಶವನ್ನು ನಿರ್ದೇಶಕ ರಾಮ್ ಹೊಂದಿದ್ದಾರೆ. ಹೊಸ ಚಿತ್ರಗಳ ಶೂಟಿಂಗ್ ಮಾಡುವುದಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದ ಕೂಡಲೇ ಚಿತ್ರೀಕರಣ ಆರಂಭಿಸುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಶ್ರೀಚರಣ್ ಪಕಾಲ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದು, ರವಿಕುಮಾರ್ ಸನಾ ಛಾಯಾಗ್ರಹಣದ ಹೊಣೆ ಹೊತ್ತುಕೊಂಡಿದ್ದಾರೆ. ಶಿವಣ್ಣಗೆ ನಾಯಕಿ ಆಗಿ ಯಾರು ನಟಿಸಲಿದ್ದಾರೆ ಎಂದು ಚಿತ್ರತಂಡ ಬಹಿರಂಗಪಡಿಸಿಲ್ಲವಾದರೂ, ಜನಪ್ರಿಯ ನಟಿಯೊಬ್ಬರು ಬಣ್ಣ ಹಚ್ಚುವುದು ಖಚಿತ ಎನ್ನಲಾಗುತ್ತಿದೆ.

ಶಿವರಾಜ್‌ಕುಮಾರ್‌ ಜನ್ಮದಿನ: 'ಹ್ಯಾಟ್ರಿಕ್‌ ಹೀರೋ' ಅಭಿಮಾನಿಗಳಿಗೆ ಸಿಗುತ್ತಿದೆ ಸಾಲು ಸಾಲು ಗಿಫ್ಟ್‌!

ಇನ್ನು, ಶಿವಣ್ಣ ಜನ್ಮದಿನದ ಪ್ರಯುಕ್ತ 'ಭಜರಂಗಿ 2' ಚಿತ್ರದ ಟೀಸರ್ ರಿಲೀಸ್ ಆಗಿದೆ. ಈಗಾಗಲೇ ನಿರೀಕ್ಷೆಗೂ ಮೀರಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುಟ್ಯೂಬ್‌ನಲ್ಲಿ ಲಕ್ಷಾಂತರ ವೀವ್ಸ್‌ ಸಿಕ್ಕಿದೆ. ಭಾವನಾ ಮೆನನ್, ಶ್ರುತಿ, 'ಭಜರಂಗಿ' ಲೋಕಿ, ಶಿವರಾಜ್‌ ಕೆ.ಆರ್‌. ಪೇಟೆ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಜಯಣ್ಣ-ಬೋಗೇಂದ್ರ ಇದರ ನಿರ್ಮಾಪಕರು. ನಟ 'ಡಾಲಿ' ಧನಂಜಯ ಕಾಂಬಿನೇಷನ್‌ನಲ್ಲಿ ಶಿವಣ್ಣ ಇನ್ನೊಂದು ಸಿನಿಮಾವನ್ನು ಮಾಡಲಿದ್ದು, ಅದಕ್ಕೂ ಚಾಲನೆ ಸಿಕ್ಕಿದೆ.

ನಟ ಶಿವರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌