ಆ್ಯಪ್ನಗರ

ಎಸ್‌ಪಿ ಬಾಲಸುಬ್ರಹ್ಮಣ್ಯಂ ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕು: ಪುತ್ರ ಚರಣ್‌ ಮಾಹಿತಿ!

ಲೆಜೆಂಡರಿ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅನಾರೋಗ್ಯಕ್ಕೆ ಒಳಗಾಗಿರುವುದು ಕೋಟ್ಯಂತರ ಅಭಿಮಾನಿಗಳಿಗೆ ಆತಂಕ ಉಂಟು ಮಾಡಿತ್ತು. ಎರಡನೇ ದಿನವೂ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ಪುತ್ರ ಚರಣ್‌ ಮಾಹಿತಿ ನೀಡಿದ್ದಾರೆ.

Vijaya Karnataka Web 15 Aug 2020, 10:37 pm
ಬಹುಭಾಷಾ ಗಾಯಕ ಎಸ್‌ಪಿ ಬಾಲಸುಬ್ರಹ್ಮಣಂ ಅವರಿಗೆ ಕೆಲವೇ ದಿನಗಳ ಹಿಂದೆ ಕೊರೊನಾ ವೈರಸ್‌ ಪಾಸಿಟಿವ್‌ ಆಗಿರುವುದು ಗೊತ್ತಾಯಿತು. ಸೋಶಿಯಲ್ ಮೀಡಿಯಾ ಮೂಲಕ ಸ್ವತಃ ಎಸ್‌ಪಿಬಿ ಅವರೇ ಅದರ ಬಗ್ಗೆ ಮಾಹಿತಿ ನೀಡಿದ್ದರು. ಅದರ ಬೆನ್ನಲ್ಲೇ ಇನ್ನೊಂದು ಬೇಸರದ ಸುದ್ದಿ ಕೇಳಿಬಂತು. ಆ.14ರಂದು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
Vijaya Karnataka Web sp balasubrahmanyam son spb charan says legendary singer is stable and need time to recover
ಎಸ್‌ಪಿ ಬಾಲಸುಬ್ರಹ್ಮಣ್ಯಂ ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕು: ಪುತ್ರ ಚರಣ್‌ ಮಾಹಿತಿ!


ದೇಶಾದ್ಯಂತ ಎಸ್‌ಪಿಬಿ ಅವರಿಗೆ ಅಭಿಮಾನಿಗಳು ಇದ್ದಾರೆ. ಲೆಜೆಂಡರಿ ಗಾಯಕ ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಆಗಾಗ ಮಾಹಿತಿ ತಿಳಿದುಕೊಳ್ಳಲು ಬಯಸಿದ್ದಾರೆ. ವೈದ್ಯರು ಹೇಳುವ ಪ್ರಕಾರ ಪರಿಸ್ಥಿತಿ ಗಂಭೀರ ಆಗಿದೆ ಎನ್ನಲಾಗಿತ್ತು. ಹಾಗಾಗಿ ಅಭಿಮಾನಿಗಳಲ್ಲಿ ಸಹಜವಾಗಿಯೇ ಆತಂಕ ಹೆಚ್ಚಿತ್ತು. ಈಗ ಅವರ ಪುತ್ರ ಎಸ್‌ಪಿಬಿ ಚರಣ್‌ ಅವರು ಅಪ್ಪನ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

'ಎಲ್ಲರಿಗೂ ಸಮಸ್ಕಾರ. ನಿನ್ನೆ ಅಪ್ಪನ ಸ್ಥಿತಿ ಚಿಂತಾಜನಕ ಆಗಿತ್ತು. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ನಿನ್ನೆಯಿಂದ ನನಗೆ ಸಾಕಷ್ಟ ಜನರು ಕರೆ ಮಾಡಿದ್ದಾರೆ. ಆದರೆ ಬಹುತೇಕ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಈ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದೇನೆ. ವೈದ್ಯರು ಈಗಲೂ ಪರಿಸ್ಥಿತಿ ಗಂಭೀರ ಆಗಿದೆ ಎನ್ನುತ್ತಿದ್ದಾರೆ. ಆದರೆ ಚಿಕಿತ್ಸೆಗೆ ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ' ಎಂದು ಹೇಳಿದ್ದಾರೆ ಚರಣ್‌.

also read: ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಪತ್ನಿ ಸಾವಿತ್ರಿ ಅವರಿಗೂ ಕೊರೊನಾ ಪಾಸಿಟಿವ್‌?

'ಅಪ್ಪನ ಶ್ವಾಸಕೋಶ ನಿನ್ನೆಗಿಂತಲೂ ಇಂದು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಅವರು ಗುಣಮುಖ ಆಗುತ್ತಾರೆ ಎಂಬ ಭರವಸೆ ವೈದ್ಯರಿಗೂ ಇದೆ. ಆದರೆ ಅದಕ್ಕೆ ತುಂಬ ಸಮಯ ಬೇಕು. ಒಂದೇ ದಿನಕ್ಕೆ ಆಗುವಂಥದ್ದಲ್ಲ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತಿದ್ದೇವೆ ಎಂಬುದು ನಿಜವಾದರೂ ಅವರು ಚೇತರಿಸಿಕೊಳ್ಳುವುದು ತಡ ಆಗಲಿದೆ. ನಿಮ್ಮ ಪ್ರಾರ್ಥನೆ ಮತ್ತ ಹಾರೈಕೆ ಹೀಗೆ ಮುಂದುವರಿಯಲಿ' ಎಂದಿದ್ದಾರೆ ಚರಣ್‌.

also read: ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಗಂಭೀರ; ಶೀಘ್ರ ಗುಣಮುಖರಾಗಲಿ ಎಂದ ರೆಹಮಾನ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌