ಆ್ಯಪ್ನಗರ

ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ಸುನೀಲ್‌ ಪುರಾಣಿಕ್‌ ನೇಮಕ

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಸ್ಥಾನಕ್ಕೆ ನಟ-ನಿರ್ದೇಶಕ ಸುನೀಲ್‌ ಪುರಾಣಿಕ್‌ ನೇಮಕಗೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಕಾರ್ಯ ನಿರ್ವಹಿಸಿದ್ದರು.

Vijaya Karnataka Web 1 Jan 2020, 8:57 pm
ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಸುನೀಲ್‌ ಪುರಾಣಿಕ್‌ ಹೆಸರು ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ. 50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ನಿರ್ದೇಶನ ಮಾಡಿರುವ ಹೆಚ್ಚುಗಾರಿಕೆ ಅವರದ್ದು. ಅವುಗಳಲ್ಲಿ ವಾರದ ಮತ್ತು ದೈನಿಂದಿನ ಧಾರಾವಾಹಿಗಳೂ ಸೇರಿವೆ. ಸಿನಿಮಾಗಳಲ್ಲಿಯೂ ಸುನೀಲ್‌ ಪುರಾಣಿಕ್‌ ನಟಿಸಿದ್ದಾರೆ.
Vijaya Karnataka Web sunil puranik appointed as president of karnataka chalanachitra academy
ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ಸುನೀಲ್‌ ಪುರಾಣಿಕ್‌ ನೇಮಕ


ಜ.2ರಂದು ಅಧಿಕಾರ ಸ್ವೀಕಾರ
ಹೊಸ ವರ್ಷದ ದಿನವಾದ ಜ.1ರ ಸಂಜೆ ನೇಮಕ ಪತ್ರ ಸುನೀಲ್‌ ಪುರಾಣಿಕ್‌ ಅವರ ಕೈ ಸೇರಿದೆ. ಈಗ ಅವರ ಎದುರು
ಹಲವು ಸವಾಲುಗಳಿದ್ದು, ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಗುರುವಾರ ಮಧ್ಯಾಹ್ನ ಅವರು ಅಧಿಕಾರ ಸ್ವೀಕರಿಸುತ್ತಿದ್ದಾರೆ. ಅಕಾಡೆಮಿಯಿಂದ ತುರ್ತಾಗಿ ಆಗಬೇಕಾಗಿರುವ ಹಲವು ಕೆಲಸಗಳ ಬಗ್ಗೆ ಸುನೀಲ್‌ ಗಮನ ಹರಿಸಲಿದ್ದಾರೆ. ಸದ್ಯದಲ್ಲೇ ಆರಂಭ ಆಗಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಯಶಸ್ವಿಯಾಗಿ ಜರುಗುವಂತೆ ಅವರು ನೋಡಿಕೊಳ್ಳಬೇಕಿದೆ.

ಚಿತ್ರೋತ್ಸವದ ಜೊತೆಗೆ ಇನ್ನಷ್ಟು ಜವಾಬ್ದಾರಿ
ಅಕಾಡೆಮಿ ವತಿಯಿಂದ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಸೂಕ್ತ ತಯಾರಿ ಆಗಬೇಕಿದೆ. ಈ ಬಗ್ಗೆ ವಿಜಯ ಕರ್ನಾಟಕ ವೆಬ್‌ಸೈಟ್‌ ಜತೆಗೆ ಸುನೀಲ್‌ ಪುರಾಣಿಕ್‌ ಮಾತನಾಡಿದ್ದಾರೆ. 'ಅಕಾಡೆಮಿಯ ಕಾರ್ಯಗಳನ್ನು ನಾಡಿನ ವಿವಿಧ ಭಾಗಗಳಿಗೆ ವಿಸ್ತರಿಸಬೇಕಿದೆ. ಹಿಂದಿನ ಅನೇಕ ಅಧ್ಯಕ್ಷರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವುಗಳನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ಚಿತ್ರರಂಗದ ಏಳಿಗೆಗಾಗಿ ಶ್ರಮಿಸಿ, ಈಗ ಸಂಕಷ್ಟದಲ್ಲಿರುವವರಿಗೆ ಸರ್ಕಾರದ ಕಡೆಯಿಂದ ಏನು ಸಹಾಯ ಮಾಡಬಹುದು ಎಂಬ ಬಗ್ಗೆಯೂ ಅಕಾಡೆಮಿ ಗಮನ ಹರಿಸಬೇಕಿದೆ' ಎಂದು ಸುನೀಲ್‌ ಪುರಾಣಿಕ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌