ಆ್ಯಪ್ನಗರ

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್‌ಗೆ ಗಾನ ನಮನ ಸಲ್ಲಿಸಿದ 'ತುರ್ತು ನಿರ್ಗಮನ' ಟೀಮ್

'ಎಕ್ಸ್‌ಕ್ಯೂಸ್‌ ಮೀ' ಖ್ಯಾತಿಯ ನಟ ಸುನೀಲ್‌ ರಾವ್‌ ಅವರು ಬಹಳ ದಿನಗಳ ನಂತರ ಪೂರ್ಣ ಪ್ರಮಾಣದಲ್ಲಿ ‘ತುರ್ತು ನಿರ್ಗಮನ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇನ್ನೇನು ಜೂನ್ 24ರಂದು ತೆರೆಗೆ ಬರಲು ಸಜ್ಜಾಗಿದೆ. ಇದೇ ವೇಳೆ ಚಿತ್ರತಂಡ 'ಪವರ್ ಸ್ಟಾರ್' ಪುನೀತ್‌ ರಾಜ್‌ಕುಮಾರ್‌ ಅವರಿಗೆ ಗಾನ ನಮನ ಸಲ್ಲಿಸಿ ಗಮನ ಸೆಳೆದಿದೆ. ಅಪ್ಪು ಅವರಿಗಾಗಿಯೇ 'ಈ ಜೀವ..' ಎಂಬ ಹಾಡನ್ನು ಕಂಪೋಸ್ ಮಾಡಿ, ರಿಲೀಸ್ ಮಾಡಿದೆ. ಈ ಹಾಡನ್ನು ಕನ್ನಡದ ಯುವ ಗಾಯಕರೇ ಹಾಡಿರುವುದು ವಿಶೇಷ. ಈ ಹಾಡಿನ ಕುರಿತು ಇಲ್ಲಿದೆ ಮಾಹಿತಿ.

Edited byಅವಿನಾಶ್ ಜಿ. ರಾಮ್ | Vijaya Karnataka Web 23 May 2022, 11:14 am

ಹೈಲೈಟ್ಸ್‌:

  • 'ಎಕ್ಸ್‌ಕ್ಯೂಸ್‌ ಮೀ' ಖ್ಯಾತಿಯ ನಟ ಸುನೀಲ್‌ ರಾವ್‌ ನಟನೆಯ 'ತುರ್ತು ನಿರ್ಗಮನ'
  • ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿದ ಚಿತ್ರತಂಡ
  • ಅಪ್ಪು ಅವರಿಗಾಗಿಯೇ ಈ ಜೀವ ಎಂಬ ಹಾಡು ರಿಲೀಸ್ ಮಾಡಿದ 'ತುರ್ತು ನಿರ್ಗಮನ' ಟೀಮ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web sunil raoh sudharani starrer thurthu nirgamana team releases a tribute song for puneeth rajkumar
'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್‌ಗೆ ಗಾನ ನಮನ ಸಲ್ಲಿಸಿದ 'ತುರ್ತು ನಿರ್ಗಮನ' ಟೀಮ್
ಹರೀಶ್‌ ಬಸವರಾಜ್‌
ಸ್ಯಾಂಡಲ್‌ವುಡ್‌ನ 'ಪವರ್‌ ಸ್ಟಾರ್‌' ಪುನೀತ್‌ ರಾಜ್‌ಕುಮಾರ್‌ಗೆ ತುರ್ತು ನಿರ್ಗಮನ ಸಿನಿಮಾ ತಂಡ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದೆ. ಅಪ್ಪು ಅವರನ್ನು ನೆನಪಿಸುವ ವಿಶೇಷ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಅದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಹೊಸ ಪ್ರಯತ್ನ
ಈ ಹಾಡಿನ ಬಗ್ಗೆ ವಿವರಿಸಿರುವ ನಿರ್ದೇಶಕ ಹೇಮಂತ್‌ ಕುಮಾರ್‌, 'ನಮ್ಮ ಸಿನಿಮಾದ ಟ್ರೇಲರ್‌ ಅನ್ನು ಅಪ್ಪು ಸರ್‌ ಬಿಡುಗಡೆ ಮಾಡಬೇಕಿತ್ತು. ಅವರಿಗೆ ಹೊಸ ರೀತಿಯ ಕಂಟೆಂಟ್‌ಗಳಿರುವ ಸಿನಿಮಾವೆಂದರೆ ಬಹಳ ಇಷ್ಟ. ನಮ್ಮ ಸಿನಿಮಾ ಬಗ್ಗೆಯೂ ಸುನೀಲ್‌ ಅವರ ಬಳಿ ಕೇಳಿ ಥ್ರಿಲ್‌ ಆಗಿದ್ದರಂತೆ. ಈ ಸಿನಿಮಾದಲ್ಲಿ ಅವರು ಹಾಡೊಂದನ್ನು ಹಾಡಿದ್ದರು. ಆ ಹಾಡನ್ನು ನಾವು ಬಿಡುಗಡೆ ಮಾಡಿದ್ದೇವೆ. ಆದರೆ ಇದರಲ್ಲಿ ಸಿನಿಮಾ ದೃಶ್ಯಗಳ ಬದಲಿಗೆ ವಿಭಿನ್ನವಾಗಿ ಚಿತ್ರೀಕರಿಸಿದ್ದೇವೆ. ಚರ್ಚ್‌ಗಳಲ್ಲಿ ಹಾಡುವ ಕಾಯರ್‌ ಗ್ರೂಪ್‌ ಮತ್ತು ಕೋರಲ್‌ ಸ್ಟೈಲ್‌ನಲ್ಲಿ 16 ಹಿನ್ನೆಲೆ ಗಾಯಕರನ್ನು ಜತೆಯಾಗಿಸಿ ಈ ಹಾಡು ಮಾಡಿದ್ದೇವೆ. ಇದು ಕನ್ನಡದಲ್ಲಿ ಮೊದಲ ಪ್ರಯತ್ನ' ಎಂದಿದ್ದಾರೆ.

ಡಾಸ್‌ ಮೂಡ್‌ ಸಂಗೀತ
'ಶರತ್‌ ಭಗವಾನ್‌ ಬರೆದಿರುವ ಈ ಹಾಡಿನ ಅರ್ಥಪೂರ್ಣ ಸಾಹಿತ್ಯಕ್ಕೆ ಡಾಸ್‌ ಮೂಡ್‌ ಅಷ್ಟೇ ಸೊಗಸಾಗಿ ಸಂಗೀತ ಸ್ಪರ್ಶ ಕೊಟ್ಟಿದ್ದು, ಈ ಹಾಡಿನಲ್ಲಿ ಅಪ್ಪು ಫೋಟೊ, ವಿಡಿಯೋ ಬದಲಿಗೆ ಚೇತನ್‌ ಎಸ್‌ ಮೂರ್ತಿ, ರಕ್ಷಿತ್‌ ಬಿ ಕೈಚಳಕದಿಂದ ಸೃಷ್ಟಿಸಿರುವ ಸ್ಕೆಚ್‌ಗಳನ್ನು ಬಳಸಿರುವುದು ವಿಶೇಷ. ತುರ್ತು ನಿರ್ಗಮನ ಹೊಸ ರೀತಿಯ ಸಿನಿಮಾ. ಮಾಮೂಲು ಸಿನಿಮಾಗಳಂತೆ ಇದರ ಕಥೆ ನಡೆಯುವುದಿಲ್ಲ. ಆದರೆ ಪ್ರೇಕ್ಷಕನಿಗೆ ಇದು ಅರ್ಥವಾಗುತ್ತದೆ. ಈ ಹೊಸ ಪ್ರಯತ್ನದೊಂದಿಗೆ ಇದೇ ಜೂನ್‌ 24ಕ್ಕೆ ನಾವು ಜನರ ಮುಂದೆ ಬರುತ್ತಿದ್ದೇವೆ’ ಎಂದು ನಿರ್ದೇಶಕರು ವಿವರಿಸಿದ್ದಾರೆ.

ಶ್ರೀಕೃಷ್ಣ ಪರಮಾತ್ಮನ ಪಾತ್ರದಲ್ಲಿ ಮಿಂಚಲಿದ್ದಾರೆ 'ಎಕ್ಸ್‌ಕ್ಯೂಸ್‌ ಮಿ' ನಟ ಸುನೀಲ್ ರಾವ್‌!
ಸಂಗೀತವೇ ಒಂದು ಪಾತ್ರ
ಈ ಹಾಡಿನ ವಿಶೇಷತೆಯ ಬಗ್ಗೆ ಹೇಳಿರುವ ಸಂಗೀತ ನಿರ್ದೇಶಕ ಡಾಸ್‌ ಮೋಡ್‌, 'ಹೇಮಂತ್‌ ನನಗೆ ಕಥೆ ಹೇಳಿದಾಗ ಇದೊಂದು ವಿಭಿನ್ನ ಶೈಲಿಯ ಭಾವನಾತ್ಮಕ ಸಿನಿಮಾವಾಗಲಿದೆ ಎಂದು ಅನಿಸಿತು. ಇದರಲ್ಲಿ ಸಂಗೀತ ಒಂದು ಪಾತ್ರವಾಗಿ ನನ್ನ ಕಣ್ಣಿಗೆ ಕಂಡಿತು. ಭಾರತೀಯ ಚಿತ್ರರಂಗದಲ್ಲಿ ಗಾಯಕರನ್ನು ಒಟ್ಟಿಗೆ ಸೇರಿಸಿ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡಲಾಗಿದೆ. ಆದರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೋರಲ್‌ ಕಂಪೋಸಿಶನ್‌ ಮಾಡಿದ್ದೇವೆ. ಎಲ್ಲಾ ಗಾಯಕರನ್ನು ಒಟ್ಟಿಗೆ ಸೇರಿಸಿ ಲೈವ್‌ ರೆಕಾರ್ಡಿಂಗ್‌ ಮಾಡಿದೆವು. ‘ಈ ಜೀವ’ ಎಂಬ ಹಾಡನ್ನು ನಿಖಿಲ್‌ ಪಾರ್ಥಸಾರಥಿ, ಪೂಜಾ ರಾವ್‌, ಮನೋಜ್‌ ಶರ್ಮ, ಅರುಂಧತಿ ಹೆಗ್ಡೆ, ಪ್ರತಿಮಾ ಭಟ್‌, ಚಿನ್ಮಯಿ ಚಂದ್ರಶೇಖರ್‌, ಅನುರಾಧಾ ವಿ. ಭಟ್‌, ಸುಪ್ರೀತ್‌ ವಿ. ಫಲ್ಗುಣ, ಗಣೇಶ್‌ ಕಾರಂತ್‌, ನಿಹಾಲ್ ವಿಜೇತ್‌, ಮೇಘನಾ ಕುಲಕರ್ಣಿ, ಅಶ್ವಿನ್‌ ಶರ್ಮ, ನಾಗರಂಜನಿ ರಘು, ಮಧ್ವೇಶ್‌ ಭಾರದ್ವಾಜ್‌, ಸಿದ್ಧಾರ್ಥ್‌ ಬೆಳ್ಮಣ್ಣು ಮತ್ತು ನಾನು ಹಾಡಿದ್ದೇವೆ’ ಎಂದಿದ್ದಾರೆ. ಈ ಸಿನಿಮಾದಲ್ಲಿಸುನೀಲ್‌ ರಾವ್‌, ನಾಗೇಂದ್ರ ಶಾ, ಹಿತಾ ಚಂದ್ರಶೇಖರ್‌, ಸಂಯುಕ್ತಾ ಹೆಗ್ಡೆ, ಅಚ್ಯುತ್‌ ಕುಮಾರ್‌, ಸುಧಾರಾಣಿ, ರಾಜ್‌ ಬಿ ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದಾರೆ.

ತುರ್ತು ನಿರ್ಗಮನ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿದ ಸುನೀಲ್ ರಾವ್
ಕೋಟ್:
ನಮ್ಮ 'ತುರ್ತು ನಿರ್ಗಮನ' ಸಿನಿಮಾದಿಂದ ಅಪ್ಪು ಅವರಿಗೆ ಸಲ್ಲಿಸಿರುವ ಗಾನ ನಮನವೇ ಈ ಹಾಡು. ಇದರಲ್ಲಿ ಅಪ್ಪು ಗುಣಗಾನ ಮಾಡುವ ಸಾಹಿತ್ಯವಿದೆ. ನಮ್ಮಂತಹ ಹೊಸ ರೀತಿಯ ಸಿನಿಮಾ ಮಾಡುವವರಿಗೆ ಅವರು ಸಪೋರ್ಟಿವ್‌ ಆಗಿದ್ದರು. ಅವರಿಗೆ ಈ ಹಾಡು ಅರ್ಪಣೆ.
- ಹೇಮಂತ್‌ ಕುಮಾರ್‌, ನಿರ್ದೇಶಕ

ನಾನು ಅಪ್ಪು ಅವರನ್ನು ಹೊಸಬರಿಗೆ ಪ್ರೋತ್ಸಾಹ ಕೊಡುವಂತಹ ಹಲವು ಕಾರ್ಯಕ್ರಮಗಳಲ್ಲಿ ನೋಡಿದ್ದೇನೆ. ‘ಈ ಜೀವ’ ಹಾಡಿನ ಮೂಲಕ ಅವರ ಆಶಯಗಳನ್ನು ಜನರಿಗೆ ತಿಳಿಸುವ ಜತೆಗೆ ಅವರ ಬದುಕು ನಮ್ಮಂತವರಿಗೆ ಸ್ಫೂರ್ತಿ ಎಂಬುದನ್ನು ತೋರಿಸಿದ್ದೇವೆ.
-ಡಾಸ್‌ ಮೋಡ್‌, ಸಂಗೀತ ನಿರ್ದೇಶಕ
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌