ಆ್ಯಪ್ನಗರ

ಕರುನಾಡ ಸಾಧಕನ ಸಿನಿಮಾವನ್ನು ಕನ್ನಡದಲ್ಲೇ ನೋಡುವ ಅವಕಾಶ! ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ತಮಿಳು ನಟ ಸೂರ್ಯ!

ಕನ್ನಡಕ್ಕೆ ಪರಭಾಷೆಯ ಸಿನಿಮಾಗಳು ಈಗಾಗಲೆ ಡಬ್ ಆಗಿ ತೆರೆಕಾಣುತ್ತಿವೆ. ಅವೆಲ್ಲ ಬಹುತೇಕ ಸ್ಟಾರ್‌ ಸಿನಿಮಾಗಳೇ ಅನ್ನೋದು ಗಮನಿಸತಕ್ಕ ಅಂಶ. ಸದ್ಯ ತಮಿಳು ನಟ ಸೂರ್ಯ ಅಭಿನಯದ 'ಸೂರರೈ ಪೊಟ್ಟರು' ಚಿತ್ರವು ಸಿದ್ಧವಾಗಿದ್ದು, ಫೆ.21ಕ್ಕೆ ಆ ಸಿನಿಮಾ ತೆರೆಗೆ ಬರುತ್ತಿದೆ. ಆದರೆ, ಇಲ್ಲೊಂದು ವಿಶೇಷತೆ ಇದೆ. ಇದು ಅಪ್ಪಟ ಕನ್ನಡದ ಸಾಧಕರೊಬ್ಬರ ಬದುಕನ್ನಾಧರಿಸಿದ ಸಿನಿಮಾ. ವಿಶೇಷವೆಂದರೆ, ಕನ್ನಡಿಗನ ಸಿನಿಮಾ ತಮಿಳಿನಲ್ಲಿ ಆಗಿರುವುದು. ಹಾಗಾದರೆ, ಆ ಸಾಧಕ ಯಾರು? ಕ್ಯಾಪ್ಟನ್ ಜಿ.ಆರ್. ಗೋಪಿನಾಥ್‌!

Vijaya Karnataka Web 5 Feb 2020, 12:05 pm
ಕನ್ನಡಕ್ಕೆ ಪರಭಾಷೆಯ ಸಿನಿಮಾಗಳು ಈಗಾಗಲೆ ಡಬ್ ಆಗಿ ತೆರೆಕಾಣುತ್ತಿವೆ. ಅವೆಲ್ಲ ಬಹುತೇಕ ಸ್ಟಾರ್‌ ಸಿನಿಮಾಗಳೇ ಅನ್ನೋದು ಗಮನಿಸತಕ್ಕ ಅಂಶ. ಸದ್ಯ ತಮಿಳು ನಟ ಸೂರ್ಯ ಅಭಿನಯದ 'ಸೂರರೈ ಪೊಟ್ಟರು' ಚಿತ್ರವು ಸಿದ್ಧವಾಗಿದ್ದು, ಫೆ.21ಕ್ಕೆ ಆ ಸಿನಿಮಾ ತೆರೆಗೆ ಬರುತ್ತಿದೆ. ಆದರೆ, ಇಲ್ಲೊಂದು ವಿಶೇಷತೆ ಇದೆ. ಇದು ಅಪ್ಪಟ ಕನ್ನಡದ ಸಾಧಕರೊಬ್ಬರ ಬದುಕನ್ನಾಧರಿಸಿದ ಸಿನಿಮಾ. ವಿಶೇಷವೆಂದರೆ, ಕನ್ನಡಿಗನ ಸಿನಿಮಾ ತಮಿಳಿನಲ್ಲಿ ಆಗಿರುವುದು. ಹಾಗಾದರೆ, ಆ ಸಾಧಕ ಯಾರು? ಕ್ಯಾಪ್ಟನ್ ಜಿ.ಆರ್. ಗೋಪಿನಾಥ್‌!
Vijaya Karnataka Web suriya starrer soorarai pottru movie will be dubbed in kannada
ಕರುನಾಡ ಸಾಧಕನ ಸಿನಿಮಾವನ್ನು ಕನ್ನಡದಲ್ಲೇ ನೋಡುವ ಅವಕಾಶ! ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ತಮಿಳು ನಟ ಸೂರ್ಯ!

​ತಮಿಳಿನಲ್ಲಿ ಕನ್ನಡಿಗನ ಸಿನಿಮಾ!

ಜಿ.ಆರ್. ಗೋಪಿನಾಥ್ ಹಾಸನದ ಗೊರೂರಿನವರು. ಭಾರತೀಯ ಸೇನೆಗೆ ಸೇರಿದ್ದ ಅವರು ನಂತರದ ದಿನಗಳಲ್ಲಿ ಕ್ಯಾಪ್ಟನ್ ಆಗುತ್ತಾರೆ. ಅಲ್ಲಿಂದ ಮರಳಿದ ಮೇಲೆ ವಿಮಾನಯಾನ ಕ್ಷೇತ್ರಕ್ಕೆ ಎಂಟ್ರಿ ನೀಡಿ, 'ಏರ್ ಡೆಕ್ಕನ್' ವಿಮಾನಯಾನ ಸಂಸ್ಥೆಯನ್ನು ಆರಂಭಿಸುತ್ತಾರೆ. ಕಡಿಮೆ ವೆಚ್ಚದಲ್ಲಿ ವಿಮಾನಯಾನ ಮಾಡುವ ಈ ಯೋಜನೆಯು ಅನೇಕರಿಗೆ ಸ್ಫೂರ್ತಿಯಾಗುತ್ತದೆ. ಸದ್ಯ ಇದೇ ಅಂಶವನ್ನು ಇಟ್ಟುಕೊಂಡು ಅದಕ್ಕೆ 'ಸೂರರೈ ಪೊಟ್ಟರು' ಮೂಲಕ ಸಿನಿಮಾರೂಪ ನೀಡಲಾಗಿದೆಯಂತೆ.

​ಗೋಪಿನಾಥ್‌ ಪಾತ್ರದಲ್ಲಿ ಸೂರ್ಯ

ಮೂಲಗಳ ಪ್ರಕಾರ, ಗೋಪಿನಾಥ್‌ ಪಾತ್ರವನ್ನು ಸೂರ್ಯ ನಿಭಾಯಿಸಿದ್ದಾರೆ. ಆದರೆ, ಚಿತ್ರದಲ್ಲಿ ಅವರ ಪಾತ್ರದ ಹೆಸರು ನೆಡುಮಾರನ್‌ ಎಂದಾಗಿದೆ. ಈ ಚಿತ್ರಕ್ಕೆ 'ಇರುದಿ ಸುಟ್ರು' ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡಿದ್ದಾರೆ. ಸ್ವತಃ ಸೂರ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Twitter-VISHNU SURYIA

​ಕನ್ನಡಕ್ಕೆ ಡಬ್‌ ಮಾಡುವಂತೆ ಅಭಿಯಾನ

ಈಗಾಗಲೇ 'ಸೈ ರಾ ನರಸಿಂಹ ರೆಡ್ಡಿ', 'ದಬಾಂಗ್ 3' ಥರದ ಬಿಗ್ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿವೆ. ಈಗ ಕನ್ನಡಿಗನ ಕಥೆ ಇರುವ ಸಿನಿಮಾವನ್ನು ಯಾಕೆ ಕನ್ನಡಕ್ಕೆ ಡಬ್ ಮಾಡಬಾರದು ಎಂಬ ಒತ್ತಾಯ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಚಿತ್ರತಂಡ, 'ಸೂರರೈ ಪೊಟ್ಟರು' ಚಿತ್ರವನ್ನು ಕನ್ನಡಕ್ಕೆ ಡಬ್‌ ಮಾಡುವುದಕ್ಕೆ ಮುಂದಾಗಿದೆ.

Twitter-Ramesh Bala

​ಕನ್ನಡದಲ್ಲಿ 'ಶೂರರ ಕೊಂಡಾಡು'

ತಮಿಳಿನಲ್ಲಿ ಈ ಸಿನಿಮಾದ ಶೀರ್ಷಿಕೆ 'ಸೂರರೈ ಪೊಟ್ಟರು' ಎಂದಿದೆ. ಅದರರ್ಥ, ಶೂರರನ್ನು ಕೊಂಡಾಡು ಎಂದು. ಹಾಗಾಗಿ, ಕನ್ನಡದಲ್ಲಿ 'ಶೂರರ ಕೊಂಡಾಡು' ಎಂದು ಶೀರ್ಷಿಕೆ ಇಡಲಾಗಿದೆ. ಇನ್ನು, ಚಿತ್ರವನ್ನು ಡಬ್‌ ಮಾಡುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಮಾಹಿತಿ ನೀಡಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಪೋಸ್ಟರ್‌ಗಳು ವೈರಲ್ ಆಗಿವೆ.

Twitter-2D Entertainment

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌