ಆ್ಯಪ್ನಗರ

ಸಿನಿಮಾದಲ್ಲಿನ ರೊಮ್ಯಾನ್ಸ್ ಬಗ್ಗೆ ಪತ್ನಿ ಪ್ರಶ್ನಿಸಿದ್ದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದ ನಟ ಕಾರ್ತಿ!

ತಮಿಳಿನ ಪ್ರಖ್ಯಾತ ನಟ ಕಾರ್ತಿ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪತ್ನಿ ರಂಜನಿ ಈ ದೃಶ್ಯಗಳನ್ನು ನೋಡಿ ಕಾರ್ತಿಗೆ ಪ್ರಶ್ನೆ ಕೇಳಿದ್ದರಂತೆ. ಈ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಕೂಡ ಸರಿಯಾಗಿ ಉತ್ತರಿಸಲಾಗದೆ ಅವರು ಸಿನಿಮಾ ನೋಡಬೇಡ ಎಂದು ಹೇಳಿದ್ದರಂತೆ. ಹಾಗಾದರೆ ಕಾರ್ತಿ ಪತ್ನಿ ರಂಜನಿ ಏನು ಪ್ರಶ್ನೆ ಮಾಡಿದ್ದರು?

THE TIMES OF INDIA NEWS SERVICE 22 Sep 2020, 9:49 pm
ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದಿರುವ ಸ್ಫುರದ್ರೂಪಿ ನಟ ಕಾರ್ತಿ ಅಲಿಯಾಸ್ ಕಾರ್ತಿಕ್ ಶಿವಕುಮಾರ್. ಸಿನಿಮಾಗಳಲ್ಲಿ ಅನೇಕ ನಟಿಯರ ಜೊತೆ ನಟಿಸಿರುವ ಕಾರ್ತಿಯ ನಿಜ ಜೀವನದ ಹೀರೋಯಿನ್ ಯಾರು? ಎಂಬ ಕುತೂಹಲ ಹಲವರಿಗೆ ಇರಬಹುದು.
Vijaya Karnataka Web tamil actor karthi love marriage life with ranjani
ಸಿನಿಮಾದಲ್ಲಿನ ರೊಮ್ಯಾನ್ಸ್ ಬಗ್ಗೆ ಪತ್ನಿ ಪ್ರಶ್ನಿಸಿದ್ದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದ ನಟ ಕಾರ್ತಿ!


ಕಾರ್ತಿ ಪತ್ನಿ ಯಾರು?
ಕಾರ್ತಿಗೆ ಮದುವೆಯಾಗಿ ಒಬ್ಬಳು ಮಗಳು ಕೂಡ ಇದ್ದಾಳೆ. ಕಾರ್ತಿಯದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಅನೇಕ ನಟಿಯರ ಜೊತೆ ಕಾರ್ತಿ ಹೆಸರು ಥಳುಕು ಹಾಕಿಕೊಂಡಿತ್ತು. ಆಗೆಲ್ಲ ಕಾರ್ತಿ ಇದೆಲ್ಲ ಸುಳ್ಳು ಎಂದಿದ್ದರು. ಅಪ್ಪ-ಅಮ್ಮ ಹೇಳಿದಂತೆ ಮೊದಲ ಬಾರಿಗೆ ರಂಜನಿ ಭೇಟಿಯಾಗಿ ಒಂದು ಗಂಟೆ ಮಾತನಾಡಿದ ನಂತರದಲ್ಲಿ ಇವಳೇ ನನ್ನ ಹೆಂಡ್ತಿ ಎಂದು ಕಾರ್ತಿ ಫಿಕ್ಸ್ ಆಗಿದ್ದರಂತೆ. ರಂಜನಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಮಾಡಿದ್ದಾರಂತೆ. ಅದು ಗೋಲ್ಡ್ ಮೆಡಲಿಸ್ಟ್. ಹಳ್ಳಿಯಲ್ಲಿ ಬೆಳೆದ ರಂಜನಿ ಜೊತೆ ಕಾರ್ತಿ ಮದುವೆ ನಡೆದಿತ್ತು. ಅಣ್ಣ ಸೂರ್ಯ ಬಹುಕಾಲದ ಗೆಳತಿ ಜ್ಯೋತಿಕಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಾಗಿ ತಮ್ಮನಾದರೂ ಪಾಲಕರು ಒಪ್ಪಿದ ಹುಡುಗಿಯನ್ನು ಮದುವೆಯಾಗುತ್ತಾನೋ ಇಲ್ಲವೋ ಎಂಬ ಮಾತು ಕೂಡ ಕೇಳಿಬಂದಿತ್ತು.

ವೈಭವದಿಂದ ನಡೆದಿತ್ತು ಕಾರ್ತಿ ಮದುವೆ
ಅಂತೂ 2011ರಲ್ಲಿ ಚೆನ್ನೈನಲ್ಲಿ ರಂಜನಿ ಜೊತೆ ಸಪ್ತಪದಿ ತುಳಿದು ಕಾರ್ತಿ ಅನೇಕ ಹುಡುಗಿಯರ ಮನಸ್ಸಿಗೆ ನೋವನ್ನುಂಟು ಮಾಡಿದ್ದರು. ಅದರ ಜೊತೆಗೆ ಕಾರ್ತಿ ಸಿನಿಮಾ ನಟಿಯೋರ್ವರನ್ನು ಪ್ರೀತಿ ಮಾಡುತ್ತಿದ್ದರು ಎಂಬುದು ಸುಳ್ಳಾಯ್ತು. ಅತ್ಯಂತ ವೈಭವದಿಂದ ಕಾರ್ತಿ ಮದುವೆ ನಡೆದಿತ್ತು. 4000 ಅಭಿಮಾನಿಗಳಿಗೆ ಕಾರ್ತಿ ಊಟದ ವ್ಯವಸ್ಥೆ ಮಾಡಿಸಿದ್ದರು. ಪ್ರಸ್ತುತ ಕಥೆಯ ಮೇಲೆ ಕಾರ್ತಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದರಿಂದ ಅವರ ಸಿನಿಮಾಗಳೆಲ್ಲವೂ ಜನರು ನೆನಪಿಡುವಂತಹವುಗಳಾಗಿವೆ.

ಹೀರೋಯಿನ್ ಮುಟ್ಟದೆ ರೊಮ್ಯಾನ್ಸ್ ಮಾಡಲಾಗೋದಿಲ್ಲವೇ? ಎಂದು ಪ್ರಶ್ನಿಸಿದ್ದ ಕಾರ್ತಿ ಪತ್ನಿ!
ಈಗಾಗಲೇ ಹಲವು ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಆದ ದೃಶ್ಯಗಳಲ್ಲಿ ಕಾರ್ತಿ ನಟಿಸಿದ್ದಾರೆ. ಇದರ ಬಗ್ಗೆ ಅವರ ಪತ್ನಿ ಕೂಡ ಒಮ್ಮೆ ಪ್ರಶ್ನೆ ಮಾಡಿದ್ದರಂತೆ. ಸಂದರ್ಶನದಲ್ಲಿ ಇದರ ಬಗ್ಗೆ ಕಾರ್ತಿ ಮಾತನಾಡಿದ್ದು, 'ರೊಮ್ಯಾನ್ಸ್ ಇಲ್ಲದ ಸಿನಿಮಾ ತೋರಿಸುವ ಸಿನಿಮಾಗಳು ಈಗ ಬರೋದು ಕಷ್ಟ. ನನ್ನ ಸಿನಿಮಾದಲ್ಲಿನ ರೊಮ್ಯಾನ್ಸ್ ದೃಶ್ಯಗಳು ನನ್ನ ಪತ್ನಿಗೆ ಮುಜುಗರವನ್ನುಂಟು ಮಾಡುತ್ತವೆ, ಬೇಸರ ತರಿಸುತ್ತವೆ. ಹಳೆಯ ಸಿನಿಮಾಗಳಲ್ಲಿ ಇರುವಂತೆ ಹೀರೋಯಿನ್ ಮುಟ್ಟದೆ ರೊಮ್ಯಾಂಟಿಕ್ ದೃಶ್ಯ ಮಾಡಲಾಗುವುದಿಲ್ಲವೇ ಎಂದು ರಂಜನಿ ಪ್ರಶ್ನೆ ಮಾಡಿದ್ದಳು. ಅವಳ ಕಾಳಜಿಯನ್ನು ನಾನು ಒಪ್ಪುತ್ತೇನೆ. ಅವಳ ಜಾಗದಲ್ಲಿ ನಾನಿದ್ದರೆ ನಾನು ಕೂಡ ಹೀಗೆ ಪ್ರತಿಕ್ರಿಯಿಸುತ್ತಿದ್ದೆ. ನಾವು ಬೇರೆ ಬೇರೆ ಲಿಂಗದವರು ಎಂದು ನಿಯಮ ಬೇರೆ ಆಗೋದಿಲ್ಲ. ಹೀಗಾಗಿ ನಾನು ಅವಳಿಗೆ ಸಿನಿಮಾ ನೋಡಬೇಡ ಅಥವಾ ಕಣ್ಣು ಮುಚ್ಚಿಕೋ ಎಂದು ಹೇಳಿಬಿಡ್ತೀನಿ' ಎಂದು ಕಾರ್ತಿ ಹೇಳಿದ್ದಾರೆ.

Also Read-ರಿಮೇಕ್ ಸಿನಿಮಾದಲ್ಲಿ ನಟಿಸಲಿದ್ದಾರಾ ಈ ಅಣ್ತಮ್ಮ? ಸೂರ್ಯ-ಕಾರ್ತಿ ಏನಂತಾರೆ?

ಪತ್ನಿ ಮೇಲಿನ ಪ್ರೀತಿ ಹೆಚ್ಚಾಯ್ತು ಎಂದ ಕಾರ್ತಿ!
'ಸಿನಿಮಾದಲ್ಲಿ ಇರುವ ರೊಮ್ಯಾಂಟಿಕ್ ದೃಶ್ಯಗಳು ನನಗೆ ತುಂಬ ಹತ್ತಿರ ಆಗಿವೆ. ತೆರೆ ಮೇಲೆ ಕಾಣಿಸುವ ಪ್ರೀತಿ, ಕೆಮಿಸ್ಟ್ರಿ ನನ್ನ ಪತ್ನಿ ಜೊತೆಗೆ ಇರುವಂತೆಯೇ ಇದೆ. ಮದುವೆ ನಂತರ ದಿನದಿಂದ ದಿನಕ್ಕೆ ನನ್ನ ಪತ್ನಿ ಮೇಲೆ ಇರುವ ಪ್ರೀತಿ ಹೆಚ್ಚುತ್ತಿದೆ' ಎಂದು ಕಾರ್ತಿ ಹೇಳಿದ್ದಾರೆ. ಹಳ್ಳಿಯಲ್ಲಿ ಜೀವನ ನಡೆಸಿದ್ದರೂ ಕೂಡ ರಂಜನಿಗೆ ನಗರ ಜೀವನದ ಬಗ್ಗೆ ಮಾಹಿತಿ ಇತ್ತಂತೆ.

Also Read-ಚಲನಚಿತ್ರ ಕಾರ್ಮಿಕರ ಸಂಕ್ಷೇಮ ನಿಧಿಗೆ ರೂ. 10 ಲಕ್ಷ ಪರಿಹಾರ ನೀಡಿದ ಕಾಲಿವುಡ್ ನಟ ಸೂರ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌