ಆ್ಯಪ್ನಗರ

'ಚಾಕಲೇಟ್ ಬಾಯ್' ನಟ ಸಿದ್ದಾರ್ಥ್ ಮದುವೆ ಮುರಿದುಬೀಳುವಂತೆ ಮಾಡಿದ ಬಾಲಿವುಡ್ ನಟಿ ಯಾರು?

ತಮಿಳು ಚಿತ್ರರಂಗದಲ್ಲಿ ಅನೇಕ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದ ನಟ ಸಿದ್ದಾರ್ಥ್ ಅವರು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದಾರೆ. ಆದರೆ ವೈಯಕ್ತಿಕ ಬದುಕನ್ನು ಇವರು ನಿಭಾಯಿಸಲಾಗಲಿಲ್ಲ. ಕಾರಣ ಏನು?

Indiatimes 17 Sep 2020, 9:32 pm
ತಮಿಳು ಚಿತ್ರರಂಗದ ಚಾಕ್‌ಲೇಟ್ ಬಾಯ್ ಎಂತಲೇ ಪ್ರಸಿದ್ಧಿ ಪಡೆದಿರುವ ನಟ ಸಿದ್ದಾರ್ಥ್ ಕಂಡರೆ ಅನೇಕರಿಗೆ ತುಂಬ ಇಷ್ಟ. ಅದರಲ್ಲೂ ಇವರ ಮಹಿಳಾ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಿಲ್ಲ. ಸಿದ್ದಾರ್ಥ್‌ ಸಿನಿಮಾ ನೋಡಿದ ಕೆಲ ಮಹಿಳಾ ಪ್ರೇಕ್ಷಕರು ಸಿದ್ದಾರ್ಥ್‌ನಂತಹ ಹುಡುಗ ಸಿಕ್ಕರೆ ಮದುವೆಯಾಗುವೆ ಎಂದು ಹೇಳುವುದುಂಟು. ಆದರೆ ಸಿದ್ದಾರ್ಥ್‌ಗೆ ಮೂರು ಬ್ರೇಕಪ್‌ ಆಗಿದೆ, ಒಂದು ಮದುವೆಯಾಗಿ ಅದು ವಿಚ್ಛೇದನದಿಂದ ಕೊನೆಗೊಂಡಿದೆ.
Vijaya Karnataka Web tamil actor siddharth marriage with siddharth and breakup with soha ali khan
'ಚಾಕಲೇಟ್ ಬಾಯ್' ನಟ ಸಿದ್ದಾರ್ಥ್ ಮದುವೆ ಮುರಿದುಬೀಳುವಂತೆ ಮಾಡಿದ ಬಾಲಿವುಡ್ ನಟಿ ಯಾರು?


ಸಿದ್ದಾರ್ಥ್‌ಗೆ ಸಂಬಂಧಗಳನ್ನು ನಿಭಾಯಿಸಲಾಗಲಿಲ್ಲ!
ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಚಿತ್ರಕಥೆ ಬರೆಯುವುದು, ಹಾಡುವುದು, ಸಿನಿಮಾ ನಿರ್ಮಾಣ ಮುಂತಾದ ಕೆಲಸಗಳ ಮೂಲಕ ಸಿದ್ದಾರ್ಥ್ ಗುರುತಿಸಿಕೊಂಡಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಪರಕಾಯ ಪ್ರವೇಶ ಮಾಡುವ ನಟ ಸಿದ್ದಾರ್ಥ್‌ಗೆ ಸಂಬಂಧಗಳನ್ನು ಅಷ್ಟು ಸುಲಭವಾಗಿ ನಿಭಾಯಿಸಲು ಬರಲಿಲ್ಲ.

ಸಿದ್ದು ಮೇಘಾ ವಿಚ್ಛೇದನಕ್ಕೆ ಕಾರಣ ಏನು?
ದೆಹಲಿ ಮೂಲದ ಬಹುಕಾಲದ ಗೆಳತಿ ಮೇಘಾಳ ಜೊತೆ 2003ರಲ್ಲಿ ಸಿದ್ದಾರ್ಥ್ ವಿವಾಹ ನಡೆಯಿತು. ಆದರೆ ಈ ಮದುವೆ 2007ರಲ್ಲಿ ವಿಚ್ಛೇಧನದ ಮೂಲಕ ಅಂತ್ಯವಾಯ್ತು. ಒಂದು ವರ್ಷಗಳ ಕಾಲ ಸಪರೇಟ್ ಆಗಿ ಬದುಕಿದ ನಂತರದಲ್ಲಿ ಇವರಿಬ್ಬರು ಅಧಿಕೃತವಾಗಿ ದೂರವಾದರು ಎನ್ನಲಾಗಿದೆ. ನಟಿ ಸೋಹಾ ಅಲಿ ಖಾನ್ ಜೊತೆ ಸಿದ್ದಾರ್ಥ್‌ಗಿದ್ದ ಸಂಬಂಧದಿಂದ ಮೇಘಾ ದೂರ ಹೋದರು ಎಂದು ಕೂಡ ಹೇಳಲಾಗುತ್ತದೆ. ವಿಚ್ಛೇದನ ಸಿಗುತ್ತಿದ್ದಂತೆ ಸಿದ್ದಾರ್ಥ್ ಕೂಡ ಇನ್ನೊಂದು ಹುಡುಗಿಯ ಹುಡುಕಾಟದಲ್ಲಿದ್ದರು ಎಂಬ ಗಾಸಿಪ್ ಹರಡಿತ್ತು.

Also Read-ಮತ್ತೆ ಸೀರಿಯಲ್‌ ತಂಡ ಸೇರಿಕೊಂಡ್ರಾ 'ಗಟ್ಟಿಮೇಳ' ಧಾರಾವಾಹಿ ನಟ ರಕ್ಷ್?

ಸಿದ್ದುನಿಂದ ಸೋಹಾ ಯಾಕೆ ದೂರ ಹೋದರು?
ಸೋಹಾ ಅಲಿ ಖಾನ್‌ಗೆ ಸಿದ್ದಾರ್ಥ್ ಸಾಕಷ್ಟು ಸಮಯ ನೀಡದೆ ಇರುವ ಕಾರಣಕ್ಕೆ ಅವರು ದೂರವಾದರು. ಸೋಹಾ ಜೊತೆಗಿನ ಸಂಬಂಧದ ಬಗ್ಗೆ ಸಿದ್ದಾರ್ಥ್ ಹೊರಗಡೆ ಏನೂ ಹೇಳಲು ರೆಡಿಯಿರಲಿಲ್ಲ, ಇದು ಸೋಹಾಗೆ ಇರಿಸಮುರಿಸುಂಟಾಗುತ್ತಿತ್ತು. ಬಾಲಿವುಡ್‌ನಿಂದ ಸಾಕಷ್ಟು ಆಫರ್ ಬರುತ್ತಿದ್ದರೂ ಕೂಡ ಸಿದ್ದು ಅದನ್ನೆಲ್ಲ ರಿಜೆಕ್ಟ್ ಮಾಡುತ್ತಿದ್ದರು. ಮುಂಬೈನಲ್ಲಿ ಇರೋದು ಸಿದ್ದಾರ್ಥ್‌ಗೆ ಕಷ್ಟವಾಗುತ್ತಿತ್ತು. ಪ್ರತಿಸಲ ಇವರಿಬ್ಬರ ಮಧ್ಯೆ ಜಗಳವಾದಾಗ ಸೋಹಾ ಕ್ಷಮೆ ಕೇಳಿ ಮೈತ್ರಿ ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
Also Read-ಜನಮೆಚ್ಚಿದ ಕನ್ನಡ ಧಾರಾವಾಹಿ ಲೋಕದ ರೊಮ್ಯಾಂಟಿಕ್ ಜೋಡಿಗಳಿವರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌